Headlines

ಕಿಮ್ಮನೆ ರತ್ನಾಕರ್ 74 ನೇ ಹುಟ್ಟುಹಬ್ಬ – ಕೇಕ್ ಕತ್ತರಿಸಿ  ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

ಕಿಮ್ಮನೆ ರತ್ನಾಕರ್ 74 ನೇ ಹುಟ್ಟುಹಬ್ಬ – ಕೇಕ್ ಕತ್ತರಿಸಿ  ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ: ಕರ್ನಾಟಕದ ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ರಾಜಕಾರಣಿ ಕಿಮ್ಮನೆ ರತ್ನಾಕರ್  ಗುರುವಾರ  ೭೪ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ಈ ಹಿನ್ನೆಲೆಯಲ್ಲಿ ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸಿ ಕಿಮ್ಮನೆ ರತ್ನಾಕರ್ ಅವರಿಗೆ ಆತ್ಮೀಯವಾಗಿ ಶುಭಾಶಯ ಕೋರಿದರು. ಈ ಕುರಿತು ಕೇಕ್ ಕತ್ತರಿಸಿದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಚಿವ ಮಧು ಬಂಗಾರಪ್ಪ,…

Read More

ಕೋಣಂದೂರು – ಕಾಳುಮೆಣಸು ವ್ಯಾಪಾರಿಗೆ ೫ ಲಕ್ಷ ರೂ. ವಂಚನೆ – ಪ್ರಕರಣ ದಾಖಲು

ಕೋಣಂದೂರಿನ ಕಾಳುಮೆಣಸು ವ್ಯಾಪಾರಿಗೆ ೫ ಲಕ್ಷ ರೂ. ವಂಚನೆ ಶಿವಮೊಗ್ಗ: ಕಾಳುಮೆಣಸು ಪೂರೈಸುವುದಾಗಿ ನಂಬಿಸಿ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಅಡಿಕೆ ಮಂಡಿಯ ಮಾಲೀಕರೊಬ್ಬರಿಗೆ ₹5 ಲಕ್ಷ ವಂಚನೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ವ್ಯಕ್ತಿಗಳ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಣಂದೂರಿನ ಬಸವನ ಬೀದಿಯಲ್ಲಿ ಅಡಿಕೆ ಮಂಡಿ ನಡೆಸುತ್ತಿರುವ ವ್ಯಕ್ತಿಯು ಕಳೆದ ಒಂದು ವರ್ಷದಿಂದ ಈ ಇಬ್ಬರು ಆರೋಪಿಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದವರು. ಜುಲೈ 8 ರಂದು ಆರೋಪಿಗಳು ಕಾಳುಮೆಣಸು…

Read More

ತೀರ್ಥಹಳ್ಳಿ ಗಾಂಜಾ ಮಾರಾಟ ಪ್ರಕರಣ – ಐವರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ತೀರ್ಥಹಳ್ಳಿ ಗಾಂಜಾ ಮಾರಾಟ ಪ್ರಕರಣ – ಐವರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮಾದಕ ವಸ್ತು ಗಾಂಜಾ  ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ₹25,000 ದಂಡ ವಿಧಿಸಿ ಆದೇಶಿಸಿದೆ. ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 6 ತಿಂಗಳು ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪು ನೀಡಿದೆ.2022ರ ಜುಲೈ 12ರಂದು ದಾಖಲಾಗಿದ್ದ ಪ್ರಕರಣದ ಕುರಿತಾಗಿ ಕೋರ್ಟ್ ಈ…

Read More

DCC ಬ್ಯಾಂಕ್ ಹಗರಣ – ಆರ್ ಎಂ ಮಂಜುನಾಥ್ ಗೌಡಗೆ ಜಾಮೀನು ಮಂಜೂರು

DCC ಬ್ಯಾಂಕ್ ಹಗರಣ – ಆರ್ ಎಂ ಮಂಜುನಾಥ್ ಗೌಡಗೆ ಜಾಮೀನು ಮಂಜೂರು ನಕಲಿ ಚಿನ್ನ ಅಡವಿಟ್ಟು 63 ಕೋಟಿ ರೂಪಾಯಿ ಸಾಲ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಗೌಡಗೆ  ನ್ಯಾಯಾಲಯ ಜಾಮೀನು ನೀಡಿದೆ. ಡಿಸಿಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಐ.ಡಿ. (ಜಾರಿ ನಿರ್ದೇಶನಾಲಯ) ವಶದಲ್ಲಿದ್ದ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ್ ಗೌಡ ಅವರಿಗೆ ಕೊನೆಗೂ ನ್ಯಾಯಾಲಯದ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನ…

Read More

ಸೋರುತಿದೆ ರಾಷ್ಟ್ರಕವಿ ಕುವೆಂಪು ಓದಿದ ಶಾಲೆ

ಸೋರುತಿದೆ ರಾಷ್ಟ್ರಕವಿ ಕುವೆಂಪು ಓದಿದ ಶಾಲೆ ತೀರ್ಥಹಳ್ಳಿ : ರಾಷ್ಟ್ರಕವಿ ಕುವೆಂಪು ಅವರು ಓದಿದ ಶಾಲೆ ಈಗ ನಿರ್ವಹಣೆ ಇಲ್ಲದೆ ಸೋರುತ್ತಿದೆ. ಶತಮಾನದ ಇತಿಹಾಸ ಇದ್ದಂತಹ ಶಾಲೆಯಲ್ಲಿ ಈಗ ಸಂಪೂರ್ಣ ನೀರಿನ ಹೊಳೆ ಹರಿಯುತ್ತಿದೆ. ಸರ್ಕಾರಿ ಶಾಲೆಗೆ ಇದೆಂತಹ ಅವಸ್ಥೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಅಂಚೆ ಕಛೇರಿ ಪಕ್ಕದಲ್ಲಿ ಇರುವ ಶತಮಾನದ ಇತಿಹಾಸ ಹೊಂದಿದ, ಅದರಲ್ಲೂ ರಾಷ್ಟ್ರ ಕವಿ ಕುವೆಂಪು ಅವರು ಓದಿದ್ದ ಶಾಲೆಯಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಮಳೆಗಾಲದಲ್ಲಿ ಸೋರುತ್ತಿದೆ. ಶಾಲೆಯಲ್ಲಿ…

Read More

ಆಟೋ ಮತ್ತು ಗೂಡ್ಸ್ ವಾಹನಗಳ ನಡುವೆ ಅಪಘಾತ !!

ಆಟೋ ಮತ್ತು ಗೂಡ್ಸ್ ವಾಹನಗಳ ನಡುವೆ ಅಪಘಾತ !! ತೀರ್ಥಹಳ್ಳಿ : ನಿಂತಿದ್ದ ಆಟೋವೊಂದಕ್ಕೆ ಸುಜುಕಿ ಕ್ಯಾರಿ ಶಾಮಿಯಾನ ವಾಹನವೊಂದು ಅತೀ ವೇಗವಾಗಿ ಬಂದು ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದ ಘಟನೆ ಮೇಲಿನಕುರುವಳ್ಳಿಯಲ್ಲಿ ನಡೆದಿದೆ. ಶುಕ್ರವಾರ ಸಂಜೆ ಮೇಲಿನಕುರುವಳ್ಳಿಯ ರೇಷ್ಮೆ ಫಾರಂ ರಸ್ತೆಯ ಎದುರು ಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಕಟ್ಟೆಹಕ್ಲು ಭಾಗದ ಶಾಮಿಯಾನ ಹಾಕುವ ಗಾಡಿ ಅತ್ಯಂತ ವೇಗವಾಗಿ ಬಂದಿದೆ. ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋವೊಂದಕ್ಕೆ ಡಿಕ್ಕಿ ಹೊಡೆದು ಚರಂಡಿಗೆ…

Read More

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಂದ ಖಡಕ್ ಎಚ್ಚರಿಕೆ..!

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಂದ ಖಡಕ್ ಎಚ್ಚರಿಕೆ..! ತೀರ್ಥಹಳ್ಳಿ :  ತುಂಗಾ ನದಿಗೆ ಪರ್ಯಾಯವಾಗಿ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಮೇಲೆ ವಾಹನ ಓಡಾಡುವ ಸಂದರ್ಭದಲ್ಲಿ ಯುವಕರು ಹುಚ್ಚಾಟ ಮೆರೆದು ರೀಲ್ಸ್ ಮಾಡಿದ ಘಟನೆ ಬಗ್ಗೆ ಹಲವು ಮಾದ್ಯಮಗಳಲ್ಲಿ ವರದಿಯಾಗಿತ್ತು. ವರದಿ ಬೆನ್ನಲ್ಲೇ ರೀಲ್ಸ್ ಮಾಡಿದ ಯುವಕನನ್ನು ತೀರ್ಥಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸುಷ್ಮಾ ರವರು ಕರೆದು ವಿಚಾರಿಸಿ ಎಚ್ಚರಿಕೆ ನೀಡಿದ್ದಾರೆ. ರೀಲ್ಸ್ ಮಾಡಿದ ಯುವಕನ ಮೇಲೆ ಸಣ್ಣದೊಂದು ಕೇಸ್…

Read More

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಸಾರ್ವಜನಿಕರ ಪರದಾಟ

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಸಾರ್ವಜನಿಕರ ಪರದಾಟ ತೀರ್ಥಹಳ್ಳಿ : ಸಾಮಾಜಿಕ ಜಾಲತಾಣಗಳಿಂದ ಎಷ್ಟು ಒಳ್ಳೆಯದೋ ಅದಕ್ಕಿಂತ ಜಾಸ್ತಿ ಹಾಳಾಗುವುದೇ ಹೆಚ್ಚು. ಅದರಲ್ಲೂ ಈಗ ರೀಲ್ಸ್ ಎಂಬ ಶೋಕಿ ಕೆಲವರಿಗೆ ಹುಚ್ಚಾಟವಾಗಿದೆ. ತೀರ್ಥಹಳ್ಳಿಯಲ್ಲಿ ತುಂಗಾ ನದಿಗೆ ಪರ್ಯಾಯವಾಗಿ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಮೇಲೆ ವಾಹನ ಓಡಾಡುವ ಸಂದರ್ಭದಲ್ಲಿ ಯುವಕರು ಹುಚ್ಚಾಟ ಮೆರೆದಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ಬೈಕ್ ಸುತ್ತು ಹೊಡೆಯುತ್ತಿದ್ದು ಅದರ ಮಧ್ಯೆ ಓರ್ವ ಯುವಕ ಡ್ಯಾನ್ಸ್ ಮಾಡುತ್ತಿರುವ ರೀಲ್ಸ್…

Read More

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್ – ಸಂಚಾರ ವ್ಯತ್ಯಯ ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ  ಬೃಹತ್ ಮರವೊಂದು ಅಡ್ಡಲಾಗಿ ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು ಅದರಲ್ಲೂ ಮಣಿಪಾಲ ಆಸ್ಪತ್ರೆಗೆ ಹೋಗುವ ಆಂಬುಲೆನ್ಸ್ ಗಳಿಗೆ ತೊಂದರೆಯಾಗಿದೆ. ಆಗುಂಬೆ ಘಾಟಿಯ ಪ್ರದೇಶದಲ್ಲಿ ಸಂಜೆ ಬಿರುಸಿನ ಗಾಳಿ ಮತ್ತು ಮಳೆಗೆ ಒಂದು ದೊಡ್ಡ ಮರ ರಸ್ತೆ ಮೇಲೆ ಬಿದ್ದ ಪರಿಣಾಮ, ರಾಷ್ಟ್ರೀಯ ಹೆದ್ದಾರಿ 169A–ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುದೀರ್ಘ ಸಮಯದವರೆಗೆ ಉಡುಪಿ ಮತ್ತು…

Read More

ಕೆಟ್ಟು ನಿಂತ ವಾಹನ – ಆಗುಂಬೆ ಘಾಟಿಯಲ್ಲಿ  ಟ್ರಾಫಿಕ್ ಜಾಮ್!!

ಕೆಟ್ಟು ನಿಂತ ವಾಹನ – ಆಗುಂಬೆ ಘಾಟಿಯಲ್ಲಿ  ಟ್ರಾಫಿಕ್ ಜಾಮ್!! ತೀರ್ಥಹಳ್ಳಿ : ರಾಜ್ಯ ಹೆದ್ದಾರಿ 169 ಎ ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ – ಮಂಗಳೂರು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವಾಹನವೊಂದರ ಆಕ್ಸೆಲ್  ಕಡಿತವಾದ್ದರಿಂದ ಘಾಟಿಯ ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಘಾಟಿಯ ಎಂಟನೇ ತಿರುವಿನಲ್ಲಿ ವಾಹನ ಕೆಟ್ಟು ನಿಂತ ಪರಿಣಾಮ ಆಗುಂಬೆ ಘಾಟಿಯ ಎರಡು ಬದಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು ನಿನ್ನೆಯಿಂದ ಸಿಕ್ಕಾಪಟ್ಟೆ ಮಳೆ…

Read More