Headlines

ರಿಪ್ಪನ್ ಪೇಟೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ “ಸಂಕ್ರಾಂತಿ ಉತ್ಸಾಹ ಹಾಗೂ ಭಜನೆ”.

ರಿಪ್ಪನ್ ಪೇಟೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ “ಸಂಕ್ರಾಂತಿ ಉತ್ಸಾಹ ಹಾಗೂ ಭಜನೆ”.

ರಿಪ್ಪನ್ ಪೇಟೆ : ಪಟ್ಟಣದ ಶ್ರೀ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ವೇದಿಕೆ ಇವರ ಆಶ್ರಯದಲ್ಲಿ  ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಕ್ರಾಂತಿ ಉತ್ಸವ ಹಾಗೂ ಬಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು  ವೇದಿಕೆಯ ಅಧ್ಯಕ್ಷ ಸುಮಂಗಳ ಹರೀಶ್ ಹಾಗೂ ಕಾರ್ಯದರ್ಶಿ ರೂಪ ಶಂಕ್ರಪ್ಪ ತಿಳಿಸಿದ್ದಾರೆ.

ಸೋಮವಾರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜನವರಿ 14 ಮಂಗಳವಾರ  ಸಂಜೆ 4 ಗಂಟೆಗೆ  ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ ರಿಪ್ಪನ್ ಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಸಂಕ್ರಾಂತಿ  ಹಬ್ಬದ ಪ್ರಯುಕ್ತ ಸಂಕ್ರಾಂತಿ ಉತ್ಸವ ಹಾಗೂ ಬಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಈ ಬಜನಾ ಕಾರ್ಯಕ್ರಮದಲ್ಲಿ  ಹತ್ತಕ್ಕೂ ಹೆಚ್ಚು ಮಹಿಳಾ ತಂಡಗಳು ಭಾಗವಹಿಸಲಿದೆ.

ಈ ಸಂಕ್ರಾಂತಿ ಉತ್ಸವ ಹಾಗೂ ಭಜನಾ ಕಾರ್ಯಕ್ರಮದಲ್ಲಿ  ಸಮಾಜದ ಬಾಂಧವರು ಸೇರಿದಂತೆ ಎಲ್ಲಾ ಸಾರ್ವಜನಿಕ ಬಂಧುಗಳು  ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ತಿಳಿಸಿದರು

ಈ ಸಂದರ್ಭದಲ್ಲಿ ಶ್ರೀ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ವೇದಿಕೆಯ ಪದಾಧಿಕಾರಿಗಳಾದ ಪ್ರಮೀಳಾ ಲಕ್ಷ್ಮಣಗೌಡ. ಕೋಮಲ ಕೇಶವ್, ಜಯಂತಿ ಅಶೋಕ್, ಶ್ಯಾಮಲ ಪ್ರದೀಪ್, ವಾಣಿ ಗೋವಿಂದಪ್ಪ ಗೌಡ, ಪ್ರವೀಣೆ  ಮಂಜುನಾಥ್, ವೀಣಾ ಗುರುಮೂರ್ತಿ, ಮಮತಾ ವಿಷ್ಣುಮೂರ್ತಿ. ಇನ್ನಿತರರಿದ್ದರು..

Leave a Reply

Your email address will not be published. Required fields are marked *