Headlines

ಮಾರುತಿಪುರದ ಯುವತಿ ನಾಪತ್ತೆ : ಸುಳಿವು ಪತ್ತೆಗೆ ಮನವಿ


ಮಾರುತಿಪುರ : ಇಲ್ಲಿನ ಸಮೀಪದ ಗುಬ್ಬಿನಜೆಡ್ಡು ಪುಣಜೆ ಗ್ರಾಮದ ವಾಸಿ ಕುಮಾರಿ ಅನುಷಾ ತಂದೆ ದೇವೇಂದ್ರ, 22 ವರ್ಷ, ಈ ಯುವತಿಯು ಡಿಸೆಂಬರ್ 24 ರ ಬೆಳಿಗ್ಗೆ 8.30 ಕ್ಕೆ ಎಂದಿನಂತೆ ಮಾರುತಿಪುರ ಒಕ್ಕೂಟ ಸಂಘದ ಕೆಲಸಕ್ಕೆ ಹೋದವಳು ಮನೆಗೆ ವಾಪಸ್ ಬಂದಿರುವುದಿಲ್ಲ.

    ಈಕೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪರಿಚಯದವರು, ಸಂಬಂಧಿಕರಲ್ಲಿ ವಿಚಾರಿಸಿದರೂ ಈಕೆಯ ಸುಳಿವು ಇರುವುದಿಲ್ಲ. ನಾಪತ್ತೆಯಾದ ಯುವತಿ ಸುಮಾರು 05 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ 15 ಇಂಚು ಉದ್ದದ ಕಪ್ಪು ಕೂದಲು ಇರುತ್ತದೆ. ಬಿ.ಎ ಪದವಿ ಹೊಂದಿರುವ ಈಕೆ ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಗೋಧಿ ಬಣ್ಣದ ಚೂಡಿದಾರ್, ಕಂಪು ಬಣ್ಣದ ವೇಲ್, ಕೆಂಪು ಬಣ್ಣದ ಬ್ಲೇಸರ್ ಕೋಟ್ ಧರಿಸಿರುತ್ತಾಳೆ. ಈ ಯುವತಿಯ ಸುಳಿವು ಯಾರಿಗಾದರೂ
ಪತ್ತೆಯಾದಲ್ಲಿ ಹೊಸನಗರ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: 08182-221244, ಮೊ.ಸಂಖ್ಯೆ : 9480803364 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *