ಕೆಂಚನಾಲದಲ್ಲಿ ಮಾರಿಕಾಂಬ ಕನ್ನಡ ಯುವಕ ಸಂಘದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ : ಎರಡು ದಿನದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕೆಂಚನಾಲದಲ್ಲಿ ಮಾರಿಕಾಂಬ ಕನ್ನಡ ಯುವಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್ ಮಾತನಾಡಿ ಕ್ರೀಡೆ ಎನ್ನುವುದು ಯುವಕರ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಕಂಪ್ಯೂಟರ್ ಚಟುವಟಿಕೆಗಳಲ್ಲಿ ತೊಡಗದೆ, ದೈಹಿಕ ಸದೃಢತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಬೇಕು `ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಆ ದಿಸೆಯಲ್ಲಿ ಮಕ್ಕಳಲ್ಲಿನ ನೈಜ ಪ್ರತಿಭೆಯನ್ನು ನಿರ್ಣಾಯಕರು ಗುರುತಿಸಬೇಕು. ಶೈಕ್ಷಣಿಕ ಜ್ಞಾನ ವೃದ್ಧಿ ಹಾಗೂ ಭೌದ್ಧಿಕ ಬೆಳವಣಿಗೆ ಅವಶ್ಯವಿರುವ ಕ್ರೀಡೆಯಲ್ಲಿ ಸೋಲು ಗೆಲುವು ಲೆಕ್ಕಿಸದೆ ಪ್ರತಿಯೊಬ್ಬರು ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು ಎಂದರು.
ನಂತರ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ವಕೀಲರಾದ ಕೆ ಎಂ ಬಸವರಾಜ್ ರವರು ಜೀವನದಲ್ಲಿ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಮಹತ್ವವಿದೆ ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡಾಕೂಟವನ್ನು ಬೆಳೆಸಿಕೊಳ್ಳುವುದರಿಂದ ದೇಹದ ಆರೋಗ್ಯ ಮಾನಸಿಕ ಮತ್ತು ಭೌತಿಕ ಸ್ಥಿಮಿತ ಕಾಪಾಡಿಕೊಳ್ಳಬಹುದು ಜಾಗತಿಕ ಮಟ್ಟದಲ್ಲಿ ಕ್ರೀಡೆಗಳಿಗೆ ಮಹತ್ವವಾದ ಅವಕಾಶಗಳಿದ್ದು ವಿದ್ಯಾರ್ಥಿಗಳು ಪಠ್ಯಕ್ರಮದ ಜೊತೆಗೆ ಕ್ರೀಡೆಗಳಲ್ಲಿ ಸಹ ಹೆಚ್ಚಿನ ಗಮನ ಕೊಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರಿಕಾಂಬ ಕನ್ನಡ ಯುವಕ ಸಂಘದ ಅಧ್ಯಕ್ಷರಾದ ಅರುಣ್ ಕೆ ಎಂ ರವರು ವಹಿಸಿದ್ದರು.
ಈ ಸಂದರ್ಭದಲ್ಲಿ ಕೆಂಚನಾಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುಟ್ಟಮ್ಮ ಭಾಸ್ಕರ್ ಹಾಗೂ ಸದಸ್ಯರುಗಳಾದ ಮಹಮ್ಮದ್ ಶರೀಫ್, ಲಕ್ಷ್ಮಮ್ಮ ಜಲಂದರ್, ಕೃಷ್ಣೋಜಿರಾವ್, ಪರಮೇಶ್,ಹೂವಮ್ಮ ರಾಮಪ್ಪ, ಗೌರಮ್ಮ ಮಹೇಶ್, ರಮ್ಯಾ ಶಶಿಕುಮಾರ್ ಹಾಗೂ ಕೆಂಚನಾಳ ಶಾಲೆಯ ಮುಖ್ಯಶಿಕ್ಷಕರಾದ ತ್ಯಾಗರಾಜ್,ಕೆಂಚನಾಲ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗಳಾದ ಶಿವಪ್ರಸಾದ್,ಖಲೀಲ್ ಗಾಳಿಬೈಲು ಹಾಗೂ ಮಾರಿಕಾಂಬ ಕನ್ನಡ ಯುವಕ ಸಂಘದ ಪದಾದಿಕಾರಿಗಳು ಮತ್ತು ಇನ್ನಿತರರು ಭಾಗವಹಿಸಿದ್ದರು


