ವಲಸೆ ಬಂದು ಹೋಗುವ ಶಾಸಕರಿಗೆ ಸಾಗರ ತಾಲೂಕಿನ ಬಗ್ಗೆ ಏನು ಗೊತ್ತು : ಬೇಳೂರು ಗೋಪಾಲಕೃಷ್ಣ
ಸಾಗರ. ಇಂದು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರೀಕಾ ಗೋಷ್ಟಿಯಲ್ಲಿ ಸಾಗರದ ಮಾಜಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಶಾಸಕ ಹಾಲಪ್ಪನವರ ವಿರುದ್ಧ ಹರಿಹಾಯ್ದಿದ್ದಾರೆ ಶಾಸಕ ಹಾಲಪ್ಪ ತುಮರಿ ಭಾಗದ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ನೀಡುವಲ್ಲಿ ವಿಫಲವಾಗಿದ್ದಾರೆ. ಕ್ರಿಕೇಟ್ ನೋಡುತ್ತ ಕುಳಿತ ಶಾಸಕ ಹಾಲಪ್ಪ ಸರಿಯಾದ ಸಮಯಕ್ಕೆ ತುಮರಿ ಗ್ರಾಮಕ್ಕೆ ಹೋಗಿದ್ದರೆ ಎರಡು ಜೀವ ಉಳಿಯುತ್ತಿತ್ತು ಇವರಿಗೆ ಎರಡು ಜೀವಕ್ಕಿಂತ ಕ್ರಿಕೆಟ್ ನೋಡುವುದೆ ಮುಖ್ಯವಾಗಿದೆ. ಆಕ್ಸಿಜನ್ ವ್ಯವಸ್ಥೆ ಇಲ್ಲದ ಸೆಕೆಂಡ್ ಹ್ಯಾಂಡ್ ಆಂಬುಲೆನ್ಸ್ ನೀಡಿ ಪ್ರಚಾರಕ್ಕಾಗಿ ನಗರಸಭೆಯಲ್ಲಿ ಸಮಾರಂಭ…