
ಜಿಲ್ಲಾ ಸುದ್ದಿ:

Ripponpete|ಕೆಂಚನಾಲ ಮಾರಿಕಾಂಬಾ ಜಾತ್ರೆಗೆ ಹರಿದು ಬಂದ ಭಕ್ತಸಾಗರ
Ripponpete | ಕೆಂಚನಾಲ ಮಾರಿಕಾಂಬಾ ಜಾತ್ರೆಗೆ ಹರಿದು ಬಂದ ಭಕ್ತಸಾಗರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ ಬೇಸಿಗೆ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಜ್ಯದ ಹಲವೆಡೆಯಿಂದ, ನೆರೆ ರಾಜ್ಯ ಹಾಗೂ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿ ದೇವಿಯ ದರ್ಶನ ಪಡೆದರು. ಭಕ್ತಾಧಿಗಳು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಕೆಂಚನಾಲ ಗ್ರಾಮದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆ ಇತಿಹಾಸ-ಪುರಾಣ ಪ್ರಸಿದ್ಧ ಜಾತ್ರೆ ಆಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ…

RIPPONPETE |ಗವಟೂರಿನಲ್ಲಿ ಅಲ್ ಬದ್ರಿಯಾ ಮದರಸ ಕಟ್ಟಡ ಲೋಕಾರ್ಪಣೆ
RIPPONPETE | ಅಲ್ ಬದ್ರಿಯಾ ಮದರಸ ಕಟ್ಟಡ ಲೋಕಾರ್ಪಣೆ ರಿಪ್ಪನ್ಪೇಟೆ : ಇಲ್ಲಿನ ಗವಟೂರು ಗ್ರಾಮದ ಅಲ್ ಬದ್ರಿಯಾ ಮದ್ರಸದ ನೂತನ ಕಟ್ಟಡ ಸುನ್ನಿ ಜಂ -ಇಯ್ಯಂತುಲ್ ಸಮಿತಿಯ ಸಾಗರ ರೇಂಜ್ ಅಧ್ಯಕ್ಷರಾದ ಎ ಸಿ ಮಹಮ್ಮದ್ ಫೈಜಿ ( ಕಾರ್ಗಲ್ ಉಸ್ತಾದ್) ಲೋಕಾರ್ಪಣೆಗೊಳಿಸಿದರು..ನಂತರ ಕೂರ ತಂಝಲ್ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯನನ್ನು ಮಾನವೀಯತೆ ಪಾಠ ಕಲಿಸಿ, ಸಮಾಜದಲ್ಲಿ ಜೀವಿಸುವ ರೀತಿಯ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿ ಕೊಳ್ಳಲು ಕಲಿಸುವ ಕೇಂದ್ರಗಳಾಗಿರುವ ಮದ್ರಸ…

Ripponpete | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ..!
Ripponpete | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ..! ರಿಪ್ಪನ್ಪೇಟೆ : ಪಟ್ಟಣದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಪಿಎಸ್ಐ ಪ್ರವೀಣ್ ಎಸ್ ಪಿ ನೇತ್ರತ್ವದಲ್ಲಿ ಭಾನುವಾರ ರಾತ್ರಿ ಖಚಿತ ಮಾಹಿತಿಯ ಮೇರೆಗೆ ಬಿಲ್ಲೇಶ್ವರ ಸರ್ಕಲ್ ನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ ,ಸಂತೋಷ್ ಕೊರವರ , ಹಾಗೂ ಮಧುಸೂಧನ್ ಇದ್ದರು.

ಮಾಂಸದಂಗಡಿ ಲೈಸೆನ್ಸ್ ವಿತರಣೆಯಲ್ಲಿ ಗ್ರಾಮಾಡಳಿತದಿಂದ ತಾರತಮ್ಯ – ಗ್ರಾಪಂ ಸದಸ್ಯ ಸುಂದರೇಶ್ ಆರೋಪ
ಮಾಂಸದಂಗಡಿ ಲೈಸೆನ್ಸ್ ವಿತರಣೆಯಲ್ಲಿ ಗ್ರಾಮಾಡಳಿತದಿಂದ ತಾರತಮ್ಯ – ಗ್ರಾಪಂ ಸದಸ್ಯ ಸುಂದರೇಶ್ ಆರೋಪ ರಿಪ್ಪನ್ಪೇಟೆ : ಮಾಂಸದ ಅಂಗಡಿಯ ಲೈಸೆನ್ಸ್ ವಿತರಣೆಯಲ್ಲಿ ಗ್ರಾಮಾಡಳಿತ ತಾರತಮ್ಯ ಎಸಗುವುದರೊಂದಿಗೆ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದೆ ಎಂದು ಗ್ರಾಪಂ ಸದಸ್ಯ ಸುಂದರೇಶ್ ಆರೋಪಿಸಿದ್ದಾರೆ. ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ಕಾರದ ನಿಯಮಾವಳಿಗಳ ಪ್ರಕಾರ ಯಾವುದೇ ಹರಾಜು ಪ್ರಕ್ರಿಯೆಯನ್ನು ನಡೆಸದೆ ಬೇಕಾಬಿಟ್ಟಿ ಮಾಂಸದ ಅಂಗಡಿಗಳ ಲೈಸೆನ್ಸ್ ಗಳನ್ನು ಕಾನೂನು ಬಾಹಿರವಾಗಿ ವಿತರಿಸುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ…

ರಿಪ್ಪನ್ಪೇಟೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ – ಶಾಸಕ ಬೇಳೂರು ಗೋಪಾಲಕೃಷ್ಣ
ರಿಪ್ಪನ್ಪೇಟೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ – ಶಾಸಕ ಬೇಳೂರು ಗೋಪಾಲಕೃಷ್ಣ ರಸ್ತೆ ಅಗಲೀಕರಣ ಕಾಮಗಾರಿ ವೀಕ್ಷಿಸಿದ ಶಾಸಕರು ರಿಪ್ಪನ್ಪೇಟೆ : ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹಲವಾರು ಮಹತ್ವದ ಯೋಜನೆಗಳನ್ನು ಸಿದ್ದಪಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಪಟ್ಟಣವನ್ನು ಸುಂದರವನ್ನಾಗಿಸಲು ತಾನು ಬದ್ದನಾಗಿದ್ದೇನೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯನ್ನು ವೀಕ್ಷಿಸಿ ನಂತರ ಮಾತನಾಡಿದ ಶಾಸಕರು ಸಾಗರ ಹಾಗೂ ತೀರ್ಥಹಳ್ಳಿ ರಸ್ತೆ ಅಗಲೀಕರಣ ಕಾಮಗಾರಿಗೆ…

RIPPONPETE | ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಶಮನಗೊಳಿಸುವಂತೆ ರಾಷ್ಟ್ರಾಧ್ಯಕ್ಷರಿಗೆ ಪತ್ರ
RIPPONPETE | ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಶಮನಗೊಳಿಸುವಂತೆ ರಾಷ್ಟ್ರಾಧ್ಯಕ್ಷರಿಗೆ ಪತ್ರ ರಿಪ್ಪನ್ಪೇಟೆ : ರಾಜ್ಯ ಬಿಜೆಪಿ ಘಟಕದಲ್ಲಿ ಆಂತರಿಕ ಭಿನ್ನಮತವನ್ನು ಆದಷ್ ಶಮನಗೊಳಿಸಲು ಪಕ್ಷದ ವರಿಷ್ಠರು ಮುಂದಾಗಬೇಕು’ ಎಂದು ಆಗ್ರಹಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಜೆಪಿ ಪಕ್ಷದ ಜಿಲ್ಲಾ ಹಾಗೂ ತಾಲೂಕ್ ಮಟ್ಟದ ಮುಖಂಡರು ಪತ್ರ ಬರೆಯಲು ಮುಂದಾಗಿದ್ದೇವೆ ಎಂದು ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಎಂ ಬಿ ಮಂಜುನಾಥ್ ಹಾಗೂ ಜಿಲ್ಲಾ ಮುಖಂಡ ನಾಗೇಂದ್ರ ಕಲ್ಲೂರು ಜಂಟಿ ಪತ್ರೀಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಭಾನುವಾರ ನಡೆದ ರಿಪ್ಪನ್ಪೇಟೆಯಲ್ಲಿ…

ಆನೆ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ,ಸಾಂತ್ವಾನ
ರಿಪ್ಪನ್ಪೇಟೆ : ಹಲವಾರು ದಿನಗಳ ಹಿಂದೆ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಗ್ರಾಮದ ಕಮದೂರು ಬಳಿ ಸ.ನಂ. 115ರ ಜಮೀನಿನಲ್ಲಿ ಕಾಡಾನೆಗಳು ದಾಳಿ ಮಾಡಿ ಬಾಳೆ ಮತ್ತು ಅಡಿಕೆ ಬೆಳೆ ಧ್ವಂಸಗೊಳಿಸಿದ್ದು ಸ್ಥಳಕ್ಕೆ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲನೆ ನಡೆಸಿ ಜಮೀನಿನ ಮಾಲೀಕರಿಗೆ ವೈಯಕ್ತಿಕ ನೆರವು ನೀಡುವ ಮೂಲಕ ಸಾಂತ್ವನ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ಒಂದು ತಿಂಗಳುಗಳಿಂದ ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು ಒಂದು ಕಡೆಯಿಂದ ಮೊತ್ತೊಂದು ಭಾಗಕ್ಕೆ ಅನೆಗಳು…

ಅಡಿಕೆ ಬೆಳೆಗಾರರಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುಡ್ ನ್ಯೂಸ್
ಅಡಿಕೆ ಬೆಳೆಗಾರರಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುಡ್ ನ್ಯೂಸ್ ಅಡಿಕೆ ಆಮದು ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಡಿಕೆಗೆ ವೈಜ್ಞಾನಿಕ ಬೆಲೆ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಬೆಳೆಗೆ ತಕ್ಕಂತೆ ಬೆಲೆ ನೀಡಬೇಕಿದ್ದು, ಬೆಳೆ ಹಾನಿಯಾದಾಗ ಪರಿಹಾರ ನೀಡಬೇಕು. ರೈತರು ಬೆಳೆದ…

ಅಬಾಕಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಿಪ್ಪನ್ಪೇಟೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ
ಅಬಾಕಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಿಪ್ಪನ್ಪೇಟೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ ರಿಪ್ಪನ್ಪೇಟೆ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪಟ್ಟಣದ “ಐಡಿಯಲ್ ಪ್ಲೇ ಅಬಾಕಸ್ ” ಶಾಖೆಯ 17 ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅನೇಕ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 12- 01-2025 ರಂದು ಬೆಂಗಳೂರಿನ ವೈಟ್ ಫೆದರ್ ಹಾಲ್ ನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಕಾಂಪಿಟೇಶನ್ ನಲ್ಲಿ 15 ರಾಜ್ಯಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ರಿಪ್ಪನ್ ಪೇಟೆಯ…

ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ: ಹರತಾಳು ಹಾಲಪ್ಪ
ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ: ಹರತಾಳು ಹಾಲಪ್ಪ ಜನವರಿ 18ರಂದು ಸಾಗರದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ. ರಿಪ್ಪನ್ಪೇಟೆ;- ಜನವರಿ 18ರಂದು ಸಾಗರ ಸಂತೆ ಮೈದಾನದಲ್ಲಿಏರ್ಪಡಿಸಲಾಗಿದ್ದು ಆಡಿಕೆ ಬೆಳೆಗಾರರ ಸಮಾವೇಶಕ್ಕೆ ಸಾಗರ-ಹೊಸನಗರತಾಲ್ಲೂಕಿನಅಡಿಕೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಡಿಕೆ ಬೆಳೆಗಾರ ಸಮಸ್ಯೆ ಪರಿಹಾರಕ್ಕೆ ಬೆಂಬಲಿಸುವಂತೆ ಮಾಜಿ ಮಂತ್ರಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು. ಪಟ್ಟಣದ ರಾಮಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಲೆನಾಡಿನ ವ್ಯಾಪ್ತಿಯಲ್ಲಿ ಹವಾಮಾನ ವೈಪರಿತ್ಯದಿಂದಾಗಿಆಡಿಕೆ ಬೆಳೆಯಲ್ಲಿ…