POSTMANNEWS

ನೈಜ ಸುದ್ದಿ ನೇರ ಬಿತ್ತರ..

ಹಾಡಹಗಲೇ ಮನೆ ಕಳ್ಳತನ ಪ್ರಕರಣ – ರಿಪ್ಪನ್‌ಪೇಟೆ ಸಮೀಪದ ಬಸವಾಪುರದ ಆರೋಪಿ ಬಂಧನ, ಬಂಗಾರ ಮತ್ತು ಬೈಕ್ ವಶಕ್ಕೆ!

ಹಾಡಹಗಲೇ ಮನೆ ಕಳ್ಳತನ ಪ್ರಕರಣ – ರಿಪ್ಪನ್‌ಪೇಟೆ ಸಮೀಪದ ಬಸವಾಪುರದ ಆರೋಪಿ ಬಂಧನ, ಬಂಗಾರ ಮತ್ತು ಬೈಕ್ ವಶಕ್ಕೆ!

Following the incident, a special police team was formed under the guidance of DySP Aravind Kalaguchi. Based on information gathered during the investigation, the police arrested Ashok K. (41), a resident of Basavapura village near Ripponpete.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂರು ಗ್ರಾಮದ ಕೌರಿಹಣ್ಣು ನಿವಾಸಿ ಜೀವನ್ ಕೆ.ಆರ್ ಅವರ ಮನೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ರಿಪ್ಪನ್‌ಪೇಟೆ ಸಮೀಪದ ಬಸವಾಪುರ ಗ್ರಾಮದ ನಿವಾಸಿ ಅಶೋಕ ಕೆ (41) ಬಂಧಿತ ಆರೋಪಿಯಾಗಿದ್ದಾರೆ.

ದಿನಾಂಕ 27-12-2025 ರಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00 ಗಂಟೆಯ ನಡುವೆ ಮನೆಯ ಹಿಂಭಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ, ಅಂದಾಜು ರೂ.2.40 ಲಕ್ಷ ಮೌಲ್ಯದ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ಡಿವೈಎಸ್ಪಿ ಅರವಿಂದ್ ಕಲಗುಚ್ಚಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆಯ ವೇಳೆ ದೊರೆತ ಮಾಹಿತಿಯ ಆಧಾರದಲ್ಲಿ ರಿಪ್ಪನ್‌ಪೇಟೆ ಸಮೀಪದ ಬಸವಾಪುರ ಗ್ರಾಮದ ನಿವಾಸಿ ಅಶೋಕ ಕೆ (41) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ಕಳುವಾದ ಸುಮಾರು 20 ಗ್ರಾಂ ತೂಕದ ಬಂಗಾರದ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ KA-15-26521 ನೊಂದಣಿಯ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

About The Author