ಕ್ರೀಡಾಕೂಟಗಳು ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ: ಯೋಗೇಂದ್ರ ಶ್ರೀಗಳು
ರಿಪ್ಪನ್ ಪೇಟೆ :ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಯುವಜನರು ಆಟೋಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ದುಶ್ಚಟಗಳಿಂದ ದೂರ ಇರಬೇಕೆಂದು ಸಾರಗನ ಜಡ್ಡು ಕಾರ್ತಿಕೇಯ ಕ್ಷೇತ್ರದ ಶ್ರೀ ಯೋಗೇಂದ್ರ ಶ್ರೀಗಳು ಹೇಳಿದರು. ಕಾರ್ತಿಕೇಯ ಕ್ಷೇತ್ರದಿಂದ ರಿಪ್ಪನ್‌ಪೇಟೆ ಸಮೀಪದ ಕಲ್ಲುಹಳ್ಳ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಕಾರ್ತಿಕೇಯ ಕಪ್-೨೦೨೧ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ಇಂದಿನ ಯುವ ಸಮೂಹ ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾರೆ. ಕ್ರೀಡೆಗಳು ಸೋಲು…