Headlines

ಹುಟ್ಟಿದ ಹಬ್ಬದ ದಿನವೇ ಅಪಘಾತದಲ್ಲಿ ಮೃತಪಟ್ಟ ಯುವಕ

ಹುಟ್ಟಿದ ಹಬ್ಬದ ದಿನವೇ ಅಪಘಾತದಲ್ಲಿ ಮೃತಪಟ್ಟ ಯುವಕ

ಜನ್ಮದಿನದಂದೇ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಕರುಣಾಜನಕ ಘಟನೆ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ. ಹೌದು ತನ್ನ ಹುಟ್ಟು ಹಬ್ಬದ ದಿನವೇ ಭೀಕರ ಅಪಘಾತದಲ್ಲಿ ಫೈನಲ್ ಇಯರ್ ಪದವಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ.

ಹುಟ್ಟುಹಬ್ಬದ ದಿನದಂದೇ ಪುತ್ರನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ಚಿದಾನಂದ ಎಂಬ ವಿದ್ಯಾರ್ಥಿ ಇಂದು ಹುಟ್ಟಹಬ್ಬದ ಸಂಭ್ರಮದಲ್ಲಿದ್ದ.ಆದ್ರೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಮನೆಗೆ ಮರಳುತ್ತಿದ್ದವನು ಮಾಸನ ಸೇರಿದ್ದಾನೆ.

ವಿದ್ಯಾರ್ಥಿ ಚಿದಾನಂದ್ ಪಲ್ಸರ್ ಬೈಕಿಗೆ ಕಸದ ವಾಹನ ಡಿಕ್ಕಿಯಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಚಿದಾನಂದ್ ನನ್ನು ಧರ್ಮಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.ಆದ್ರೆ ಆ ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕೊಂಡೊಯ್ಯುವ ವೇಳೆ ಆಂಬುಲೆನ್ಸ್ ನಲ್ಲಿ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.

Leave a Reply

Your email address will not be published. Required fields are marked *