Headlines

ಖ್ಯಾತ ಅಂಕಣಕಾರ,ಲೇಖಕ ಕೆ ಅರುಣ್ ಪ್ರಸಾದ್ ರವರ ಎರಡನೇ ಪುಸ್ತಕ ಬಿಡುಗಡೆ :

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿ  ಉದ್ಯಮದಲ್ಲೇ ಹೊಸ ಅಲೆಯನ್ನೇ ಎಬ್ಬಿಸಿದಂತಹ ಖ್ಯಾತ ಉದ್ಯಮಿ, ಅಂಕಣಕಾರ, ಲೇಖಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ, ಅರುಣ್ ಪ್ರಸಾದ್ ರವರ ಎರಡನೇ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಕಥಾ ಪುಸ್ತಕವಾದ ” ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ” ಪುಸ್ತಕವನ್ನು ಖ್ಯಾತ ಜಲತಜ್ಞ ಶಿವಾನಂದ ಕಳವೆ ಬಿಡುಗಡೆ ಮಾಡಿದರು.

ಇನ್ನೂ ಈ ಪುಸ್ತಕದಲ್ಲಿ ಆನಂದಪುರ ಕೇಂದ್ರವಾಗಿಸಿ ಗ್ರಾಮೀಣ ಬದುಕಿನ ಅನುಭವವನ್ನು ಕಥಾ ರೂಪದಲ್ಲಿ ಬರೆದಿದ್ದಾರೆ ಈ ಪುಸ್ತಕದ ಕಥೆಗಳು ಆಕರ್ಷಕವಾಗಿದ್ದು ಸರಳ ನಿರೂಪಣೆ  ಹೊಂದಿದ್ದು  ಕುತೂಹಲಕಾರಿ ತಿರುವಿನ ಘಟನೆ ಇದೆ ಎಂದು ತಿಳಿಸಿದ್ದಾರೆ.

ಇನ್ನೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಶೃಂಗೇಶ್, ಪ್ರಕಾಶ್ ಕುಗ್ವೆ ,ಶಿವಾನಂದ ಕಳವೆ,ನಾಗರಾಜ್ ತೋಂಬ್ರಿ ,ರೇವಣಪ್ಪ , ಕೆ, ನಾಗರಾಜ್ ಹಾಗೂ ಆನಂದಪುರದ ಸ್ಥಳೀಯ ಪತ್ರಕರ್ತರಿದ್ದರು.

ಇನ್ನೂ ಈ ಪುಸ್ತಕವು ಶಿವಮೊಗ್ಗದ ಡಯಾನಾ ಬುಕ್ ಹೌಸ್ ನಲ್ಲಿ 
ಸಾಗರದ ರವೀಂದ್ರ ಪುಸ್ತಕಾಲಯ ದಲ್ಲಿ ಹಾಗೂ ಸಾಗರದ ಶ್ರೀ ಟ್ರೇಡರ್ಸ್ ಹಾಗೂ ಯಡೆಹಳ್ಳಿಯ ಮಲ್ಲಿಕಾ ವೆಜ್ ಹೋಟೆಲ್ ನಲ್ಲಿ ಸಿಗುತ್ತದೆಂದು ಬರಹಗಾರರಾದ ಕೆ, ಅರುಣ್ ಪ್ರಸಾದ್ ರವರು ಮಾಹಿತಿ ನೀಡಿದ್ದಾರೆ.



ವರದಿ : ಪವನ್ ಕುಮಾರ್ ಕಠಾರೆ

Leave a Reply

Your email address will not be published. Required fields are marked *