Headlines

ಹುಂಚಾ : ಶೆಟ್ಟಿಬೈಲ್ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ :

ಹುಂಚಾ: ಕ್ಷುಲಕ ವಿಚಾರಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಇತ್ತೀಚೆಗೆ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹುಂಚಾ ಗ್ರಾಮದ ಶೆಟ್ಟಿಬೈಲ್ ನಲ್ಲಿ ನಡೆದಿದೆ.

ಶೆಟ್ಟಿಬೈಲ್ ನಿವಾಸಿ ಲಿಂಗಾರ್ಜುನ ಗೌಡ (49) ಮತ್ತು ಮಲ್ಲಿಕಾರ್ಜುನ (45) ಹಲ್ಲೆಗೊಳಾಗದ ವ್ಯಕ್ತಿಗಳಾಗಿದ್ದು, ಅದೇ ಗ್ರಾಮದ ನಿವಾಸಿಗಳಾದ ಯೋಮಕೇಶ, ನಾಗಾರ್ಜುನ, ಪರಮೇಶಪ್ಪ, ಅವಿನಾಶ್,ಚರಣ್ ಎಂಬುವವರು ಕತ್ತಿ ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ.

ಶೆಟ್ಟಿಬೈಲ್ ನ  ಊರೊಟ್ಟಿನ ಜಾಗದಲ್ಲಿ ರಕ್ತದ ಮಡುವಿನಿನಲ್ಲಿ ಬಿದ್ದಿದ್ದ ಲಿಂಗಾರ್ಜುನ ಹಾಗೂ ಮಲ್ಲಿಕಾರ್ಜುನ ರನ್ನು ಗ್ರಾಮಸ್ಥರು ಹೊಸನಗರದ ಆಸ್ಪತ್ರೆಗೆ108 ಆಂಬ್ಯುಲೆನ್ಸ್ ಮೂಲಕ ದಾಖಲಿಸಿದ್ದಾರೆ.

ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಠಾಣಾ ಗುನ್ನೆ ನಂ 138/2021 ಕಲಂ :504,324,506,R/w 149 ipc ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.



ಘಟನೆಯ ಹಿನ್ನಲೆ :

ಇದೇ ತಿಂಗಳ 19 ರಂದು ಲಿಂಗಾರ್ಜುನ ಮತ್ತು ಅವರ ತಮ್ಮ ಮಲ್ಲಿಕಾರ್ಜುನ ಸೇರಿ ಹೊನ್ನೆಬೆಲ್ ಗ್ರಾಮದ ಸರ್ವೆ ನಂಬರ್ 86ರ ಊರೊಟ್ಟಿಗೆ ಜಾಗದಲ್ಲಿ ತೋಟದ ಬೇಸಾಯದ ಸಲುವಾಗಿ ಮಣ್ಣನ್ನು ತೆಗೆದುಕೊಂಡು ಹೋಗಲು ಜೆಸಿಬಿಯಿಂದ ಅಗೆಸುತ್ತಿರುವಾಗ ಇದೇ ಊರಿನ ನಾಗಾರ್ಜುನ ಹಾಗೂ ಅವರ ಮಗ ಚರಣ ಮತ್ತು ಅವಿನಾಶ್ ಏಕಾಏಕಿ  ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಿಂಗರಾಜ್ ರವರ ತಮ್ಮ ಮಲ್ಲಿಕಾರ್ಜುನರಿಗೆ ತಲೆಗೆ ದೊಣ್ಣೆಯಿಂದ ಹೊಡೆದ್ದು ಹಲ್ಲೆ ನಡೆಸಿದ್ದಾರೆ ಈ ಸಂದರ್ಭದಲ್ಲಿ ಪ್ರಶ್ನಿಸಲು ಹೋದ ಲಿಂಗಾರ್ಜುನರವರಿಗೆ ಯೋಮಕೇಶ್ ಎಂಬುವವನು ಕತ್ತಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದ ಪರಿಣಾಮ ತೀವ್ರ ರಕ್ತಸ್ತ್ರಾವವಾಗಿ ಕೆಳಕ್ಕೆ ಬಿದ್ದಿರುತ್ತಾನೆ ಆದರೂ ಬಿಡದ ದುಷ್ಕರ್ಮಿಗಳು ಪರಮೇಶ್ ಗೌಡ ಹಾಗೂ ಚರಣ ಎಂಬುವರು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ ನಂತರ ಊರಿನ ಗ್ರಾಮಸ್ಥರು ಒಟ್ಟಾಗಿ ಬಂದು ಜಗಳವನ್ನು ಬಿಡಿಸಿ ಲಿಂಗಾರ್ಜುನ ಹಾಗೂ ಅವರ ತಮ್ಮ ಮಲ್ಲಿಕಾರ್ಜುನ ರನ್ನು ಹೊಸನಗರದ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ಮೂಲಕ ಕಳುಹಿಸಿಕೊಟ್ಟಿರುತ್ತಾರೆ.

ಹಲ್ಲೆ ನಡೆಸಿರುವವರು ಈಗಾಗಲೇ ಅನೇಕ ಕ್ರಿಮಿನಲ್ ಕೃತ್ಯದಲ್ಲಿ ಪಾಲ್ಗೊಂಡಿದ್ದು ಇವರ ಮೇಲೆ ಅನೇಕ ಕೇಸ್ ಗಳಿದ್ದು ಕೂಡಲೇ ಇವರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸಬೇಕೆಂದು ಗ್ರಾಮಸ್ಥರಾದ ಹಾಲಪ್ಪ ಹಾಗೂ ಪರಮೇಶಿ ಎಸ್ ಡಿ ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *