ಎಳ್ಳಮವಾಸ್ಯೆ ಪ್ರಯುಕ್ತ ಜ.2 ರಂದು ರಾಮತೀರ್ಥದಲ್ಲಿ ಜಾತ್ರಾ ಮಹೋತ್ಸವ
ರಿಪ್ಪನ್‌ಪೇಟೆ: ಎಳ್ಳಮವಾಸ್ಯೆ ಪ್ರಯುಕ್ತ ಜ.2 ರಂದು ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯ ಐತಿಹಾಸಿಕ ಹಿನ್ನೆಲೆಯುಳ್ಳ ಪುರಾಣ ಪ್ರಸಿದ್ಧ ಅಗಸ್ತ್ಯ ಮಹರ್ಷಿಗಳ ಪುಣ್ಯಾಶ್ರಮವಾದ ಶರ್ಮೀಣ್ಯಾವತಿ ನದಿ ತೀರದಲ್ಲಿರುವ ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ 40ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 9ನೇ ವರ್ಷದ ವಾರ್ಷಿಕೋತ್ಸವ ಏರ್ಪಡಿಸಲಾಗಿದೆ ಎಂದು ಶ್ರೀ ರಾಮೇಶ್ವರ ದೇವಸ್ಥಾನದ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 8.00 ಗಂಟೆಯಿಂದ ಪ್ರಧಾನ ಪುರೋಹಿತರಾದ ಕೆಂಜಿಗಾಪುರದ ಶ್ರೀಧರ್ ಭಟ್, ಶ್ರೀ ಸತ್ಯನಾರಾಯಣ…