POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಆನಂದಪುರದ ಕಣ್ಣೂರು ಸಮೀಪ ರಸ್ತೆ ಅಪಘಾತ : ಓರ್ವ ಸ್ಥಳದಲ್ಲೇ ಸಾವು,ಚಾಲಕನ ಸ್ಥಿತಿ ಚಿಂತಾಜನಕ :

ಸಾಗರ : ಇಲ್ಲಿನ ಆನಂದಪುರ ಸಮೀಪದ ಕಣ್ಣೂರು ಬಳಿ ಲಾರಿ ಹಾಗೂ ಅಶೋಕ್ ಲೈಲಾಂಡ್ ಮಿನಿ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ.


ಅಪಘಾತದಲ್ಲಿ ಅಶೋಕ್ ಲೈಲಾಂಡ್ ಮಿನಿ ವಾಹನದಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಈ ವಾಹನದ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ. 

ಮೃತನು ಶಿರಾಳಕೊಪ್ಪ ಮೂಲದವನು ಎಂದು ತಿಳಿದು ಬಂದಿದೆ.
ಲಾರಿ ಹೊಸನಗರದಿಂದ ಶಿಕಾರಿಪುರ ಹೋಗುತ್ತಿತ್ತು,ಅಶೋಕ್ ಲೈಲಾಂಡ್ ಮಿನಿವಾಹನ ಶುಂಠಿ ತುಂಬಿಕೊಂಡು ಕುಂದಾಪುರ ಹೊಗುತ್ತಿದ್ದವು.

ಅಪಘಾತದ ಸ್ಥಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿದ್ದು,ಸ್ಥಳಕ್ಕೆ ಆನಂದಪುರ ಪೋಲೀಸರು ಆಗಮಿಸಿ ಸಂಚಾರ ಸುಗಮಗೊಳಿಸಿದ್ದಾರೆ.



ಮಾಹಿತಿ ಕೃಪೆ : ಟೈಮ್ಸ್‌ ಆಫ್‌ ಸಾಗರ್

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.