Headlines

ಆನಂದಪುರದ ಕಣ್ಣೂರು ಸಮೀಪ ರಸ್ತೆ ಅಪಘಾತ : ಓರ್ವ ಸ್ಥಳದಲ್ಲೇ ಸಾವು,ಚಾಲಕನ ಸ್ಥಿತಿ ಚಿಂತಾಜನಕ :

ಸಾಗರ : ಇಲ್ಲಿನ ಆನಂದಪುರ ಸಮೀಪದ ಕಣ್ಣೂರು ಬಳಿ ಲಾರಿ ಹಾಗೂ ಅಶೋಕ್ ಲೈಲಾಂಡ್ ಮಿನಿ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅಶೋಕ್ ಲೈಲಾಂಡ್ ಮಿನಿ ವಾಹನದಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಈ ವಾಹನದ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ.  ಮೃತನು ಶಿರಾಳಕೊಪ್ಪ ಮೂಲದವನು ಎಂದು ತಿಳಿದು ಬಂದಿದೆ. ಲಾರಿ ಹೊಸನಗರದಿಂದ ಶಿಕಾರಿಪುರ ಹೋಗುತ್ತಿತ್ತು,ಅಶೋಕ್ ಲೈಲಾಂಡ್ ಮಿನಿವಾಹನ ಶುಂಠಿ ತುಂಬಿಕೊಂಡು ಕುಂದಾಪುರ ಹೊಗುತ್ತಿದ್ದವು. ಅಪಘಾತದ ಸ್ಥಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್…

Read More

ಶಿವಮೊಗ್ಗದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಫ್ಲೆಕ್ಸ್​ ಕಿತ್ತವನಿಗೆ ಬಿತ್ತು ‌ಗೂಸಾ

ಶಿವಮೊಗ್ಗ: ಪವರ್ ಸ್ಟಾರ್, ಕರ್ನಾಟಕ ರತ್ನ ದಿ. ಪುನೀತ್ ರಾಜಕುಮಾರ್ ಅವರ ಫ್ಲೆಕ್ಸ್​ ಕಿತ್ತು ಹಾಕಿದವನಿಗೆ ಜನರು ಗೂಸಾ ನೀಡಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ. ನಗರದ ನೆಹರು ಕ್ರೀಡಾಂಗಣದಲ್ಲಿ ಪುನೀತ್​ ನೆನಪಿಗಾಗಿ ರಾಷ್ಟ್ರಮಟ್ಟದ ಫುಟ್​ಬಾಲ್​ ಪಂದ್ಯಾವಳಿಯನ್ನು ಜನವರಿ 7 ರಿಂದ 9 ರವರೆಗೆ ಆಯೋಜಿಸಲಾಗಿದೆ. ಇದಕ್ಕಾಗಿ ಕ್ರೀಡಾಂಗಣದ ಮುಖ್ಯದ್ವಾರದ ಮುಂಭಾಗ ಪುನೀತ್​ ರಾಜಕುಮಾರ್​ ಅವರ ಬೃಹತ್​ ಫ್ಲೆಕ್ಸ್​ ಹಾಕಲಾಗಿತ್ತು. ಈ ವೇಳೆ ಆನಂದ್​ ಎಂಬಾತ ಕುಡಿದ ಮತ್ತಿನಲ್ಲಿ ಪುನೀತ್​ರ ಫ್ಲೆಕ್ಸ್​ ಅನ್ನು ಹರಿದು ತೆಗೆದುಕೊಂಡು ಹೋಗುತ್ತಿದ್ದ….

Read More

ಕಾರ್ಮಿಕ ಸಾವನ್ನಪ್ಪಿದ ಸುದ್ದಿ ಮನೆಯವರಿಗೆ ತಿಳಿಸಲು ಹೋದ ಮಾಲೀಕನೂ ಹೃದಯಾಘಾತದಿಂದ ಸಾವು :

ತೀರ್ಥಹಳ್ಳಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಇದ್ದಕ್ಕಿದ್ದ ಹಾಗೆ ಹೃದಯಾಘಾತದಿಂದ ಸಾವನ್ನಪ್ಪಿದ. ಕಾರ್ಮಿಕ ಸಾವನ್ನಪ್ಪಿದ್ದ ಸುದ್ದಿಯನ್ನು ಆತನ ಮನೆಯವರಿಗೆ ತಿಳಿಸಲು ಹೊರಟ ತೋಟದ ಮಾಲೀಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ ಮನಕಲುಕುವ ಘಟನೆ ಆರಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರಗ ಗೇಟ್ ಸಮೀಪ ನಡೆದಿದೆ. ಕೂಲಿ ಕಾರ್ಮಿಕ ಬರ್ಮಪ್ಪ (55) ಎಂಬಾತ ಎಂದಿನಂತೆ ನಿವೃತ್ತ ಶಿಕ್ಷಕ ದುಗ್ಗಪ್ಪಗೌಡ(75) ಎಂಬುವರ ತೋಟದಲ್ಲಿ ಕೆಲಸ ಮಾಡಲು ಬಂದಿದ್ದ.ಅನೇಕ ವರ್ಷಗಳಿಂದ ಇವರ ಮನೆಯಲ್ಲಿ ಕೆಲಸ ಕೂಡ ಮಾಡುತ್ತ ಇದ್ದ ಮದ್ಯಾಹ್ನದವರೆಗೆ ಲವಲವಿಕೆಯಿಂದ…

Read More

ರಿಪ್ಪನ್ ಪೇಟೆ : ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ : ಗ್ರಾಮ ಪಂಚಾಯ್ತಿ ಕುವೆಂಪು ಸಭಾಭವನದಲ್ಲಿ 22 ಜನ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರವನ್ನು ಶಾಸಕರಾದ ಹರತಾಳು ಹಾಲಪ್ಪ ರವರು ವಿತರಣೆ ಮಾಡಿದರು. ನಂತರ ಮಾತನಾಡಿದ ಶಾಸಕರು ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಕೂಡಾ ಅರಣ್ಯ ಭೂ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಭೂ ಒಡೆತನದ ಹಕ್ಕು ಕಲ್ಪಸಲು ಕಾನೂನು ಅಡ್ಡಿಯಾಗುತ್ತಿದೆ ಇಲಾಖೆಯಲ್ಲಿ ಡೀಮ್ಡ್ ಫಾರೆಸ್ಟ್, ಸ್ಟೇಟ್ ಪಾರೆಸ್ಟ್, ಮೀಸಲು ಅರಣ್ಯ, ಅಭಯಾರಣ್ಯ ಹೀಗೆ ಹತ್ತು ಹಲವು ವಿಭಾಗಗಳಿಂದಾಗಿ ರೈತರಿಗೆ ಭೂ ಮಂಜೂರಾತಿ ಪತ್ರ ಕೊಡಿಸಲು ಶಾಸನ ಸಭೆಯಲ್ಲಿ ಮತ್ತು…

Read More

ಅಂದಾಸುರದ ಮೇಲಿನಕೇರಿ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ಹೆಸರಿಟ್ಟು ಗೌರವ ಸೂಚಿಸಿದ ಗ್ರಾಮಸ್ಥರು :

ಅಂದಾಸುರ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅಂದಾಸುರ ಮೇಲಿನ ಕೇರಿಗೆ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ನಗರ ಎಂದು ನಾಮಕರಣ ಮಾಡಲಾಗಿದೆ.ಅಂದಾಸುರದ ಓಂ ಫ್ರೆಂಡ್ಸ್ ಯುವಕ ಸಂಘದವರು ಇಲ್ಲಿನ ಮೇಲಿನಕೇರಿಯ ವೃತ್ತಕ್ಕೆ ಪುನೀತ್ ರಾಜಕುಮಾರ್ ವೃತ್ತ ಎಂದು ಹೆಸರು ಹಾಕಿ ನಾಮಪಲಕ ಪ್ರತಿಷ್ಟಾಪಿಸಿದ್ದಾರೆ. ಈ ಸಂಧರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಖೈರಾ ಅಧ್ಯಕ್ಷರಾದ ರಾಜಣ್ಣ ,ಸೋಮೇಶ ಗ್ರಾಪಂ ಸದಸ್ಯರು ಆಚಾಪುರ,ಶಿಕ್ಷಕರಾದ ಇಂದಿರಾ,ವಕೀಲರಾದ ದಾಸನಕೊಪ್ಪ ವಾಸು,ವೀಣಾ ಹಾಗೂ ಗ್ರಾಮಸ್ಥರೆಲ್ಲಾ ಉಪಸ್ಥಿತರಿದ್ದರು….

Read More

ಬಟ್ಟೆಮಲ್ಲಪ ಕರವೇ ವತಿಯಿಂದ ರಿಪ್ಪನ್ ಪೇಟೆಯಲ್ಲಿ ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ :

  ಕರ್ನಾಟಕ ರಕ್ಷಣಾ ವೇದಿಕೆ ಬಟ್ಟೆಮಲ್ಲಪ್ಪ ಘಟಕದಿಂದ ರಿಪ್ಪನ್ ಪೇಟೆ ಕುಕ್ಕಳಲೆ ಸಂಪರ್ಕ ರಸ್ತೆಗೆ ಅಳವಡಿಸಿದ್ದ ಕನ್ನಡದ ಮೇರು ನಟ ಪುನೀತ್ ರಾಜಕುಮಾರ ನಾಮಫಲಕಕ್ಕೆ ಮಸಿ ಬಳಿದಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಶಾಂತಿಯುತ ಹೋರಾಟವನ್ನು ನಡೆಸಲಾಯಿತು. ಪುನೀತ್ ನಾಮಫ಼ಲಕಕ್ಕೆ  ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಈ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಹೆಚ್ ಆರ್ ರಾಘವೇಂದ್ರ. ಘಟಕದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಾಗರಾಜ್…

Read More

ರಾಜ್ಯದಲ್ಲಿ ಡಿ.28 ರಿಂದ ನೈಟ್ ಕರ್ಫ಼್ಯೂ ಜಾರಿ : ಸಚಿವ ಡಾ.ಸುಧಾಕರ್

  ಓಮೈಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಡಿಸೆಂಬರ್ 20 ರಿಂದ 10 ದಿನಗಳ ವರೆಗೆ ನೈಟ್ ಕರ್ಫ್ಯೂ ಹೇರಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ತಜ್ಞರ ಜೊತೆ ಸಮಾಲೋಚನೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಸುಧಾಕರ್, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಹೋಟೆಲ್ ಗಳಲ್ಲಿ ಇರುವ ಆಸನಗಳಲ್ಲಿ ಶೇ. 50 ರಷ್ಟು ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ…

Read More

ರಿಪ್ಪನ್ ಪೇಟೆ ಸಮೀಪದಲ್ಲಿ ಹಣವಿದ್ದ ಕಪ್ಪು ಬಣ್ಣದ ಬ್ಯಾಗ್ ಕಳೆದುಹೋಗಿದೆ : ಸಿಕ್ಕಿದ್ದಲ್ಲಿ ಹಿಂದಿರುಗಿಸುವಂತೆ ಮನವಿ

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ವಿನಾಯಕ ವೃತ್ತದಲ್ಲಿ ಗುರುವಾರ ರಾತ್ರಿ ಸುಮಾರು 9.15 ರ ಅಸುಪಾಸಿನ ಸಮಯದಲ್ಲಿ ತೀರ್ಥಹಳ್ಳಿ ರಸ್ತೆಯಿಂದ ಹೊಸನಗರ ರಸ್ತೆಯ ಮಾರ್ಗವಾಗಿ ಹೋಗುತ್ತಿದ್ದ ಮಿನಿ‌ ಟ್ರ್ಯಾಕ್ಟರ್ ನಲ್ಲಿ ಇದ್ದ ಕಪ್ಪು ಬಣ್ಣದ ಬ್ಯಾಗ್ ಕೆಳಗೆ ಬಿದ್ದು ಹೋಗಿದ್ದು ಅದರಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಇಟ್ಟಿದ್ದ 1ಲಕ್ಷದ 40 ಸಾವಿರ ರೂ ಹಣ ಹಾಗೂ ಕೆಲವೊಂದು ಉಪಯುಕ್ತ ದಾಖಲಾತಿಗಳಿದ್ದೂ  ಯಾರಿಗಾದರೂ ಸಿಕ್ಕಿದ್ದಲ್ಲಿ ಹಿಂತಿರುಗಿಸಬೇಕೆಂದು ಮಾಲೀಕರಾದ ಶ್ರೀಧರ್ ಅಲಸೆ ಇವರು ರಿಪ್ಪನ್ ಪೇಟೆ ಸುತ್ತಮುತ್ತಲಿನ…

Read More

ಲಾರಿ – ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸಾವು

ಭದ್ರಾವತಿ : ಕಾರೇಹಳ್ಳಿಯ ತಾಳೇ ಎಣ್ಣೆಯ ಫ್ಯಾಕ್ಟರಿ ಬಳಿ ಲಾರಿ ಮತ್ತು ಬೈಕ್ ನಡುವೆ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಸಾವು ಕಂಡಿರುವ ಘಟನೆ ನಡೆದಿದೆ. ಕಾರೇಹಳ್ಳಿ ಫ್ಯಾಕ್ಟರಿಯ ಬಳಿ KA-17-B-6710 ಕ್ರಮ ಸಂಖ್ಯೆಯ ಲಾರಿಯೊಂದು ಬೈಕ್ ಸವಾರನಿಗೆ ಗುದ್ದಿದೆ. ಬೈಕ್ ಸವಾರ ಗಾಯಗೊಂಡು ಬಿದ್ದಿದ್ದಾನೆ. ಹಿಂಬದಿಯಲ್ಲಿ ಬರುತ್ತಿದ್ದ ಸ್ಟೀಫನ್ ಕ್ರಿಸ್ಟೋಫರ್ ಎಂಬ ಚರ್ಚ್ ನ ಫಾದರ್ ಅವರನ್ನ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡ ವ್ಯಕ್ತಿ ಆನಂದ ಕುಮಾರ್ ಎಂದು ಗುರುತಿಸಲಾಗಿದ್ದು. ಅವರಿಗೆ ಹೆಚ್ಚಿನ…

Read More

ಪುನೀತ್ ರಾಜಕುಮಾರ್ ನಾಮಫಲಕಕ್ಕೆ ಬಣ್ಣಹಚ್ಚಿದ ಪ್ರಕರಣ: ಕರವೇ ಹಾಗೂ ಕಸ್ತೂರಿ ಕನ್ನಡ ಸಂಘದಿಂದ ಭಾರಿ ಪ್ರತಿಭಟನೆ

ರಿಪ್ಪನ್ ಪೇಟೆ : ಪಟ್ಟಣದ ಸಾಗರ ರಸ್ತೆಯ ಕುಕ್ಕಳಲೆ ಸಂಪರ್ಕ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹೆಸರು ಇಡಲಾಗಿತ್ತು.ಗುರುವಾರ ತಡರಾತ್ರಿ ಕೆಲವು ದುಷ್ಕರ್ಮಿಗಳು ಪುನೀತ್ ರಾಜಕುಮಾರ್ ರವರ ನಾಮಫಲಕಕ್ಕೆ ಬಣ್ಣಹಚ್ಚಿ ವಿಕೃತಿ ಮೆರೆದಿದ್ದರು. ಈ ಘಟನೆಯನ್ನು ಖಂಡಿಸಿ ರಿಪ್ಪನ್ ಪೇಟೆಯ ಕಸ್ತೂರಿ ಕನ್ನಡ ಸಂಘ,ಕಲಾ ಕೌಸ್ತುಭ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಪ್ಪು ಅಭಿಮಾನಿಗಳು ರಿಪ್ಪನ್’ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಂತರ…

Read More