Headlines

ಕೋಟಿ ಕೋಟಿ ಒಡೆಯನಿಗೆ ಚಟ್ಟ ಕಟ್ಟಿದ ಬ್ಯೂಟಿಪಾರ್ಲರ್ ಆಂಟಿ – ರೋಚಕ ಮರ್ಡರ್ ಮಿಸ್ಟ್ರಿಯನ್ನು ಬೇಧಿಸಿದ ಬಂಕಾಪುರ ಪೊಲೀಸರು

ಕೋಟಿ ಕೋಟಿ ಒಡೆಯನಿಗೆ ಚಟ್ಟ ಕಟ್ಟಿದ ಬ್ಯೂಟಿಪಾರ್ಲರ್ ಆಂಟಿ – ರೋಚಕ ಮರ್ಡರ್ ಮಿಸ್ಟ್ರಿಯನ್ನು ಬೇಧಿಸಿದ ಬಂಕಾಪುರ ಪೊಲೀಸರು

ಆಕೆ ಆತನಿಗೆ ಮೂರನೇ ಪತ್ನಿ.‌ ಕೋಟಿ‌ಕೋಟಿ ಆಸ್ತಿ ಹೊಂದಿದ್ದ ಆತ ಆಕೆಯ ಜೀವನೋಪಾಯಕ್ಕಾಗಿ ಒಂದು ಬ್ಯೂಟಿ ಪಾರ್ಲರ್ ಶಾಪ್ ಹಾಕಿಕೊಟ್ಟಿದ್ದ. ಮೂರನೇ ಪತ್ನಿಗಾಗಿ ಕೋಟಿ ಕೋಟಿ‌ ಮೌಲ್ಯದ ಆಸ್ತಿ‌ ಮಾರಾಟ ಮಾಡಿ ಸಾಕಿದ್ದ ಕೊನೆಯಲ್ಲಿ ಆಕೆಯಿಂದಲೇ ಸಿನಿಮಾ‌ ಸ್ಟೈಲ್ ನಲ್ಲಿ‌ ಬರ್ಬರವಾಗಿ ಮರ್ಡರ್ ಆಗಿದ್ದಾನೆ.‌ ಸಿನಿಮಾ‌ ಸ್ಟೈಲ್‌ನಲ್ಲಿ ಕೊಲೆಯಾಗಿರೋ ಆ‌ ಕೋಟಿ ಒಡೆಯನ ಹುಬ್ಬಳ್ಳಿ ಟೂ ಬಂಕಾಪುರ ಮರ್ಡರ್ ಮಿಸ್ಟರಿಯನ್ನು ಬಂಕಾಪುರ ಠಾಣೆಯ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.

ನಡೆದಿದ್ದೇನು..!!??

ಕಾರವಾರ ಜಿಲ್ಲೆಯ‌ ಮುಂಡಗೋಡ ತಾಲೂಕಿನ ಮೂಡಸಾಲಿ ಮೂಲದ ಮಂಜುನಾಥ ಜಾಧವ್ ಎಂಬುವವನೇ ತನ್ನ ಮೂರನೇ ಪತ್ನಿಯಿಂದ ಬರ್ಬರವಾಗಿ ಕೊಲೆಯಾಗಿರೋ ವ್ಯಕ್ತಿ.‌ ಕಳೆದ ಹದಿನಾಲ್ಕು ವರ್ಷಗಳಿಂದ ಮಧು ಎಂಬ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಂಜುನಾಥ ಆಕೆಗಾಗಿ 2 ಕೋಟಿ ಮೌಲ್ಯದ ಅಡಿಕೆ ತೋಟ ಮಾರಾಟ‌ ಮಾಡಿ‌ ಆಕೆಯ ಜೊತೆ ಜೀವನ‌ ನಡೆಸುತ್ತಿದ್ದ. ಸಾಲದೆಂಬಂತೆ ಆಕೆಗೆ ಒಂದು‌ ಬ್ಯೂಟಿ‌ ಪಾರ್ಲರ್ ಕೂಡ ಹಾಕಿಕೊಟ್ಟಿದ್ದ. ಆದ್ರೆ ಇಷ್ಟೆಲ್ಲ ಸರ್ವಸ್ವವನ್ನೇ ಧಾರೆ ಎರೆದಿದ್ದ ಆ ಮಂಜುನಾಥನಿಗೆ ಈ ಐನಾತಿ‌ ಆಂಟಿ ಕಡೆಗೂ ತನ್ನ ಪ್ರಿಯತಮನ ಚಟ್ಟ ಕಟ್ಟೇಬಿಟ್ಟಿದ್ದಾಳೆ.

ಕಳೆದ ಹದಿನಾಲ್ಕು ವರ್ಷಗಳಿಂದ ಮಂಜುನಾಥ ಹಾಗೂ ಮಧು ನಡುವೆ ಅನೈತಿಕ‌ ಸಂಬಂಧ ಇರುತ್ತೆ. ಈ‌ ಅನೈತಿಕ‌ ಸಂಬಂಧಕ್ಕೂ ಮೊದಲು ಈ‌ ಆಂಕಲ್ ಸಹ ಇಬ್ಬರ ಹೆಂಡಿರ‌ ಮುದ್ದಿನ‌ ಗಂಡನಾಗಿ ಜೀವನ‌ ಸಾಗಿಸ್ತಿರ್ತಾನೆ.‌ ಆದ್ರೆ ಮಂಜುನಾಥನ ಈ ಡಬಲ್ ಡೆಕ್ಕರ್ ಜೀವನದ ನಡುವೆಯೇ ಮತ್ತೊಬ್ಬ ಐನಾತಿ ಆಂಟಿ‌ ಜೊತೆ ಅದಾಗ್ಲೇ ಈ ಮಂಜುನಾಥ ಲವ್ವಿ‌ಡವ್ವಿ‌ ಶುರು ಮಾಡಿರ್ತಾನೆ.‌ ಹೀಗೆ ಇವರಿಬ್ಬರ ಲವ್ವಿ‌ಡವ್ವಿ‌ ಶುರುವಾಗಿ ಹದಿನಾಲ್ಕು ವರ್ಷ ಕಳೆದಿದ್ದರೂ ಆಕೆಯ ಜೀವನೋಪಾಯಕ್ಕಾಗಿ ಮಂಜುನಾಥ ಕೋಟಿ‌ ಕೋಟಿ‌ ಹಣ ಸುರಿದದ್ದೂ ಉಂಟು.‌ ಎರಡು ಕೋಟಿ ಮೌಲ್ಯದ ಅಡಿಕೆ ತೋಟ ಮಾರಾಟ ಮಾಡಿ ಆಕೆಗೆ ಒಂದು‌ ಬ್ಯೂಟಿ‌ ಪಾರ್ಲರ್ ಕೂಡ ಓಪನ್ ಮಾಡಿ‌ಕೊಟ್ಟಿದ್ದ. ಇಷ್ಟೆಲ್ಲ ಧಾರೆ ಎರೆದಿದ್ದರೂ ಮಂಜುನಾಥನ ಜೊತೆ ಈ ಬ್ಯೂಟಿ ಪಾರ್ಲರ್ ಆಂಟಿ ಜೊತೆ ಆಗಾಗ ಜಗಳ ಆಗುತ್ತಲೇ ಇರುತ್ತೆ.‌

ಇಬ್ಬರ ನಡುವೆ ನಡೆದಂತಹ ಕೆಲವೊಂದು ವ್ಯವಹಾರದ ಹಿನ್ನೆಲೆ ನಡೆದ ಚೆಕ್ ಬೌನ್ಸ್ ವಿಚಾರವಾಗಿ ಶುರುವಾದ ಆ ಜಗಳ ಮಂಜುನಾಥನ ಕೊಲೆಯಲ್ಲಿ‌ ಅಂತ್ಯವಾಗಿದೆ. ಇದೇ 9 ರಂದು ರಾತ್ರಿ ಇಬ್ಬರ ನಡುವೆ ನಡೆದ ಆ ಜಗಳದ ಹಿನ್ನೆಲೆ ಮಂಜುನಾಥನ ತಲೆಗೆ ಲಟ್ಟಣಿಗೆಯಿಂದ ಬಿರುಸಾಗಿ ಹೊಡೆದಿದ್ದಾಳೆ. ತಲೆಗೆ ಬಿರುಸಾಗಿ ಹೊಡೆದ ಪರಿಣಾಮ‌ ಮಂಜುನಾಥ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇಲ್ಲೇ ಇದೇ‌ ನೋಡಿ ಈ ಕೊಲೆಯ ಬಿಗ್ ಟ್ವಿಸ್ಟ್…..

ಲಟ್ಟಣಿಗೆಯಿಂದ ಬಲವಾಗಿ ಮಂಜುನಾಥನ ತಲೆಗೆ ಹೊಡೆದು‌ ಕೊಲೆಗೈದ ಆಂಟಿ ಮಧು, ಆ ಮಂಜಯನಾಥನ‌ ಶವವನ್ನ ನವನಗರದಿಂದ ಹಾವೇರಿ ಜಿಲ್ಲೆಯ ಬಂಕಾಪುರದ‌ ಬಳಿ ಒಂದು ಬೊಲೆರೋ ವಾಹನದಲ್ಲಿ ಕೊಂಡೊಯ್ದು ಸಿನಿಮೀಯ ರೀತಿಯಲ್ಲಿ ಪೊಲೀಸರಿಗೆ ಚೆಳ್ಳೆ ಹಣ್ಣು‌ ತಿನ್ನಿಸುವ ಡ್ರಾಮಾ ಆಡಿದ್ದಾಳೆ. ನವನಗರದಲ್ಲಿ‌ ಕೊಲೆ ಮಾಡಿ ಮಂಜುನಾಥನ ಶವವನ್ನ ಒಂದು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಆಕೆಯ ಮಕ್ಕಳ ಜೊತೆಗೂಡಿ ಹಾವೇರಿ ಜಿಲ್ಲೆಯ ಬಂಕಾಪುರದ ಬಳಿ ಹೊತ್ತೊಯ್ದು ಅಪಘಾತದ ರೀತಿಯಲ್ಲಿ ಕಥೆ ಕಟ್ಟಿದ್ದಾರೆ. ಹೀಗೆ ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಿದ್ದ ಈ ಬ್ಯೂಟಿಫುಲ್ ಬ್ಯೂಟಿಪಾರ್ಲರ್ ಆಂಟಿಯ ಕಟ್ಟು‌ಕಥೆ ಇದೀಗ ಪೊಲೀಸರ‌ ಮೂಲಕ‌ ಅನಾವರಣಗೊಂಡಿದೆ.

ಅಪಘಾತದ ಕಟ್ಟು ಕಥೆ ಕಟ್ಟಿರುವ ಹಿನ್ನೆಲೆ ಆತ ಬಳಸುತ್ತಿದ್ದ ಬೈಕ್ ನ ಸುಳಿವಿನ ಆಧಾರದ ಮೇಲೆ ಬಂಕಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ ಕುಂಬಾರ ಮಾರ್ಗದರ್ಶನದಲ್ಲಿ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ತಂಡ ಇದೀಗ ಬ್ಯೂಟಿ ಆಂಟಿ ಜೊತೆಗೆ ಶವ ಸಾಗಿಸಿದ್ದ ಬೊಲೆರೋ ಮಾಲೀಕ‌ ಅಲ್ಕಾಬಕ್ಷ ನದಾಫ್ ಸೇರಿದಂತೆ ಇಬ್ಬರನ್ನೂ ಬಂಧನ ಮಾಡಿದ್ದು, ಕೊಲೆಯ ಹಿಂದಿನ ರಹಸ್ಯದ ಕುರಿತು ಮತ್ತಷ್ಟು ಸಮಗ್ರ ತನಿಖೆ ನಡೆಸಿದ್ದಾರೆ.

ಒಟ್ಟಿನಲ್ಲಿ ಗಾದೆ ಮಾತಿನಂತೆ ಹೆಣ್ಣು ಹೊನ್ನು, ಮಣ್ಣಿನ ಹಿಂದೆ ಹೋದವ್ರು ತಮ್ಮ ಜೀವನ‌ವನ್ನ ರೂಪಿಸಿಕೊಂಡಿದ್ದಕ್ಕಿಂತ ಬದುಕನ್ನ ಮೂರಾಬಟ್ಟೆ ಮಾಡುಕೊಂಡವರೇ ಹೆಚ್ಚು ಅನ್ನೋದಕ್ಕೆ ಈ‌ ಮರ್ಡರ್ ಮಿಸ್ಟರಿಯೇ ಒಂದು ಉತ್ತಮ‌ ಉದಾಹರಣೆ ಅಂದ್ರೆ ತಪ್ಪಾಗ್ಲಿಕ್ಕಿಲ್ಲ.

ಈ ಕಾರ್ಯಾಚರಣೆಯಲ್ಲಿ ಬಂಕಾಪುರ ಪಿಎಸ್‌ಐ 2 ಎಸ್ ಎಮ್ ವನಹಳ್ಳಿ , ಸಿಬ್ಬಂದಿಗಳಾದ ನದಾಪ್ ,ಶಂಭು ಮಲಿವಾಳ, ವೆಂಕಟೇಶ್ ಲಮಾಣಿ ,ಗೋವಿಂದ ಲಮಾಣಿ , ಚೀರಪ್ಪ , ಸುಮಿತ್ರಾ ಹಿರೇಮನಿ ,ಸತೀಶ್ ಹಾಗೂ ಮಾರುತಿ ಇದ್ದರು.

Leave a Reply

Your email address will not be published. Required fields are marked *