ಶಿವಮೊಗ್ಗ : ಕಾನೂನು ವಿದ್ಯಾರ್ಥಿಗಳು ಇಂದು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಾನೂನು ವಿದ್ಯಾರ್ಥಿಗಳ ಪರೀಕ್ಷೆ ನಡೆಸುವುದರ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಇಂದು 20 ವಿದ್ಯಾರ್ಥಿಗಳು ಪರೀಕ್ಷೆ ವಿರೋಧಿಸಿ ಪ್ರತಿಭಟಿಸಿದರು.
ಎಟಿಎನ್ ಸಿಸಿ ಕಾಲೇಜಿನ ಕಾನೂನು ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಪರೀಕ್ಷೆಗೆ ಅವಕಾಶವಿದೆ. ಆದರೆ ಈ ಆನ್ ಲೈನ್ ನ್ನ ವಿಶ್ವವಿದ್ಯಾಲಯ ರದ್ದುಪಡಿಸಿ ಆಫ್ ಲೈನ್ ನಲ್ಲಿ ಮಾತ್ರ 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದೆ.
ಪಿಯುಸಿ ನಂತರದ ಕಾನೂನು ವಿದ್ಯಾರ್ಥಿಗಳಿಗೆ 5 ವರ್ಷ ಕಾನೂನು ಅಭ್ಯಸಿಸುವ ಅವಕಾಶವಿದೆ. ಅದರಂತೆ ಪದವಿ ಅಭ್ಯಾಸಿಸುವ ವಿದ್ಯಾರ್ಥಿಗಳು ಕಾನೂನು ಓದಲು ಅವಕಾಶವಿದೆ. ಆದರೆ ಪಿಯುಸಿ ನಂತರ ಅಭ್ಯಾಸಿಸುವ ಕಾನೂನು ವಿದ್ಯಾರ್ಥಿಗಳಿಗೆ ಮೂರು ವರ್ಷ ಕೊರೋನ ಹಿನ್ನಲೆಯಲ್ಲಿ ಪ್ರಮೋಟ್ ಮಾಡಲಾಗಿದೆ.
ಆದರೆ ಪದವಿ ನಂತರ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಮೋಟ್ ಮಾಡದೆ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ 20 ಕ್ಕೂ ಹೆಚ್ವುಜನ ವಿದ್ಯಾರ್ಥಿಗಳು ಹಾಲ್ ಟಿಕೇಟ್ ಹರಿದು ಪ್ರತಿಭಟಿಸಿದರು.
ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣದ ತೀರ್ಪು ಇಂದು ಮಧ್ಯಾಹ್ನ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಆದರೆ ನ್ಯಾಯಾಲಯದ ತೀರ್ಪು ಪ್ರಕಟಗೊಳಿಸುವ ಮೊದಲು ಪರೀಕ್ಷೆ ನಡೆಸಿರುವುದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಸಂದರ್ಭದಲ್ಲಿ ಸಿಎಂ ಚಿನ್ಮಯ್,ನಂದೀಶ್,ದುಷ್ಯಂತ,ರಶ್ಮಿ,
ಯಶಸ್ವಿನಿ,ಮಾನಸ,ಗೌತಮ್ ಹಾಗೂ ಹಲವು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.