Headlines

ಮಹಿಳಾ ಸಾಧಕಿ ಹೊಸನಗರದ ಸೀಮಾ ಕಿರಣ್ ರವರಿಗೆ ರಾಜ್ಯಮಟ್ಟದ “ಚೈತನ್ಯ ಶ್ರೀ 2024” ಪ್ರಶಸ್ತಿ…!

ಮಹಿಳಾ ಸಾಧಕಿ ಹೊಸನಗರದ ಸೀಮಾ ಕಿರಣ್ ರವರಿಗೆ ರಾಜ್ಯಮಟ್ಟದ “ಚೈತನ್ಯ ಶ್ರೀ 2024” ಪ್ರಶಸ್ತಿ…!

ಹೊಸನಗರ ತಾಲ್ಲೂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ನೊಂದವರ ಧ್ವನಿಯಾಗಿ ಸಮಾಜ ಸೇವೆ ಮೂಲಕ ತಮ್ಮನ್ನು ಗುರುತಿಸಿ ಕೊಂಡಿರುವ.ವೃತ್ತಿಯಲ್ಲಿ ಬ್ಯೂಟೀಷಿಯನ್ ಆಗಿ ಪ್ರವೃತ್ತಿಯಲ್ಲಿ ಸಂಘಟಕಿ ಹಾಗೂ ಹೋರಾಟಗಾರ್ತಿಯಾಗಿರುವ ಬಹುಮುಖ ಪ್ರತಿಭೆ ಹೊಸನಗರದ ಸೀಮಾ ಕಿರಣ್ ರವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತುನವರು ಅತ್ಯುತ್ತಮ ಸಾಧನೆಗೈದ ಮಹಿಳೆಯರಿಗೆ ಪ್ರಪ್ರಥಮ ಬಾರಿಗೆ ಕೊಡ ಮಾಡಿದ ರಾಜ್ಯಮಟ್ಟದ “ಪ್ರತಿಷ್ಠಿತ “ಚೈತನ್ಯ ಶ್ರೀ- 2024” ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯಿಂದ “ಸೀಮಾ ಕಿರಣ್ ಭಾಜನರಾಗಿದ್ದಾರೆ

ಜನವರಿ 03 ಮತ್ತು 04 ರಂದು ಬೆಂಗಳೂರಿನ ಬಾಗಲೂರಿನ ವಿಜಿ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಸೀಮಾ ಕಿರಣ್ ರವರು ವೃತ್ತಿಯಲ್ಲಿ ರೂಪದರ್ಶಿ, ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕವಾಗಿ ತೊಡಗಿಸಿಕೊಂಡು ,ಬಹುಮುಖ ಪ್ರತಿಭೆ ಯಾಗಿದ್ದಾರೆ. “ಮವಿನ್ ಮಿಸ್ ಇಂಡಿಯಾ ಪ್ಲಸ್ ” 2022ದೆಹಲಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ “ಮಿಸ್ ಅಲ್ಲೂರಿಂಗ್ ”ಪಡೆದು 2021 ರಲ್ಲಿ ಕರ್ನಾಟಕದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಹಲವು ಪ್ಲಸ್ ಸೈಜ್ ಮಾಡಿಲಿಂಗ್ ನಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಜೆಸಿಐ ಹೊಸನಗರ ಕೊಡಚಾದ್ರಿಯ 2021 ರ ಅಧ್ಯಕ್ಷರಾಗಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವ ಇವರು, ಕನ್ನಡ ಸಾಹಿತ್ಯ ಪರಿಷತ್ತಿನ ಹೊಸನಗರದ 2024ರ ಕಸಬಾ ಹೋಬಳಿ ಅಧ್ಯಕ್ಷರಾಗಿ  ಹಲವು ಗೋಷ್ಠಿಗಳಲ್ಲಿ ಬಾಗವಹಿಸಿದ್ದಾರೆ. ಸರ್ಕಾರದ ಅನುದಾನಗಳನ್ನು ಹಲವರಿಗೆ ತಲುಪುವಂತೆ ಮಾರ್ಗದರ್ಶರಾಗಿದ್ದಾರೆ. ಮತ್ತು ನೊಂದ ಮಹಿಳೆಯರ ಸ್ವರವಾಗಿ ಧೈರ್ಯ ತುಂಬುತ್ತಾ ಕಾನೂನು ಸಲಹೆ ಮತ್ತು ಸಾಮಾಜಿಕ ಹೋರಾಟಗಾರರಾಗಿದ್ದಾರೆ. ಕ ವೈ ಪ ಹೊಸನಗರ ತಾಲ್ಲೂಕು ಅಧ್ಯಕ್ಷರು ಆಗಿದ್ದಾರೆ. ಜಿಲ್ಲಾ ಮಾನವ ಹಕ್ಕುಗಳ ಆಯೋಗ ಕಾರ್ಯದರ್ಶಿ ಆಗಿದ್ದಾರೆ.
ಹೊಸನಗರದ ಸೀಮಾ ಸೆರಾವ್ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯ ಮಟ್ಟದ ಚೈತನ್ಯ ಶ್ರೀ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *