ಜಿಲ್ಲಾ ಸುದ್ದಿ:
RIPPONPETE | ಕೆರೆಹಳ್ಳಿಯಲ್ಲಿ ಗ್ರಾಮ ದೇವರುಗಳಿಗೆ ಕುರಿ,ಕೋಳಿ ಬಲಿ ನೀಡಿ ಸಂಭ್ರಮದ ನೋನಿ ಆಚರಣೆ
RIPPONPETE | ಕೆರೆಹಳ್ಳಿಯಲ್ಲಿ ಗ್ರಾಮ ದೇವರುಗಳಿಗೆ ಕುರಿ,ಕೋಳಿ ಬಲಿ ನೀಡಿ ಸಂಭ್ರಮದ ನೋನಿ ಆಚರಣೆ ಮಲೆನಾಡಿನ ಪ್ರದೇಶದಲ್ಲಿ ದೀಪಾವಳಿಯಲ್ಲಿ ಗ್ರಾಮ ದೇವರುಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಆಚರಿಸುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ರಿಪ್ಪನ್‌ಪೇಟೆ ಪಟ್ಟಣದ ಮೇಲಿನ ಕೆರೆಹಳ್ಳಿ ಹಾಗೂ ಕೆಳಗಿನ ಕೆರೆಹಳ್ಳಿ ಗ್ರಾಮಸ್ತ್ಗರು ತಮ್ಮ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಹಬ್ಬವನ್ನು ಆಚರಿಸಿದರು. ರೈತರು ತಮ್ಮ ಕುಟುಂಬದ ನೇಮ ನಿಷ್ಠೆಯಂತೆ ವರ್ಷವೂ…
ಕಸ್ತೂರಿ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಜಿ ಆರ್ ಗೋಪಾಲಕೃಷ್ಣ ಆಯ್ಕೆ
ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರಾಗಿ ಜಿ ಆರ್ ಗೋಪಾಲಕೃಷ್ಣ ಆಯ್ಕೆ ರಿಪ್ಪನ್ ಪೇಟೆ : ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್‍ಕುಮಾರ್ ಆಭಿಮಾನಿ ಬಳಗದ ಐದನೇ ವರ್ಷದ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷರಾಗಿ ಜಿ ಆರ್ ಗೋಪಾಲಕೃಷ್ಣ , ಪ್ರಧಾನ ಕಾರ್ಯದರ್ಶಿಗಳಾಗಿ ಹಸನಬ್ಬ ಬ್ಯಾರಿ ಹಾಗೂ ಶ್ರೀಧರ್ ಚಿಗುರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದೇವರಾಜ್ ಕೆ ,ರಮೇಶ್ ಫ್ಯಾನ್ಸಿ , ಸಾಜೀದಾ ಹನೀಪ್, ವಾಣಿ ಗೋವಿಂದಪ್ಪ ಗೌಡ , ಸಹಕಾರ್ಯದರ್ಶಿಯಾಗಿ ದೀಪಾ ನಾಗರಾಜ್…
ಪ್ರಜಾಪ್ರಭುತ್ವ ರಕ್ಷಣೆಗಾಗಿ “ವೋಟ್ ಚೋರ್, ಗದ್ದಿ ಚೋಡ್” ಅಭಿಯಾನ — ಶ್ವೇತಾ ಬಂಡಿ
ಪ್ರಜಾಪ್ರಭುತ್ವ ರಕ್ಷಣೆಗಾಗಿ “ವೋಟ್ ಚೋರ್, ಗದ್ದಿ ಚೋಡ್” ಅಭಿಯಾನ — ಶ್ವೇತಾ ಬಂಡಿ ರಿಪ್ಪನ್‌ಪೇಟೆ: ಜನರ ಮತ ಕದ್ದುಕೊಂಡು ಅಧಿಕಾರದ ಕುರ್ಚಿ ಹಿಡಿದವರು ಪ್ರಜಾಪ್ರಭುತ್ವದ ಆತ್ಮವನ್ನೇ ಹತ್ತಿಕ್ಕಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ತೀವ್ರವಾಗಿ ಆರೋಪಿಸಿದ್ದಾರೆ. ಸೋಮವಾರ ಸಂಜೆ ರಿಪ್ಪನ್‌ಪೇಟೆ ವಿನಾಯಕ ಸರ್ಕಲ್‌ನಲ್ಲಿ ನಡೆದ “ವೋಟ್ ಚೋರ್, ಗದ್ದಿ ಚೋಡ್” ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಅವರು, “ಮತ ಕಳವು ಪ್ರಜಾಪ್ರಭುತ್ವದ ವಿರುದ್ಧದ ಗಂಭೀರ ಅಪರಾಧ. ಜನರ ಆಶಯಗಳ ವಿರುದ್ಧ ನಡೆದ ಈ…
ಯಕ್ಷಗಾನ ಕಲಾವಿದರಿಗೆ ರಾಜಾಶ್ರಯ ಸದಾ ಅವಶ್ಯ: ಹಿರಿಯ ಕಲಾವಿದ ಪುರಂದರ ಹೆಗಡೆ ಅಭಿಮತ.
ಯಕ್ಷಗಾನ ಕಲಾವಿದರಿಗೆ ರಾಜಾಶ್ರಯ ಸದಾ ಅವಶ್ಯ: ಹಿರಿಯ ಕಲಾವಿದ ಪುರಂದರ ಹೆಗಡೆ ಅಭಿಮತ. ಹೊಸನಗರ: ದೇಶದ ಸಾಂಸ್ಕೃತಿಕ ಪರಂಪರೆಯ ಹಿರಿಯ ಕಲಾ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನ ಕಲೆ ಆರಾಧಕರಾದ ಯಕ್ಷ ಕಲಾವಿದರಿಗೆ ರಾಜಾಶ್ರಯ ಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಸಾಧಕ ಪ್ರತಿಭಾವಂತ ಹಿರಿಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಬೇಕಾಗಿದೆ ಎಂದು ಹಿರಿಯ ಕಲಾವಿದ ಪುರಂದರ ಹೆಗಡೆ ಹೇಳಿದರು. ತಾಲ್ಲೂಕಿನ ಕಾರ್ಗಿಲ್ ಸಿದ್ಧಿವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ನಡೆದ ಹೆರಂಜಾಲು ಷಷ್ಠಬ್ಬಿ ಯಕ್ಷ ಕಾರ್ಯಕ್ರಮದಲ್ಲಿ ಕೂಡ ಮಾಡುವ ಹೆರಂಜಾಲು ಗೌರವ…
ಅರಣ್ಯ ಭೂಮಿ ಸಾಗುವಳಿದಾರರಿಗೆ ಗುಡ್ ನ್ಯೂಸ್: ರೈತರಿಗೆ ತೊಂದರೆ ಕೊಟ್ಟು ಒಕ್ಕಲೆಬ್ಬಿಸದಂತೆ ಸಚಿವ ಮಧು ಬಂಗಾರಪ್ಪ ಸೂಚನೆ
ಅರಣ್ಯ ಭೂಮಿ ಸಾಗುವಳಿದಾರರಿಗೆ ಗುಡ್ ನ್ಯೂಸ್: ರೈತರಿಗೆ ತೊಂದರೆ ಕೊಟ್ಟು ಒಕ್ಕಲೆಬ್ಬಿಸದಂತೆ ಸಚಿವ ಮಧು ಬಂಗಾರಪ್ಪ ಸೂಚನೆ ಬಹು ಹಿಂದಿನಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಅರಣ್ಯ ಭಾಗದ ರೈತರಿಗೆ ತೊಂದರೆ ನೀಡಿ ಒಕ್ಕಲೆಬ್ಬಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್, ನೀರಾವರಿ ಇಲಾಖೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ…
ಅನುದಾನಿತ ಶಾಲೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ: ಮಧು ಬಂಗಾರಪ್ಪ
ಅನುದಾನಿತ ಶಾಲೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ: ಮಧು ಬಂಗಾರಪ್ಪ ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಒಂದು ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ ಮಾಡಲಾಗುತ್ತದೆ. ಹೌದು.. ಈ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರೇ ಮಾಹಿತಿ ನೀಡಿದ್ದಾರೆ. ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು…
ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ
ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ ಗಾಳಿಬೈಲು ಗ್ರಾಮದಲ್ಲಿ ಈದ್ ಮಿಲಾದ್ ಸಂಭ್ರಮ ರಿಪ್ಪನ್‌ಪೇಟೆ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕು ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿದರು. ಇಲ್ಲಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ…
ನಿಟ್ಟೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ
ನಿಟ್ಟೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ನಿಟ್ಟೂರು: ಪ್ರಜ್ಞಾಭಾರತಿ ವಿದ್ಯಾ ಕೇಂದ್ರದ ಆಶ್ರಯದಲ್ಲಿ ನಗರ ಹೋಬಳಿ ವ್ಯಾಪ್ತಿಯ 17 ವರ್ಷದೊಳಗಿನ ವಯೋಮಿತಿಯ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕ್ರೀಡಾಕೂಟ ಇಂದು ನಿಟ್ಟೂರಿನ ಕಾಲೇಜು ಮೈದಾನದಲ್ಲಿ ಭವ್ಯವಾಗಿ ಆರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹೊಸನಗರ ತಾಲೂಕು ಕೆ.ಡಿ.ಪಿ ಸದಸ್ಯೆ ಸುಮಾ ಸುಬ್ರಹ್ಮಣ್ಯ ಅವರು ನೆರವೇರಿಸಿ ನಂತರ ಮಾತನಾಡಿ“ವಿದ್ಯಾರ್ಥಿಗಳ ಉನ್ನತಿಗಾಗಿ ಶ್ರಮಿಸುತ್ತಿರುವ ಪೋಷಕರಿಗೆ ಗೌರವ ನೀಡಬೇಕು, ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಬೇಕು,” ಎಂದು ಹಾರೈಸಿದರು. ಕ್ರೀಡೆ ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಅನನ್ಯವಾದ ಪಾತ್ರವಹಿಸುತ್ತದೆ…
ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯ ವಿರೋಧಿಸಿ ಹೊಳೆಬೆನವಳ್ಳಿ ಗ್ರಾಮಸ್ಥರ ಪ್ರತಿಭಟನೆ
ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯ ವಿರೋಧಿಸಿ ಹೊಳೆಬೆನವಳ್ಳಿ ಗ್ರಾಮಸ್ಥರ ಪ್ರತಿಭಟನೆ ಶಿವಮೊಗ್ಗ : ಹೊಳೆಬೆನವಳ್ಳಿ ಗ್ರಾಮ ಠಾಣಾ ಜಾಗದಲ್ಲಿ ಸ್ವಚ್ಛ ಸಂಕೀರ್ಣ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯ ವಿರೋಧಿಸಿ ಇಂದು ಹೊಳೆಬೆನವಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಹೊಳೆಬೆನವಳ್ಳಿ ಗ್ರಾಮದಲ್ಲಿ ಗ್ರಾಮ ಠಾಣಾ ಜಾಗವಿದ್ದು, ಈ ಜಾಗದ ಸುತ್ತಮುತ್ತ ಉಡಸಲಮ್ಮ, ಮಾತಂಗೆಮ್ಮ, ನಂದಿಬಸವೇಶ್ವರ ದೇವಸ್ಥಾನಗಳಿವೆ. ತ್ಯಾಜ್ಯ ವಿಲೇವಾರಿ ಘಟಕದಿಂದಾಗಿ ಊರಿನ ನಾಗರೀಕರಿಗೆ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ನಾಗರೀಕರ ವಿರೋಧವಿದ್ದರೂ…
ರೌಡಿಸಂ ಚಟುವಟಿಕೆ ನಿಗ್ರಹಕ್ಕೆ ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಸೂಚನೆ
ರೌಡಿಸಂ ಚಟುವಟಿಕೆ ನಿಗ್ರಹಕ್ಕೆ ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಸೂಚನೆ ಶಿವಮೊಗ್ಗ : , ಅಕ್ಟೋಬರ್ 10: ‘ರೌಡಿಸಂ ಚಟುವಟಿಕೆ ಮಟ್ಟ ಹಾಕಬೇಕು. ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವ ರೌಡಿ ಆಸಾಮಿಗಳ ವಿರುದ್ದ ಕ್ರಮಕೈಗೊಳ್ಳಬೇಕು’ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ನಗರದ ಡಿಎಆರ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಉಪ ವಿಭಾಗಗಳ ಡಿವೈಎಸ್ಪಿ, ಇನ್ಸ್’ಪೆಕ್ಟರ್, ಸಬ್ ಇನ್ಸ್’ಪೆಕ್ಟರ್ ಗಳೊಂದಿಗೆ ನಡೆಸಿದ ಅಪರಾಧ ವಿಮರ್ಶನಾ ಸಭೆಯ ಅಧ್ಯಕ್ಷತೆವಹಿಸಿ…