ಅತಿಥಿ ಉಪನ್ಯಾಸಕರು ಶೂ ಪಾಲಿಶ್, ಬಾರ್ ಗಳಲ್ಲಿ ವೇಟರ್ ಗಳಾಗಿ ಕೆಲಸ ಮಾಡುವ ದುಸ್ಥಿತಿ ಬಂದಿದ್ದರೂ ಸರ್ಕಾರ ಜಾಣಕುರುಡು ತೋರುತ್ತಿದೆ : ತೀರ್ಥಹಳ್ಳಿ ಅತಿಥಿ ಉಪನ್ಯಾಸಕರ ಆರೋಪ , ಪ್ರತಿಭಟನೆ

ತೀರ್ಥಹಳ್ಳಿ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾದ ಶ್ರೀಹರ್ಷ ಶಾನುಬೋಗ್ ರವರ ಭಾವಚಿತ್ರ ಹಿಡಿದು ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಾಲೇಜು ಶಿಕ್ಷಣ ಇಲಾಖೆಯ ವ್ಯವಸ್ಥೆಯಲ್ಲಿ 11 ಸಾವಿರದಿಂದ 13 ಸಾವಿರೂ ವೇತನ ಪಡೆದು ಇಂದಿನ ಬೆಲೆ ಏರಿಕೆ ಯುಗದಲ್ಲಿ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ ಇಂಥ ಶೋಚನೀಯ ಪರಿಸ್ಥಿತಿಯನ್ನು ಎದುರಿಸಲಾಗದೆ  ಹಲವಾರು ಅತಿಥಿ ಉಪನ್ಯಾಸಕರು  ಸಾವಿಗೀಡಾಗಿ ಅವರ ಕುಟುಂಬಗಳು ಬೀದಿಗೆ ಬಂದಿವೆ. ಇನ್ನು ಕೆಲವು ಅತಿಥಿ ಉಪನ್ಯಾಸಕರು ಶೂ ಪಾಲಿಶ್ ಮಾಡುವ ಹಾಗೂ ಬಾರ್ ಗಳಲ್ಲಿ ವೇಟರ್ ಗಳಾಗಿ ಕೆಲಸ ಮಾಡುವ ದುಸ್ಥಿತಿ ಎದುರಾಗಿದೆ.
ನಿನ್ನೆಯ ದಿನ ತೀರ್ಥಹಳ್ಳಿ ಕಾಲೇಜಿನಲ್ಲಿ ಸರಿಸುಮಾರು 13 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರಾದ ಹರ್ಷ ಶ್ಯಾಂನ್ ಬೋಗ್ ರವರು ಆರ್ಥಿಕ ಸಂಕಷ್ಟಕ್ಕೆ ನಲುಗಿ ಸಾವಿಗೆ ಶರಣಾಗಿದ್ದಾರೆ ಹಾಗಾಗಿ ಗೌರವಾನ್ವಿತ ವಿದ್ಯಾವಂತ ಸಮುದಾಯಕ್ಕೆ ಸರ್ಕಾರ ಈ ರೀತಿಯ ಸಂಕಷ್ಟಕ್ಕೆ ಸಿಲುಕಿರುವುದು ದುರದೃಷ್ಟಕರ ಸಂಗತಿಯಾಗಿದೆ ದಯಮಾಡಿ ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ ಎಂದರು.

ಸೇವಾ ಸಕ್ರಮಾತಿ (ಜೆಒಸಿ ಮಾದರಿಯಲ್ಲಿ) ಸೇವಾಭದ್ರತೆ (ಪಶ್ಚಿಮ ಬಂಗಾಳದ ಮಾದರಿಯಲ್ಲಿ) ಹಾಗೂ ಕರ್ನಾಟಕ ಸರ್ಕಾರದ ನಾಗರಿಕ ಸೇವೆಯಲ್ಲಿ ಸೇವಾ ವಿಲೀನಗೊಳಿಸುವುದು, ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಮೂಲಕ ಸರ್ಕಾರ ಅತಿಥಿ ಉಪನ್ಯಾಸಕರ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದರು.

ಈ ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರುಗಳಾದ ಅರ್ಚನಾ ಎನ್ ಎಂ,ರಾಜೇಶ್,ಸ್ಮಿತಾ,ರೂಪ ಎಂ ಎನ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *