ಜಿಲ್ಲಾ ಸುದ್ದಿ:
ಮುಂದಿನ ದಿನಗಳಲ್ಲಿ ರಿಪ್ಪನ್ ಪೇಟೆಯ ಸಮಗ್ರ ಚಿತ್ರಣವನ್ನು ಬದಲಾಯಿಸುತ್ತೇನೆ : ಶಾಸಕ ಹರತಾಳು ಹಾಲಪ್ಪ
ರಿಪ್ಪನ್ ಪೇಟೆ : ಪಟ್ಟಣದಲ್ಲಿ 4.85 ಕೋಟಿ ರೂಪಾಯಿ ವೆಚ್ಚದ ಬಾಲಕರ ವಸತಿ ನಿಲಯದ ಶಂಕುಸ್ಥಾಪನೆ ಹಾಗೂ 1.65 ಕೋಟಿ ವೆಚ್ಚದ ಸರ್ಕಾರಿ ಪದವಿ ಕಾಲೇಜಿನ ವಿಜ್ಞಾನ ವಿಭಾಗದ ನೂತನ ಕಟ್ಟಡದ ಉದ್ಘಾಟನೆಯನ್ನು ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು ಮುಂದಿನ ದಿನಗಳಲ್ಲಿ ರಿಪ್ಪನ್ ಪೇಟೆ ಯನ್ನು ಉನ್ನತಮಟ್ಟದ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು, ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸದುಪಯೋಗ ಪಡೆದು ಉನ್ನತ ಮಟ್ಟದಲ್ಲಿ ಬೆಳೆದು ಸಮಾಜಕ್ಕೆ ಮಾದರಿಯಾಗಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ…
ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಸಾರ್ವಜನಿಕರ ಆಗ್ರಹ :
ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಅರಸಾಳುವಿನಲ್ಲಿ ಇರುವ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ರೈಲು ನಿಲುಗಡೆ ಮಾಡಬೇಕೆಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅರಸಾಳುವಿನಲ್ಲಿ ರೈಲು ನಿಲುಗಡೆಯಿಂದ ರಿಪ್ಪನ್‌ಪೇಟೆ, ಅರಸಾಳು, ಬೆಳ್ಳೂರು, ಬಸವಾಪುರ, ಕಳಸೆ, ಬುಕ್ಕಿವರೆ, ಹುಂಚ, ಅಮೃತ, ಹೆದ್ದಾರಿಪುರ, ಹಾರೋಹಿತ್ತಲು, ಹೆದ್ದಾರಿಪುರ, ಕಲ್ಲೂರು, ಹೊಸನಗರ, ರಾಮಚಂದ್ರಪುರಮಠ, ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ಕುಂದಾಪುರ, ಬೈಂದೂರು, ಭಟ್ಕಳ, ಉಡುಪಿ, ಕೋಣಂದೂರು, ಆರಗ, ತೀರ್ಥಹಳ್ಳಿ, ಹೊಸಗಂಡಿ, ಸಿದ್ದಾಪುರ, ಆಗುಂಬೆ, ಹರತಾಳು, ಹೀಗೆ ಕೊಡಚಾದ್ರಿ, ಸಿಗಂದೂರು ಕವಲೆದುರ್ಗ ಕೋಟೆ, ಜೋಗ ಜಲಪಾತ ಇನ್ನಿತರ…
ಪ್ರಧಾನಿ ಮೋದಿಗೆ ಪಂಜಾಬ್ ಸರಕಾರ ಅವಮಾನ ಮಾಡಿದ್ದನ್ನು ಖಂಡಿಸಿ ರಿಪ್ಪನ್ ಪೇಟೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪಂಜಿನ ಮೆರವಣಿಗೆ :
ರಿಪ್ಪನ್ ಪೇಟೆ : ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಿರುವ ಮತ್ತು ಅವರ ಪ್ರಯಾಣಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿನಾಯಕ ವೃತ್ತದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ಘಟಕದ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಮಾತನಾಡಿ ಪ್ರಧಾನಿ ಮೋದಿ ನಿನ್ನೆ ಪಂಜಾಬ್ ನಲ್ಲಿರುವ ಭಟಿಂಡಾದಿಂದ ಫಿರೋಜ್ ಪುರದ ಹುಸೇನ್ ವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕಿತ್ತು. ಅಲ್ಲಿ ಅವರು ಭಗತ್ ಸಿಂಗ್…
ಅಸಮರ್ಪಕ ರಸ್ತೆ ನಿರ್ವಹಣೆ : ಜೀರಿಗೆಮನೆ ಗ್ರಾಮಸ್ಥರ ದಿಡೀರ್ ಪ್ರತಿಭಟನೆ
ರಿಪ್ಪನ್ ಪೇಟೆ: ಅಸಮರ್ಪಕ ರಸ್ತೆ ನಿರ್ವಹಣೆ ಹಾಗೂ ಹೊಂಡ ಗುಂಡಿಗಳಿಗೆ ತೇಪೆ ಹಾಕುವ ಪ್ರಕ್ರಿಯೆಯಲ್ಲಿ ಲೋಪ ಎಸಗಲಾಗಿದೆ. ಸರಿಯಾದ ರೀತಿಯಲ್ಲಿ ಹೊಂಡ ಗುಂಡಿಗಳನ್ನು ಮುಚ್ಚದೆ ಬೇಕಾಬಿಟ್ಟಿಯಾಗಿ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಡಾಂಬರೀಕರಣದ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀರಿಗೆಮನೆ ಎಂಬಲ್ಲಿ ನಡೆದಿದೆ. ಹಲವಾರು ವರ್ಷಗಳ ಹಿಂದೆ ರಿಪ್ಪನ್ ಪೇಟೆ ಯಿಂದ ಹೆದ್ದಾರಿಪುರ ಮಾರ್ಗವಾಗಿ ಜೀರಿಗೆಮನೆ ವಡಹೊಸಹಳ್ಳಿ ಮಾರ್ಗವನ್ನು ಮಾಡಲಾಗಿತ್ತು. ಆದರೆ ಇದೀಗ ಡಾಂಬರೀಕರಣ ಮಾಡಿ ಕೆಲವು…
ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬ್ ಸರ್ಕಾರ ಅವಮಾನ ಮಾಡಿದ ಘಟನೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ…
ಶಿವಮೊಗ್ಗ: ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಿರುವ ಮತ್ತು ಅವರ ಪ್ರಯಾಣಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಸಮಿತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರಧಾನಿ ಮೋದಿ ನಿನ್ನೆ ಪಂಜಾಬ್ ನಲ್ಲಿರುವ ಭಟಿಂಡಾದಿಂದ ಫಿರೋಜ್ ಪುರದ ಹುಸೇನ್ ವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕಿತ್ತು. ಅಲ್ಲಿ ಅವರು ಭಗತ್ ಸಿಂಗ್ ಇತರ ಸ್ವಾತಂತ್ರ್ಯವೀರ ಹುತಾತ್ಮರಿಗೆ ಗೌರವ ಸಲ್ಲಿಸುವ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡುವ ಕಾರ್ಯಕ್ರಮವಿತ್ತು…
ಹೊಸನಗರದಲ್ಲಿ ನೂತನವಾಗಿ ಶುಭಾರಂಭಗೊಂಡ ಡಾ.ಸಾಯಿಲ್ ಜೈವಿಕ ಗೊಬ್ಬರದ ಶಾಖೆ :
ಹೊಸನಗರ : ಅಡಕೆ ಬೆಳೆಗಾರರ ಮನೆ ಮಾತಗಿರುವ ಡಾ ಸಾಯಿಲ್ ಜೈವಿಕ ಗೊಬ್ಬರದ ಶಾಖೆ ಈಗ ಹೊಸನಗರದಲ್ಲೂ ಪ್ರಾರಂಭವಾಗಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದಿರುವ ಮತ್ತು ಹೊಸನಗರದ ಕೃಷಿ ಇಲಾಖೆ ವತಿಯಿಂದ ದೃಡೀಕರಿಸಿ ಪರವಾನಿಗೆ ನೀಡಲಾಗಿರುವ ವೀರಭದ್ರೇಶ್ವರ ಟ್ರೇಡರ್ಸ್ ಶುಭಾರಂಭಗೊಂಡಿದೆ. ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಗುರುಶಕ್ತಿ ಟ್ರಾನ್ಸ್ ಪೋರ್ಟ್ ಮಾಲೀಕರಾದ ವಿದ್ಯಾದರ್ ಜೈವಿಕ ಗೊಬ್ಬರಗಳು ಅಡಕೆ, ಕಬ್ಬು, ತೆಂಗು ಮತ್ತು ಎಲ್ಲಾ ರೀತಿಯ ಬೆಳೆಗಳಿಗೆ ಲಭ್ಯ. ಜೈವಿಕ ಗೊಬ್ಬರಗಳ ಬಳಕೆ ಇಂದ ಭೂಮಿಯಲ್ಲಿ ತ್ವರಿತವಾಗಿ…
ಲಾಕ್ ಡೌನ್ ಗೆ ವಿರೋಧ ವ್ಯಕ್ತಪಡಿಸಿದ ಸಚಿವ ಕೆ ಎಸ್ ಈಶ್ವರಪ್ಪ
ಶಿವಮೊಗ್ಗ : ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಿರುವ ಬೆಂಗಳೂರಿನ ಕಠಿಣ ನಿಯಮಗಳು ಕೋವಿಡ್ ಕಡಿಮೆ ಇರುವ ಇತರೆ ಜಿಲ್ಲೆಗಳಿಗೆ ಬೇಡ ಎಂದು ಸಿಎಂಗೆ ಮನವಿ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿ ಸಂಖ್ಯೆ ಹೆಚ್ಚಿದೆ. ಆದರೆ, ಇತರೆ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ ಎರಡು, ಐದು ಹೆಚ್ಚಿದ್ರೆ ಹತ್ತು ಇರಬಹುದು. ಬೆಂಗಳೂರಿನಲ್ಲಿ ಕೊರೊನಾ ಕಂಟ್ರೋಲ್ ಮಾಡುವುದು ಎಲ್ಲರ ಜವಾಬ್ದಾರಿ ಇದೆ. ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ…
ಡಿ.ಕೆ. ಸುರೇಶ್ ವಿರುದ್ಧ ಸಾಗರ ಬಿಜೆಪಿ ಕಾರ್ಯಕರ್ತರ ಆಕ್ರೋಶದ ಪ್ರತಿಭಟನೆ…! ಡಿ.ಕೆ. ಸುರೇಶ್ ಪ್ರತಿಕೃತಿ ದಹನ…!
ಸಾಗರ: ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಎಂಎಲ್ಸಿ ರವಿ ಅವರು ಸಚಿವ ಅಶ್ವಥ್ ನಾರಾಯಣ್ ಅವರ ಭಾಷಣಕ್ಕೆ ಅಡ್ಡಿ ಪಡಿಸಿ, ಗೂಂಡಾ ವರ್ತನೆ ತೋರಿದ್ದಾರೆಂದು ಆರೋಪಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಮಂಗಳವಾರ ನಗರ ಸಾಗರ್ ಹೋಟೆಲ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಡಿ.ಕೆ.ಸುರೇಶ್ ಅವರ ಭಾವಚಿತ್ರವನ್ನು ಧಹಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಡಿ.ಕೆ.ಸುರೇಶ್ ಹಾಗೂ ಎಂಎಲ್ಸಿ ರವಿ ಇಬ್ಬರಿಗೂ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಜರುಗಿಸಬೇಕು.ಹಾಗೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು…
ಶಿವಮೊಗ್ಗದ ನಗರ ಮತ್ತು ಗ್ರಾಮಾಂತರ ಯೋಜನೆ ಕಚೇರಿಯಲ್ಲಿ ಭೂಪರಿವರ್ತನೆಗೆ ಉದ್ದೇಶ ಪೂರಕ ವಿಳಂಭ : ರಿಪ್ಪನ್ ಪೇಟೆ ಗ್ರಾಪಂ ಸದಸ್ಯನಿಂದ ಏಕಾಂಗಿ ಧರಣಿ
ರಿಪ್ಪನ್ ಪೇಟೆ : ಭೂ ಪರಿಪರ್ವತನೆಗಾಗಿ ಒತ್ತಾಯಿಸಿ ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಸದಸ್ಯ ನಿರೂಪ್ ಕುಮಾರ್ ಆರ್.ವಿ. ಶಿವಮೊಗ್ಗದ ಕೆಎಸ್ ಆರ್ ಟಿ ಸಿ ಬಸ್ ಡಿಪೋ ಹಿಂಭಾಗದ ಆನಂದರಾವ್ ಬಡಾವಣೆಯಲ್ಲಿರುವ ನಗರ ಮತ್ತು ಗ್ರಾಮಾಂತರ ಯೋಜನೆ ಕಚೇರಿಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದಾರೆ. ಹೊಸನಗರ ತಾ. ಬೆನವಳ್ಳಿ ಸರ್ವೆ ನಂಬರ್158 2 ಎಕರೆ ಜಮೀನಿಗೆ ಸೈಟ್ ನಿರ್ಮಿಸಲು ಭೂಪರಿವರ್ತನೆಗೆ ನಿರೂಪ್ ಕುಮಾರ್ ಅಕ್ಟೋಬರ್ ತಿಂಗಳಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭೂ ಪರಿವರ್ತನೆಯನ್ನು…
ತುಂಗಾ ನದಿಯಲ್ಲಿ ತೇಲುತ್ತಿದ್ದ ಅರ್ಧಂಬರ್ಧ ಸುಟ್ಟ ಶವ : ಹಲವು ಅನುಮಾನಕ್ಕೆ ಎಡೆ
ಶಿವಮೊಗ್ಗದ ತುಂಗನದಿಯಲ್ಲಿ ಅರ್ಧಂಬರ್ಧ ಸುಟ್ಟ ಶವವೊಂದು ದೊರೆತಿದೆ. ಇಷ್ಟುದಿನ ಗಂಗಾನದಿಯಲ್ಲಿ ಇಂತಹ ಅರ್ದಂಬರ್ಧ ಸುಟ್ಟ ಹೆಣ ದೊರೆಯುವ ದೃಶ್ಯಾವಳಿಗಳು ಕಂಡುಬರುತ್ತಿದ್ದವು ಆದರೆ ತುಂಗ ನದಿಯಲ್ಲಿ ಈ ಶವ ದೊರೆತಿರುವುದು ಚರ್ಚೆಗೆ ಗ್ರಾಸವಾಗಿದೆ. ಇಂದು ಸಂಜೆ 6 ಗಂಟೆಯ ವೇಳೆಗೆ ರೋಟರಿ ಚಿತಾಗಾರದಿಂದ ತುಂಗಾನದಿಗೆ ಹೋಗುವ ಜಾಗದಲ್ಲಿ ಈ ಶವ ಪತ್ತೆಯಾಗಿದೆ. ಈ ಶವ ಸೊಂಟದ ಕೆಳಭಾಗ ಪೂರ್ತಿ ಸುಟ್ಟು ಹೋಗಿದೆ. ಆದರೆ ಇದು ಗಂಡೋ ಹೆಣ್ಣೋ ಎಂಬುದು ಮರಣೋತ್ತರ ಪರೀಕ್ಷೆಯ ನಂತರ ತಿಳಿದು ಬರಬೇಕಿದೆ. ಜೊತೆಗೆ ಯಾವ…