ತೀರ್ಥಹಳ್ಳಿಯ ಯುವ ಸಾಹಿತಿ ಅರುಣ್ ಮಂಜುನಾಥ್ ಹಾಗೂ ಮಂಗಳೂರಿನ ರಶ್ಮಿ ಸನಿಲ್ ರವರಿಗೆ ರಾಜ್ಯೋತ್ಸವ ಪ್ರಶಸ್ತಿ :

ಮಂಡ್ಯ ಜಿಲ್ಲೆಯ ಗಾಂಧೀ ಭವನದಲ್ಲಿ ಡಿ 18 ರಂದು ನಡೆದ ಕಸ್ತೂರಿ ಸಿರಿಗನ್ನಡ ವೇದಿಕೆಯ ಕವಿಗೋಷ್ಠಿ ಹಾಗೂ ಕಡಲು ಪುಸ್ತಕ ಬಿಡುಗಡೆ, ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ತೀರ್ಥಹಳ್ಳಿಯ ಯುವ ಸಾಹಿತಿ ಹಾಗೂ ಪತ್ರಕರ್ತ ಅರುಣ್ ಮಂಜುನಾಥ್ ಹಾಗೂ ಮಂಗಳೂರಿನ ಯುವ ಕವಯಿತ್ರಿ ರಶ್ಮಿ ಸನಿಲ್ ರವರಿಗೆ  ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರಾದ ಪೋತೆರ ಮಹದೇವು ಹಾಗೂ ಮುಖ್ಯ ಅತಿಥಿಗಳಾದ ನಾಗರತ್ನಮ್ಮ,ಹುಲಿಯೂರುದುರ್ಗ ಲಕ್ಷೀ ನಾರಾಯಣ್,ಡಾ ಶಿವರಾಜ್ ಗೌಡ, ಹೆಚ್ ಆರ್ ಅರವಿಂದ್,ಗುರುಪ್ರಸಾದ್ ಹಾಗೂ ಇನ್ನಿತರರು ಇದ್ದರು.

ಸಾಹಿತ್ಯ ಕ್ಷೇತ್ರದಲ್ಲಿ ಸು 3000 ಸಾವಿರ ಕವನ, ಕವಿತೆ, ಟಂಕ,ರುಬಾಯಿ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳನ್ನು ಬರೆದಿರುವ ಯುವ ಸಾಹಿತಿ ಹಾಗೂ ಪತ್ರಕರ್ತರಾದ ಅರುಣ್ ಮಂಜುನಾಥ್ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಅವರ ಮಾರ್ಗದರ್ಶಕರು ಅದ ಯುವ ನಾಯಕ ಕಟ್ಟೆ ಪ್ರವೀಣ್  ಅಭಿನಂದನೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಯುವ ಕವಯತ್ರಿ ರಶ್ಮಿ ಸನಿಲ್ ರವರು ಈ ವರ್ಷದಲ್ಲಿ ಸತತವಾಗಿ ಮೂರನೇ ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.ಇವರಿಗೆ ಗುರುಕುಲ ಕಲಾ ಪ್ರತಿಷ್ಠಾನದ ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾದ ರಫ಼ಿ ರಿಪ್ಪನ್ ಪೇಟೆ,ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಸುಜಾತ ಕೊಣೂರು ರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *