ಜಿಲ್ಲಾ ಸುದ್ದಿ:
ರಿಪ್ಪನ್ ಪೇಟೆ : ಅತ್ಯಂತ ಯಶಸ್ವಿಯಾಗಿ ನಡೆದ ಸಾಮೂಹಿಕ ಗಣಹೋಮ ಮತ್ತು ಸುಮಂಗಲಿ ಪೂಜೆ
ರಿಪ್ಪನ್ ಪೇಟೆ :ಮನುಷ್ಯ ತಂತ್ರಜ್ಞಾನದ ಮೂಲಕ ಸಂಚರಿಸುತ್ತಿದ್ದಾನೆ. ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಮಾನವೀಯ ಮೌಲ್ಯಗಳೆಂದರೆ ಮನೆಯಲ್ಲಿ ಭಜನೆಗಳು,ದೇವತಾ ಆರಾಧನೆಗಳು, ಮಕ್ಕಳಿಗೆ ವಿಶೇಷವಾಗಿರುವಂತಹ ಧರ್ಮ ಚಿಂತನೆಗಳನ್ನು ಕಡಿಮೆ ಮಾಡುತ್ತಿದ್ದೇವೆ.ಮಕ್ಕಳನ್ನು ಸಧ್ರಡವಾದ ವ್ಯಕ್ತಿಗಳನ್ನು ಮಾಡಬೇಕಾದರೆ ತಂದೆ ತಾಯಿಗಳಾದವರು ಒಳ್ಳೆಯ ಸಂಸ್ಕಾರವಂತರಾಗಬೇಕಾಗಿದೆ. ಇಂದು ರಾಜಮಹಾರಾಜರ ಚರಿತ್ರೆಯನ್ನು ಹೇಳಬೇಕಾದರೆ ಅವರ ಹಿಂದೆ ಅವರ ತಾಯಿಯ ಪರಿಶ್ರಮ ಎಷ್ಟಿರಬಹುದು ಎಂಬುದನ್ನು ಊಹಿಸಬೇಕಾಗುತ್ತದೆ. ನಾವು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿದಾಗ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯನ್ನು ಕೊಟ್ಟಂತಾಗುತ್ತದೆ, ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳನ್ನು ಕೊಟ್ಟಾಗ ಸಮಾಜ ಸದೃಢವಾಗುತ್ತದೆ. ಅಂತಹ ಸದೃಡವಾದ…
ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಬಣ್ಣ ಬಳಿದ ಪ್ರಕರಣ : ಕಿಡಿಗೇಡಿಗಳ ಬಂಧಿಸುವಂತೆ ಒತ್ತಾಯಿಸಿ ಕರವೇ ಪ್ರತಿಭಟನೆ
ರಿಪ್ಪನ್ ಪೇಟೆ : ಕರ್ನಾಟಕದ ಮೇರುನಟ ಕರ್ನಾಟಕರತ್ನ ಪುನೀತ್ ರಾಜ್ ಕುಮಾರ್ ರವರ ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಪೊಲೀಸ್ ಇಲಾಖೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ಪಟ್ಟಣದ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಪುನೀತ್ ರಾಜ್ ಕುಮಾರ್ ರವರ ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಪೊಲೀಸ್ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ…
ಕರ್ತವ್ಯದ ನಡುವೆಯೂ ಮಾನವೀಯತೆ ಮೆರೆದ ಕಾರ್ಗಲ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ನಾಯ್ಕ್…
ಸಾಗರ: ಇಂದು ಬೆಳಗ್ಗೆ ಸಾಗರ ಹೊರವಲಯದ ಗ್ರಾಮಾಂತರ ವ್ಯಾಪ್ತಿಯ ಜೋಗ ರಸ್ತೆಯ ಕಾನ್ಲೆ ತಿರುವಿನ ಬಳಿ ಸಾಗರದಿಂದ ಜೋಗ ಕಡೆಗೆ ಯುವಕ ಯುವತಿ ಒಂದೇ ಹೋಗುತ್ತಿದ್ದ ಒಂದೇ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಎದುರಿನಿಂದ ಹೋಗುತ್ತಿದ್ದ ಬಸ್ಸನ್ನು ಹಿಂದಿಕ್ಕಿ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರ್ ಗೆ ತಗುಲಿ ಯುವಕನಿಗೆ ಅಲ್ಪ ಸ್ವಲ್ಪ ಹಾಗೂ ಯುವತಿಗೆ ಗಂಭೀರ ಸ್ವರೂಪದ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಕರ್ತವ್ಯಕ್ಕೆಂದು ಅದೇ…
ಖ್ಯಾತ ಅಂಕಣಕಾರ,ಲೇಖಕ ಕೆ ಅರುಣ್ ಪ್ರಸಾದ್ ರವರ ಎರಡನೇ ಪುಸ್ತಕ ಬಿಡುಗಡೆ :
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿ ಉದ್ಯಮದಲ್ಲೇ ಹೊಸ ಅಲೆಯನ್ನೇ ಎಬ್ಬಿಸಿದಂತಹ ಖ್ಯಾತ ಉದ್ಯಮಿ, ಅಂಕಣಕಾರ, ಲೇಖಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ, ಅರುಣ್ ಪ್ರಸಾದ್ ರವರ ಎರಡನೇ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕಥಾ ಪುಸ್ತಕವಾದ ” ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ” ಪುಸ್ತಕವನ್ನು ಖ್ಯಾತ ಜಲತಜ್ಞ ಶಿವಾನಂದ ಕಳವೆ ಬಿಡುಗಡೆ ಮಾಡಿದರು. ಇನ್ನೂ ಈ ಪುಸ್ತಕದಲ್ಲಿ ಆನಂದಪುರ ಕೇಂದ್ರವಾಗಿಸಿ ಗ್ರಾಮೀಣ ಬದುಕಿನ ಅನುಭವವನ್ನು ಕಥಾ ರೂಪದಲ್ಲಿ ಬರೆದಿದ್ದಾರೆ ಈ…
ಮಾರುತಿಪುರದ ಯುವತಿ ನಾಪತ್ತೆ : ಸುಳಿವು ಪತ್ತೆಗೆ ಮನವಿ
ಮಾರುತಿಪುರ : ಇಲ್ಲಿನ ಸಮೀಪದ ಗುಬ್ಬಿನಜೆಡ್ಡು ಪುಣಜೆ ಗ್ರಾಮದ ವಾಸಿ ಕುಮಾರಿ ಅನುಷಾ ತಂದೆ ದೇವೇಂದ್ರ, 22 ವರ್ಷ, ಈ ಯುವತಿಯು ಡಿಸೆಂಬರ್ 24 ರ ಬೆಳಿಗ್ಗೆ 8.30 ಕ್ಕೆ ಎಂದಿನಂತೆ ಮಾರುತಿಪುರ ಒಕ್ಕೂಟ ಸಂಘದ ಕೆಲಸಕ್ಕೆ ಹೋದವಳು ಮನೆಗೆ ವಾಪಸ್ ಬಂದಿರುವುದಿಲ್ಲ. ಈಕೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪರಿಚಯದವರು, ಸಂಬಂಧಿಕರಲ್ಲಿ ವಿಚಾರಿಸಿದರೂ ಈಕೆಯ ಸುಳಿವು ಇರುವುದಿಲ್ಲ. ನಾಪತ್ತೆಯಾದ ಯುವತಿ ಸುಮಾರು 05 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ 15…
ಶಿವಮೊಗ್ಗದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಫ್ಲೆಕ್ಸ್ ಕಿತ್ತವನಿಗೆ ಬಿತ್ತು ಗೂಸಾ
ಶಿವಮೊಗ್ಗ: ಪವರ್ ಸ್ಟಾರ್, ಕರ್ನಾಟಕ ರತ್ನ ದಿ. ಪುನೀತ್ ರಾಜಕುಮಾರ್ ಅವರ ಫ್ಲೆಕ್ಸ್ ಕಿತ್ತು ಹಾಕಿದವನಿಗೆ ಜನರು ಗೂಸಾ ನೀಡಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ. ನಗರದ ನೆಹರು ಕ್ರೀಡಾಂಗಣದಲ್ಲಿ ಪುನೀತ್ ನೆನಪಿಗಾಗಿ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಜನವರಿ 7 ರಿಂದ 9 ರವರೆಗೆ ಆಯೋಜಿಸಲಾಗಿದೆ. ಇದಕ್ಕಾಗಿ ಕ್ರೀಡಾಂಗಣದ ಮುಖ್ಯದ್ವಾರದ ಮುಂಭಾಗ ಪುನೀತ್ ರಾಜಕುಮಾರ್ ಅವರ ಬೃಹತ್ ಫ್ಲೆಕ್ಸ್ ಹಾಕಲಾಗಿತ್ತು. ಈ ವೇಳೆ ಆನಂದ್ ಎಂಬಾತ ಕುಡಿದ ಮತ್ತಿನಲ್ಲಿ ಪುನೀತ್ರ ಫ್ಲೆಕ್ಸ್ ಅನ್ನು ಹರಿದು ತೆಗೆದುಕೊಂಡು ಹೋಗುತ್ತಿದ್ದ….
ಕಾರ್ಮಿಕ ಸಾವನ್ನಪ್ಪಿದ ಸುದ್ದಿ ಮನೆಯವರಿಗೆ ತಿಳಿಸಲು ಹೋದ ಮಾಲೀಕನೂ ಹೃದಯಾಘಾತದಿಂದ ಸಾವು :
ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಇದ್ದಕ್ಕಿದ್ದ ಹಾಗೆ ಹೃದಯಾಘಾತದಿಂದ ಸಾವನ್ನಪ್ಪಿದ. ಕಾರ್ಮಿಕ ಸಾವನ್ನಪ್ಪಿದ್ದ ಸುದ್ದಿಯನ್ನು ಆತನ ಮನೆಯವರಿಗೆ ತಿಳಿಸಲು ಹೊರಟ ತೋಟದ ಮಾಲೀಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ ಮನಕಲುಕುವ ಘಟನೆ ಆರಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರಗ ಗೇಟ್ ಸಮೀಪ ನಡೆದಿದೆ. ಕೂಲಿ ಕಾರ್ಮಿಕ ಬರ್ಮಪ್ಪ (55) ಎಂಬಾತ ಎಂದಿನಂತೆ ನಿವೃತ್ತ ಶಿಕ್ಷಕ ದುಗ್ಗಪ್ಪಗೌಡ(75) ಎಂಬುವರ ತೋಟದಲ್ಲಿ ಕೆಲಸ ಮಾಡಲು ಬಂದಿದ್ದ.ಅನೇಕ ವರ್ಷಗಳಿಂದ ಇವರ ಮನೆಯಲ್ಲಿ ಕೆಲಸ ಕೂಡ ಮಾಡುತ್ತ ಇದ್ದ ಮದ್ಯಾಹ್ನದವರೆಗೆ ಲವಲವಿಕೆಯಿಂದ…
ಅಂದಾಸುರದ ಮೇಲಿನಕೇರಿ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ಹೆಸರಿಟ್ಟು ಗೌರವ ಸೂಚಿಸಿದ ಗ್ರಾಮಸ್ಥರು :
ಅಂದಾಸುರ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅಂದಾಸುರ ಮೇಲಿನ ಕೇರಿಗೆ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ನಗರ ಎಂದು ನಾಮಕರಣ ಮಾಡಲಾಗಿದೆ.ಅಂದಾಸುರದ ಓಂ ಫ್ರೆಂಡ್ಸ್ ಯುವಕ ಸಂಘದವರು ಇಲ್ಲಿನ ಮೇಲಿನಕೇರಿಯ ವೃತ್ತಕ್ಕೆ ಪುನೀತ್ ರಾಜಕುಮಾರ್ ವೃತ್ತ ಎಂದು ಹೆಸರು ಹಾಕಿ ನಾಮಪಲಕ ಪ್ರತಿಷ್ಟಾಪಿಸಿದ್ದಾರೆ. ಈ ಸಂಧರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಖೈರಾ ಅಧ್ಯಕ್ಷರಾದ ರಾಜಣ್ಣ ,ಸೋಮೇಶ ಗ್ರಾಪಂ ಸದಸ್ಯರು ಆಚಾಪುರ,ಶಿಕ್ಷಕರಾದ ಇಂದಿರಾ,ವಕೀಲರಾದ ದಾಸನಕೊಪ್ಪ ವಾಸು,ವೀಣಾ ಹಾಗೂ ಗ್ರಾಮಸ್ಥರೆಲ್ಲಾ ಉಪಸ್ಥಿತರಿದ್ದರು….
ಬಟ್ಟೆಮಲ್ಲಪ ಕರವೇ ವತಿಯಿಂದ ರಿಪ್ಪನ್ ಪೇಟೆಯಲ್ಲಿ ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ :
ಕರ್ನಾಟಕ ರಕ್ಷಣಾ ವೇದಿಕೆ ಬಟ್ಟೆಮಲ್ಲಪ್ಪ ಘಟಕದಿಂದ ರಿಪ್ಪನ್ ಪೇಟೆ ಕುಕ್ಕಳಲೆ ಸಂಪರ್ಕ ರಸ್ತೆಗೆ ಅಳವಡಿಸಿದ್ದ ಕನ್ನಡದ ಮೇರು ನಟ ಪುನೀತ್ ರಾಜಕುಮಾರ ನಾಮಫಲಕಕ್ಕೆ ಮಸಿ ಬಳಿದಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಶಾಂತಿಯುತ ಹೋರಾಟವನ್ನು ನಡೆಸಲಾಯಿತು. ಪುನೀತ್ ನಾಮಫ಼ಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಈ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಹೆಚ್ ಆರ್ ರಾಘವೇಂದ್ರ. ಘಟಕದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಾಗರಾಜ್…
ಲಾರಿ – ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸಾವು
ಭದ್ರಾವತಿ : ಕಾರೇಹಳ್ಳಿಯ ತಾಳೇ ಎಣ್ಣೆಯ ಫ್ಯಾಕ್ಟರಿ ಬಳಿ ಲಾರಿ ಮತ್ತು ಬೈಕ್ ನಡುವೆ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಸಾವು ಕಂಡಿರುವ ಘಟನೆ ನಡೆದಿದೆ. ಕಾರೇಹಳ್ಳಿ ಫ್ಯಾಕ್ಟರಿಯ ಬಳಿ KA-17-B-6710 ಕ್ರಮ ಸಂಖ್ಯೆಯ ಲಾರಿಯೊಂದು ಬೈಕ್ ಸವಾರನಿಗೆ ಗುದ್ದಿದೆ. ಬೈಕ್ ಸವಾರ ಗಾಯಗೊಂಡು ಬಿದ್ದಿದ್ದಾನೆ. ಹಿಂಬದಿಯಲ್ಲಿ ಬರುತ್ತಿದ್ದ ಸ್ಟೀಫನ್ ಕ್ರಿಸ್ಟೋಫರ್ ಎಂಬ ಚರ್ಚ್ ನ ಫಾದರ್ ಅವರನ್ನ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡ ವ್ಯಕ್ತಿ ಆನಂದ ಕುಮಾರ್ ಎಂದು ಗುರುತಿಸಲಾಗಿದ್ದು. ಅವರಿಗೆ ಹೆಚ್ಚಿನ…