January 11, 2026

ವಲಸೆ ಬಂದು ಹೋಗುವ ಶಾಸಕರಿಗೆ ಸಾಗರ ತಾಲೂಕಿನ ಬಗ್ಗೆ ಏನು ಗೊತ್ತು : ಬೇಳೂರು ಗೋಪಾಲಕೃಷ್ಣ

ಸಾಗರ. ಇಂದು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರೀಕಾ ಗೋಷ್ಟಿಯಲ್ಲಿ  ಸಾಗರದ ಮಾಜಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು  ಶಾಸಕ ಹಾಲಪ್ಪನವರ ವಿರುದ್ಧ ಹರಿಹಾಯ್ದಿದ್ದಾರೆ

ಶಾಸಕ ಹಾಲಪ್ಪ ತುಮರಿ ಭಾಗದ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ನೀಡುವಲ್ಲಿ ವಿಫಲವಾಗಿದ್ದಾರೆ. ಕ್ರಿಕೇಟ್ ನೋಡುತ್ತ ಕುಳಿತ ಶಾಸಕ ಹಾಲಪ್ಪ ಸರಿಯಾದ ಸಮಯಕ್ಕೆ ತುಮರಿ ಗ್ರಾಮಕ್ಕೆ ಹೋಗಿದ್ದರೆ ಎರಡು ಜೀವ ಉಳಿಯುತ್ತಿತ್ತು ಇವರಿಗೆ ಎರಡು ಜೀವಕ್ಕಿಂತ ಕ್ರಿಕೆಟ್ ನೋಡುವುದೆ ಮುಖ್ಯವಾಗಿದೆ.

ಆಕ್ಸಿಜನ್ ವ್ಯವಸ್ಥೆ ಇಲ್ಲದ ಸೆಕೆಂಡ್ ಹ್ಯಾಂಡ್ ಆಂಬುಲೆನ್ಸ್ ನೀಡಿ ಪ್ರಚಾರಕ್ಕಾಗಿ ನಗರಸಭೆಯಲ್ಲಿ ಸಮಾರಂಭ ಮಾಡಿದ್ದಾರೆ.ಅಂಬುಲೆನ್ಸ್’ನಲ್ಲಿ ಆಕ್ಸಿಜನ್ ಇಲ್ಲ. ಇದು ಜನರ ಜೀವ ಹೇಗೆ ಉಳಿಸುತ್ತದೆ ಎಂದರು.


ಸೊರಬ ರಸ್ತೆ ಅಗಲೀಕರಣಕ್ಕೆ ಪ್ರಾರಂಭದಲ್ಲಿ 20ಕೋಟಿ ತಂದವನೇ ನಾನು, ನಂತರದಲ್ಲಿ ಯೋಜನಾ ವೆಚ್ಷ ಹೆಚ್ಚಿದೆ. ಶಾಸಕರ ರೌಡಿ ಪಟಾಲಂ ಜಾಗವನ್ನು ಬೇಗ ಬಿಟ್ಟು ಕೊಡಬೇಕು ಎಂದು ಆ ಭಾಗದ ಹಲವರನ್ನು ಹೆದರಿಸಿದ್ದಾರೆ. ಈ ಕಾರಣಕ್ಕಾಗಿ ಅಲ್ಲಿನ ಜನ ಬೇಸರಗೊಂಡು ನ್ಯಾಯಾಲಕ್ಕೆ ಹೋಗಿದ್ದಾರೆ. ಬೆದರಿಸಿರುವ ವಿಡಿಯೋ ತುಣುಕುಗಳು ನಮ್ಮ ಬಳಿ ಇದೆ ಎಂದು ಹೇಳಿದರು.

ಸಾಗರ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ಹದಗೆಟ್ಟಿದೆ. ಸ್ವಚ್ಚತೆಗೆ ಗಮನ ನೀಡುತ್ತಿಲ್ಲ.ಒಂದು ವರ್ಷದಲ್ಲಿ ನಗರಸಭೆ ಆಡಳಿತ ಸಂಪೂರ್ಣ ವಿಫಲವಾಗಿದೆ.ಶಾಸಕರಿಗೆ ಸಾಗರ ತಾಲೂಕಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಮತ್ತು ಜವಾಬ್ದಾರಿ ಇಲ್ಲ, ಅವರು ಬಂದು ಹೋಗುವ ವಲಸೆ ಶಾಸಕರು ಎಂದು ಗಂಭೀರ ಆರೋಪ  ಮಾಡಿದ್ದಾರೆ.

ಗೋಷ್ಟಿಯಲ್ಲಿ ನಗರ ಕಾಂಗ್ರೆಸ್‌ ಅಧ್ಯಕ್ಷ ಸುರೇಶ್’ಬಾಬು,ಮಾಜಿ ತಾಪಂ ಸದಸ್ಯ ಸೋಮಶೇಖರ್ ಲಾವಿಗೇರಿ,ನಗರಸಭೆ ವಿರೋಧ ಪಕ್ಷದ ನಾಯಕ  ಮಂಡಗಳಲೆ ಗಣಪತಿ ತಾರಮೂರ್ತಿ, ಗಲ್ಲಿ ವೆಂಕಟೇಶ, ನಗರಸಭೆ ಸದಸ್ಯೆ ಮಧುಮಾಲತಿ ,ಅಶೋಕ್ ಬೇಳೂರು, ರಮೇಶ ಚಂದ್ರಗುತ್ತಿ, ಐ.ಜಿ.‌ಸ್ವರೂಪ್  ಹಾಜರಿದ್ದರು.

About The Author

Leave a Reply

Your email address will not be published. Required fields are marked *