ರಿಪ್ಪನ್ ಪೇಟೆ :ಕನ್ನಡ ಚಲನಚಿತ್ರ ರಂಗದ ಮೇರುನಟ ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ಪಟ್ಟಣದ ಸಾಗರದ ರಸ್ತೆಯಲ್ಲಿ ಕುಕ್ಕಳಲೆ ಗ್ರಾಮದ ಸಂಪರ್ಕ ರಸ್ತೆಗೆ ಊರಿನ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆ ಯವರು ಪುನೀತ್ ರಾಜ್ ಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದರು.
ಗುರುವಾರ ತಡರಾತ್ರಿ ಕೆಲವು ಕಿಡಿಗೇಡಿಗಳು ಆ ನಾಮಫಲಕಕ್ಕೆ ಬಿಳಿ ಬಣ್ಣವನ್ನು ಹಚ್ಚಿ ಅವಮಾನ ಎಸಗಿದ್ದಾರೆ.
ಕನ್ನಡ ಪರ ಸಂಘಟನೆಗಳು ಮತ್ತು ಗ್ರಾಮಸ್ಥರಿಂದ ಆಕ್ರೋಶ :
ಕನ್ನಡ ಸಿನಿಮಾ ರಂಗದ ಮೇರು ನಟ ಪುನೀತ್ ರಾಜಕುಮಾರ್ ಅವರ ನಾಮಫಲಕಕ್ಕೆ ಬಿಳಿ ಬಣ್ಣ ಹಚ್ಚುವುದು ಮೂಲಕ ಅವಮಾನ ಮಾಡಿರುವವರ ವಿರುದ್ಧ ಕನ್ನಡಪರ ಸಂಘಟನೆಗಳು ಮತ್ತು ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾರಂಗದಲ್ಲಿ ಅಭಿನಯಿಸುವುದರ ಮೂಲಕ ಕೋಟ್ಯಾಂತರ ಜನಗಳ ಅಭಿಮಾನವನ್ನು ಹೊಂದಿದ್ದ ಪುನೀತ್ ರಾಜ್ ಕುಮಾರ್ ಅವರು ಯಾವುದೇ ಪ್ರಚಾರವಿಲ್ಲದೆ ಜನಸೇವೆಯನ್ನು ಮಾಡುವುದರ ಮೂಲಕ ಕನ್ನಡ ನಾಡಿನ ಜನತೆಯ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ನಾಮ ಫಲಕಕ್ಕೆ ಬಣ್ಣ ಹಚ್ಚಿ ಹೆಸರು ಅಳಿಸಿರುವ ಕಿಡಿಗೇಡಿಗಳು ಬಗ್ಗೆ ರಕ್ಷಣಾ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಹಾಗೆ ಅವರುಗಳನ್ನು ಬಂಧಿಸಬೇಕು ಎಂದು ಕನ್ನಡಪರ ಸಂಘಟನೆಗಳು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.