ರಿಪ್ಪನ್‌ಪೇಟೆಯ ಭುವನಗೌರಿಗೆ ಎಂ ಫಾರ್ಮಾ ಪಿಜಿಸಿಇಟಿಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್
ರಿಪ್ಪನ್‌ಪೇಟೆ : ದಾವಣಗೆರೆ ಬಾಪೂಜಿ ಫಾರ್ಮಸಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಪಟ್ಟಣದ ಭುವನಗೌರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂ.ಫಾರ್ಮಾ ಪ್ರವೇಶಾತಿಗಾಗಿ ನಡೆಸಿದ್ದ ಪಿಜಿಸಿಇಟಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾಳೆ.
ಪಟ್ಟಣ ತೀರ್ಥಹಳ್ಳಿ ರಸ್ತೆಯ ಎಸ್ ಎಲ್ ವಿ ಶಾಮಿಯಾನ ಮಾಲೀಕರಾದ ಮಂಜುನಾಥ್ ಮತ್ತು ಸುಜಾತ ದಂಪತಿಗಳ ಪುತ್ರಿಯಾದ ಭುವನಗೌರಿ ಎಂ ಫಾರ್ಮಾ ಪಿಜಿಸಿಇಟಿಯಲ್ಲಿ ರಾಜ್ಯಕ್ಕೆ ಎರಡನೆ ರ್ಯಾಂಕ್ ಪಡೆದಿದ್ದಾಳೆ.
ಬಿ ಫಾರ್ಮಾ ಪದವಿ ಬಳಿಕ ಎಂ.ಫಾರ್ಮಾಕ್ಕೆ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಬ್ಯಾಂಕ್ ಆಧಾರದ ಮೇಲೆ ರಾಜ್ಯದ ಫಾರ್ಮಸಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸೀಟ್ ಸೀಟ್ ಅಲಾಟ್‌ಮೆಂಟ್‌ಗೆ ಅವಕಾಶ ಇರುತ್ತದೆ.
ಅದ್ವಿತೀಯ ಸಾಧನೆಗೈದು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಭುವನಗೌರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳದ ವತಿಯಿಂದ ಅಭಿನಂದನೆಗಳು.