ಜಿಲ್ಲಾ ಸುದ್ದಿ:
ಆರೋಗ್ಯ ಸಂಸ್ಥೆಗಳಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆರೋಗ್ಯ ಸಂಸ್ಥೆಗಳಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ 2024-25ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಹೆಚ್.ಎಂ) ದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅ. 09 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ ಅರ್ಜಿ ನಮೂನೆಯನ್ನು ಎನ್.ಹೆಚ್.ಎಂ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ…
ಪಿಡಿಓ ಹುದ್ದೆ ಮೇಲ್ದರ್ಜೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ – ಗ್ರಾಮ ಪಂಚಾಯತ್ ಗಳ ಸೇವೆಗಳು ಸಂಪೂರ್ಣ ಬಂದ್
ಪಿಡಿಓ ಹುದ್ದೆ ಮೇಲ್ದರ್ಜೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ – ಗ್ರಾಮ ಪಂಚಾಯತ್ ಗಳ ಸೇವೆಗಳು ಸಂಪೂರ್ಣ ಬಂದ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಡೆಸುತ್ತಿರುವ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಗ್ರಾಮ ಪಂಚಾಯತ್ ಗಳ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ, ಪಿಡಿಒ ಹುದ್ದೆಯನ್ನು ಮೇಲ್ದರ್ಜೆಗೆ ಸೇರ್ಪಡಿಸಿಕೊಳ್ಳಬೇಕೆಂದು, ಕಾರ್ಯದರ್ಶಿ ಗ್ರೇಡ್ ಒನ್ ಹುದ್ದೆಯಿಂದ ಪಿಡಿಒ ಆಗಿ ಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ,…
ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ: ಎಂ ಎನ್ ಸುಧಾಕರ್.
ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ: ಎಂ ಎನ್ ಸುಧಾಕರ್ ಹೊಸನಗರ: ಯಾವುದೇ ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಈ ನಿಟ್ಟಿನಲ್ಲಿ ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ರಾಷ್ಟ್ರೀಯ ತರಬೇತುದಾರರಾದ ದಿವಂಗತ ಜಾನ್ ವಿಲ್ಸನ್ ಗೋನ್ ಸಾಲ್ವಿಸ್ ಅವರು ಸ್ಮರಣಾರ್ಥ ಈ ಒಂದು ವಾಲಿಬಾಲ್ ತರಬೇತಿ ಶಿಬಿರವನ್ನ ಹಮ್ಮಿಕೊಳ್ಳಲಾಗಿದೆ ಎಂದು ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಎಂ ಎನ್ ಸುಧಾಕರ್ ತಿಳಿಸಿದರು. ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ…
ಮಹಿಳೆ-ಮಕ್ಕಳು-ಹಿಂದುಳಿದ ವರ್ಗಗಳ ಕಾನೂನುಗಳು ಸದುಪಯೋಗ ಆಗಬೇಕು : ನ್ಯಾ.ಮಂಜುನಾಥ ನಾಯಕ್
ಮಹಿಳೆ-ಮಕ್ಕಳು-ಹಿಂದುಳಿದ ವರ್ಗಗಳ ಕಾನೂನುಗಳು ಸದುಪಯೋಗ ಆಗಬೇಕು : ನ್ಯಾ.ಮಂಜುನಾಥ ಶಿವಮೊಗ್ಗ : ಮಹಿಳೆಯರು, ಮಕ್ಕಳು ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರ ಸಾಕಷ್ಟು ಕಾನೂನುಗಳನ್ನು ರೂಪಿಸಿದ್ದು ಈ ಕಾನೂನುಗಳ ಸದುಪಯೋಗ ಆಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ತಿಳಿಸಿದರು. ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,…
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲೊಬ್ಬ ರೌಡಿ ಡಾಕ್ಟರ್
ಶಿವಮೊಗ್ಗ ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಡಾ ಪ್ರತಿಮಾ ರಂತಹ ವೈದ್ಯರು ಬಡವರಿಗೆ ಅತ್ಯುತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಜಿಲ್ಲೆಯಲ್ಲಿಯೇ ಹೆಸರು ಮಾಡಿದೆ ಎಂದರೆ ತಪ್ಪಾಗಲಾರದು ಆದರೆ ಇಲ್ಲಿರುವ ನಾಗೇಂದ್ರಪ್ಪ ಎಂಬ ರೌಡಿ , ಹಣಬಾಕ ವೈದ್ಯನಿಂದ ಈ ಆಸ್ಪತ್ರೆಯು ಕಳಂಕದತ್ತ ಹೊರಟಿರುವುದು ವಿಪರ್ಯಾಸ..!! ಈ ನಾಗೇಂದ್ರಪ್ಪನ ಆಟ ಎಷ್ಟಿದೆಯೆಂದರೆ ಇಲ್ಲಿ ನಾನಾಡಿದ್ದೇ ಆಟ, ನಾನೇ ಡಾಕ್ಟರ್ ನಾ ಹೇಗಿರಬೇಕು ಹಾಗೆ ಇರ್ತೀನಿ ಅದನ್ನು ಹೇಳಕ್ಕೆ ನೀನ್ಯಾರು? ಎಫ್ರಾನ್, ಸ್ಕೆತಸ್ಕೋಪ್ ಹಾಕಿಕೊಂಡ್ರೆ ವೈದ್ಯ, ಕೈಯಲ್ಲಿ…
ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿರಲಿಲ್ಲ – ಗ್ರಾಪಂ ಅಧ್ಯಕ್ಷ ಸಚಿನ್ ಗೌಡ
ರಿಪ್ಪನ್ಪೇಟೆ : ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರಲಿಲ್ಲ ಎಂದು ಅಮೃತ ಗ್ರಾಪಂ ನೂತನ ಅಧ್ಯಕ್ಷ ಸಚಿನ್ ಗೌಡ ಸ್ಪಷ್ಟನೆ ನೀಡಿದ್ದಾರೆ. ಪಟ್ಟಣದಲ್ಲಿ ಇಂದು ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಅಮೃತ ಗ್ರಾಪಂ ಅಧ್ಯಕ್ಷ ಚುನಾವಣೆಯಲ್ಲಿ ನಾನು ಪ್ರಬಲ ಆಕಾಂಕ್ಷಿಯಾಗಿದ್ದು ಈ ಬಗ್ಗೆ ಬಿಜೆಪಿ ಪಕ್ಷದ ಮುಖಂಡರ ಬಳಿ ಪ್ರಸ್ತಾಪಿಸಿದಾಗ ಅವರು ಮನ್ನಣೆ ನೀಡದ ಕಾರಣ ಬಿಜೆಪಿ ಪಕ್ಷದ ಬಂಡಾಯವಾಗಿ ಸ್ಪರ್ಧಿಸಿದ್ದೆ ಆದರೆ ಕೆಲವು ಮಾದ್ಯಮಗಳಲ್ಲಿ ಕಾಂಗ್ರೆಸ್…
ಕಸ್ತೂರಿ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಧನಲಕ್ಷ್ಮಿ ಗಂಗಾಧರ್ ಆಯ್ಕೆ
ಕಸ್ತೂರಿ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಧನಲಕ್ಷ್ಮಿ ಗಂಗಾಧರ್ ಆಯ್ಕೆ ರಿಪ್ಪನ್ ಪೇಟೆ : ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್ಕುಮಾರ್ ಆಭಿಮಾನಿ ಬಳಗದ ನಾಲ್ಕನೇ ವರ್ಷದ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷರಾಗಿ ಧನಲಕ್ಷ್ಮಿ ಗಂಗಾಧರ್ ಆಯ್ಕೆಯಾಗಿದ್ದಾರೆ. ಪಟ್ಟಣದಲ್ಲಿ ಬುಧವಾರ ಗ್ರಾಮ ಪಂಚಾಯತ್ ನ ಕುವೆಂಪು ಸಭಾಂಗಣದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದ ಸರ್ವ ಸದಸ್ಯರ ಸಭೆಯನ್ನು ಕರೆದು ನೂತನ ಪದಾದಿಕಾರಿಗಳ ಆಯ್ಕೆ ನಡೆಸಲಾಯಿತು….
ಗಾಂಧೀ ಮತ್ತು ಸೇವೆ ಸಾರ್ವಕಾಲಿಕ ಸತ್ಯಗಳು – ಮಂಜುನಾಥ. ಕೆ. ಆರ್
ಗಾಂಧೀ ಮತ್ತು ಸೇವೆ ಸಾರ್ವಕಾಲಿಕ ಸತ್ಯಗಳು – ಮಂಜುನಾಥ. ಕೆ. ಆರ್ ಬಟ್ಟೆಮಲ್ಲಪ್ಪ : ಸೇವೆ ಮತ್ತು ಅಹಿಂಸೆ ತತ್ವಗಳು ಜಗತ್ತಿಗೆ ಗಾಂಧೀಜಿ ನೀಡಿದ ಸಾರ್ವಕಾಲಿಕ ಸತ್ಯಗಳು ಎಂದು ಹರಿದ್ರಾವತಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಕೆ. ಆರ್ ಅಭಿಪ್ರಾಯಪಟ್ಟರು. ಇಂದು ಮಹಾತ್ಮ ಗಾಂಧೀ ಮತ್ತು ಶಾಸ್ತ್ರೀ ಜಿಯವರ ಜಯಂತಿ ಅಂಗವಾಗಿ ಬಟ್ಟೆಮಲ್ಲಪ್ಪ ಸರ್ಕಲನಲ್ಲಿ ಶ್ರೀ ವ್ಯಾಸ ಮಹರ್ಷಿ ಗುರುಕುಲ ಹಾಗೂ ಚೆನ್ನಮ್ಮಾಜಿ ಪ್ರೌಢ ಶಾಲೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶ್ರಮದಿನವನ್ನು ಉದ್ಘಾಟಿಸಿ ಅವರು ಮಾತನಾಡಿ ಗಾಂಧೀಜಿ ಅವರ…
ಶಾಂತಿ ಸೌಹಾರ್ಧತೆಯಿಂದ ಐಕ್ಯತೆ ಸಾಧ್ಯ – ಸೊನಲೆ ಶ್ರೀನಿವಾಸ್
ರಿಪ್ಪನ್ಪೇಟೆ : ಶಾಂತಿ, ಸೌಹಾರ್ಧತೆಯನ್ನು ಬೆಳೆಸಿದರೆ ಮಾತ್ರ ದೇಶದಲ್ಲಿ ಐಕ್ಯತೆ ಸಾಧ್ಯ. ಜತೆಗೆ ಸರ್ವರೂ ಸಮನ್ವಯತೆಯಿಂದ ಬದುಕಬಹುದು ಎಂದು ಇತಿಹಾಸಕಾರ ಸೊನಲೆ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಹೊಸನಗರ ರಸ್ತೆಯ ಜುಮ್ಮಾ ಮಸೀದಿ ಆವರಣದ ಕೂರ ತಂಝಲ್ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಆಯೋಜಿಸಿದ್ದ ಸ್ನೇಹ – ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವ ಜನಾಂಗದ ಮನಸ್ಸುಗಳನ್ನು ಗಟ್ಟಿಗೊಳಿಸಿದರೆ ದೇಶ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಪ್ರಚೋಧನಾಕಾರಿಗಳೇ ಪ್ರಜ್ವಲಿಸುತ್ತವೆ. ಇದರಿಂದ ದೇಶದಲ್ಲಿ ಅಶಾಂತಿ…
ಎಡಿಜಿಪಿ ಚಂದ್ರಶೇಖರವರನ್ನು ಸೇವೆಯಿಂದ ವಜಾಗೊಳಿಸುವಂತೆ ಹೊಸನಗರ ತಾಲ್ಲೂಕು ಜೆಡಿಎಸ್ ಆಗ್ರಹ
ಎಡಿಜಿಪಿ ಚಂದ್ರಶೇಖರವರನ್ನು ಸೇವೆಯಿಂದ ವಜಾಗೊಳಿಸುವಂತೆ ಹೊಸನಗರ ತಾಲ್ಲೂಕು ಜೆಡಿಎಸ್ ಆಗ್ರಹ ರಿಪ್ಪನ್ಪೇಟೆ : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಕೀಳು ಮಟ್ಟದ ಪದ ಬಳಸಿ ಅವಮಾನ ಮಾಡಿರುವ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ರವರನ್ನು ಸೇವೆಯಿಂದ ವಜಾಗೊಳಿಸುವಂತೆ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಹಾಗೂ ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು. ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ…