Headlines

ಯಶಸ್ವಿಯಾಗಿ ನಡೆದ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ : ಪುನೀತ್ ರಾಜ್‍ಕುಮಾರ್ ರಂತವರು ಪದೇ ಪದೇ ಕನ್ನಡ ನಾಡಿನಲ್ಲಿ ಜನಿಸಬೇಕು : ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ : ಪಟ್ಟಣದ ಆರ್ ಸಿಸಿ ಆಟದ ಮೈದಾನದಲ್ಲಿ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಇಲೆವೆನ್ ಸ್ಟಾರ್ ಕ್ರಿಕೆಟ್ ತಂಡ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗೆದ್ದ ಎಕೆ ಲಯನ್ಸ್ ಕ್ರಿಕೆಟ್ ಕ್ಲಬ್ ಶಿವಮೊಗ್ಗ ತಂಡಕ್ಕೆ ಪುನೀತ್ ರಾಜ್‍ಕುಮಾರ್ ಟ್ರೋಫಿಯನ್ನು ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ವಿತರಿಸಿದರು. ನಂತರ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ನಾಯಕತ್ವ ಗುಣ…

Read More

ಸೊರಬದಲ್ಲಿ ಎತ್ತು ತೊಳೆಯುವಾಗ ಕಾಲುಜಾರಿ ಬಿದ್ದು ವ್ಯಕ್ತಿ ಸಾವು :

ಸೊರಬ : ನದಿಯಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿ ಕಾಲು ಜಾರಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ತಾಲೂಕಿನ ಮೂಡಿ ಗ್ರಾಮದಲ್ಲಿ ನಡೆದಿದೆ. ಮೂಡಿ ಗ್ರಾಮದ ಶಶಿಧರ ಗೂಳೇರ್ (42) ಮೃತ ದುರ್ದೈವಿ. ಇಂದು ಬೆಳಗ್ಗೆ ಗ್ರಾಮದ ವರದಾ ನದಿಯಲ್ಲಿ ಎತ್ತುಗಳ ಮೈತೊಳೆಯಲು ಹೋದ ಸಂದರ್ಭದಲ್ಲಿ ಶಶಿಧರ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸತತ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆಹಚ್ಚಿದ್ದಾರೆ….

Read More

ಕಾರಿನಲ್ಲಿ ಆಂಧ್ರದಿಂದ ಶಿವಮೊಗ್ಗ ಸಾಗಿಸುತ್ತಿದ್ದ 21 ಕೆ.ಜಿ ಗಾಂಜಾ ವಶಕ್ಕೆ: ನಾಲ್ವರ ಬಂಧನ

ಶಿವಮೊಗ್ಗ: ಆಂಧ್ರದಿಂದ ಶಿವಮೊಗ್ಗಕ್ಕೆ ಸಾಗಿಸಲಾಗುತ್ತಿದ್ದ 21 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿರುವ ತುಂಗಾ ನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನಗರಕ್ಕೆ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರ ಕಾರ್ಯಾಚರಣೆ ನಡೆದಿದೆ.‌ ಶಿವಮೊಗ್ಗ ತಾಲೂಕಿನ ಹಾಲಲಕ್ಕವಳ್ಳಿ ಗ್ರಾಮದ ಬಳಿ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನೋವಾ ಕಾರಿನಲ್ಲಿ ಗಾಂಜಾವನ್ನು ಶಿವಮೊಗ್ಗಕ್ಕೆ ತರಲಾಗುತ್ತಿತ್ತು. ಕಾರಿನಲ್ಲಿದ್ದ ದೌಲತ್ ಅಲಿಯಾಸ್ ಗುಂಡು, ಮುಜೀಬ್ ಖಾನ್ ಅಲಿಯಾಸ್ ಬ್ರಸ್ಟ್, ಶೋಯೆಬ್ ಅಲಿಯಾಸ್ ಚೂಡಿ ಹಾಗೂ ಜಪ್ರುಲ್ಲಾ ಎಂಬುವರನ್ನು ಬಂಧಿಸಲಾಗಿದೆ. ಗಾಂಜಾ ಮೌಲ್ಯವು ಅಂದಾಜು 6…

Read More

ರಿಪ್ಪನ್ ಪೇಟೆಯ ನೇತ್ರಾ ಟೈಲರ್ ಗುರುಪಾದಪ್ಪ ನಿಧನ :

ರಿಪ್ಪನ್ ಪೇಟೆ: ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಪಟ್ಟಣದ ನಿವಾಸಿ, ಟೈಲರ್ ಗುರುಪಾದಪ್ಪ (ನೇತ್ರಾ ಟೈಲರ್) (65) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು. ರಿಪ್ಪನ್ ಪೇಟೆಯಲ್ಲಿ ನೇತ್ರಾ ಟೈಲರ್ ಎಂದೇ ಪ್ರಸಿದ್ದರಾಗಿದ್ದ ಇವರು ಕೆಲವು ವರ್ಷಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ,ಇಬ್ಬರು ಪುತ್ರಿಯರು ಇದ್ದಾರೆ. ಭಾನುವಾರ ಬೆಳಿಗ್ಗೆ 10ಕ್ಕೆ ಬೈರಾಪುರ ಗ್ರಾಮದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೇರವೆರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More

ಬಸ್ ನಲ್ಲಿ ಶೃಂಗೇರಿ ಮೂಲದ ಮುಸ್ಲಿಂ ಯುವಕ, ಹಿಂದೂ ಯುವತಿಯ ರೋಮ್ಯಾನ್ಸ್ ; ಸಾರ್ವಜನಿಕರಿಂದ ತರಾಟೆ

ಶೃಂಗೇರಿ : ತಾಲೂಕು ಹಾಗೂ ತೀರ್ಥಹಳ್ಳಿ ಗಡಿಭಾಗದ ಬಿದರಗೋಡು ಗ್ರಾಮದ ಯುವಕನೊಬ್ಬ ಉಡುಪಿ ಮೂಲದ ಹಿಂದೂ ಯುವತಿಯಳೊಡನೆ ಅಸಭ್ಯವಾಗಿ ವರ್ತಿಸಿ ಹಿಂದೂ ಸಂಘಟಕರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಬಿದರಗೋಡಿನ ಸುನೈಫ್ ಇಬ್ರಾಹಿಂ ಎಂಬಾತ ಉಡುಪಿ-ಮಂಗಳೂರು ಬಸ್ ನಲ್ಲಿ ಉಡುಪಿ ಮೂಲದ ಹಿಂದೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು, ಥಳಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ. ಲವ್ ಜಿಹಾದ್ ಆರೋಪ;…

Read More

ಅನಂದಪುರದಲ್ಲಿ ಭರ್ಜರಿಯಾಗಿ ಆರಂಭಗೊಂಡ ಕಾಂಗ್ರೆಸ್ ಸದಸ್ಯತ್ವ ಅಭಿಯಾನ !!

ರಾಜ್ಯಾದ್ಯಂತ ಇಂದು ಡಿಕೆ ಶಿವಕುಮಾರ್ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನವನ್ನು ಪ್ರಾರಂಭ ಮಾಡಲಾಗಿದೆ. ಜೂಮ್ ಆ್ಯಪ್ ನ ಮೂಲಕ ಇದೀಗ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ರಾಜ್ಯಾದ್ಯಂತ ಯುವ ಪೀಳಿಗೆಯನ್ನು ಸೆಳೆಯುವ ಉದ್ದೇಶದಿಂದ ಭರ್ಜರಿಯಾಗಿ ಇಂದಿನಿಂದ ಕಾಂಗ್ರೆಸ್ ಸದಸ್ಯತ್ವ ಅಭಿಯಾನವನ್ನು ಚಾಲನೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಡಾಕ್ಟರ್  ರಾಜ ನಂದಿನಿ. ಪ್ರಧಾನ ಕಾರ್ಯದರ್ಶಿಯಾದ ಅಘ ಸುಲ್ತಾನ್ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ರತ್ನಾಕರ…

Read More

ಯೋಧರ ಸಾವು ಸಂಭ್ರಮಿಸುತ್ತಿರುವ ವಿಕೃತರಿಗೆ ನಡು ರಸ್ತೆಯಲ್ಲಿಯೇ ಗುಂಡಿಟ್ಟರು ತಪ್ಪಿಲ್ಲ ಎಂದ ಶಿವಮೊಗ್ಗ ಗ್ರಾಮಾಂತರ ಶಾಸಕ..

ಶಿವಮೊಗ್ಗ : ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರೆ ಯೋಧರ ಸಾವಿನ ಕುರಿತಂತೆ, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಫೋಸ್ಟ್ ಮಾಡಿದವರ ವಿರುದ್ದ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕನಾಯ್ಕ್ ಗರಂ ಆಗಿದ್ದಾರೆ. ಇಂತಹ ವಿಕೃತರನ್ನು ನಡು ರಸ್ತೆಯಲ್ಲಿಯೇ ಗುಂಡಿಟ್ಟು ಕೊಂದರು ತಪ್ಪಿಲ್ಲ..! ಎಂದು ಟ್ವೀಟ್ ಮಾಡಿದ್ದಾರೆ.  ಈ ಕುರಿತಂತೆ ಶುಕ್ರವಾರ ತಮ್ಮ ಅದಿಕೃತ ಟ್ವಿಟರ್ ಖಾತೆಯಲ್ಲಿ ಕೆ.ಬಿ.ಅಶೋಕನಾಯ್ಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ.ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ತರವಾದ ಪಾತ್ರವಹಿಸಿ ದೇಶಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿರುವ…

Read More

ರಿಪ್ಪನ್ ಪೇಟೆಯಲ್ಲಿ ಶ್ರದ್ದಾ ಭಕ್ತಿಯ ಷಷ್ಟಿ ಆಚರಣೆ :

ರಿಪ್ಪನ್‌ಪೇಟೆ: ಸುಬ್ರಹ್ಮಣ್ಯ ಷಷ್ಟಿಯ ಅಂಗವಾಗಿ ಇಲ್ಲಿನ ಇತಿಹಾಸ ಪ್ರಸಿದ್ದ ಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನ, ಬರುವೆ ಚೌಡೇಶ್ವರಿ ಅಮ್ಮನವರ  ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಷಷ್ಟಿ ಉತ್ಸವವು ವೈಭವದೊಂದಿಗೆ ಸಂಪನ್ನಗೊಂಡಿತು. ರಿಪ್ಪನ್‌ಪೇಟೆಯ ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಚಂದ್ರಶೇಖರ್‌ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ  ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ತೀಕ ದೀಪೋತ್ಸವ ಜರುಗಿತು. ಕಾರ್ತಿಕ ದೀಪೋತ್ಸವ ವು ಸುತ್ತಮುತ್ತಲಿನ ಅಲಸೆ, ಬರುವೆ, ಹುಂಚದಕಟ್ಟೆ, ಶಿವಪುರ ಇನ್ನಿತರ ಹಲವು ಗ್ರಾಮಗಳಲ್ಲಿನ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ…

Read More

ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿಯೇ ತೀರುತ್ತೇವೆ : ಸಚಿವ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಮತಾಂತರ ಕಾಯ್ದೆ ಜಾರಿಗೆ ತರಲಿಕ್ಕಾದರೂ ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಇಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಗೆಲುವಿಗೆ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅದ್ಯಾವ ಬುದ್ದಿ ಇದೆಯೋ ಗೊತ್ತಿಲ್ಲ. ಹಿಂದೂ ಧರ್ಮದ ಅವನತಿ ನಡೆಯುತ್ತಿದ್ದರೂ ಕೂಡ ಕೇವಲ ವೋಟಿನ ರಾಜಕಾರಣಕ್ಕಾಗಿಯೇ ಧರ್ಮ ವಿರೋಧ…

Read More

ವಿಧಾನ ಪರಿಷತ್ ಚುನಾವಣೆ : ಬಿಎಸ್ ವೈ,ಈಶ್ವರಪ್ಪ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಯ ಸದಸ್ಯರಿಂದ ಮತದಾನ : ರಿಪ್ಪನ್ ಪೇಟೆಯಲ್ಲಿ ಗ್ರಾಪಂ ಸದಸ್ಯರಿಂದ ಮತದಾನ

ವಿಧಾನ ಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ ಮಧ್ಯಾಹ್ನದವರೆಗೂ ಅನೇಕ ಪ್ರಮುಖರು ಮತ ಚಲಾಯಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿರುವ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್ ಮತದಾನ ಮಾಡಿದರು. ಶಿಕಾರಿಪುರದಲ್ಲಿ ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ ಮತಚಲಾಯಿಸಿದರೆ, ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ, ಆಯನೂರು ಮಂಜುನಾಥ್, ರುದ್ರೇಗೌಡ, ಮೇಯರ್ ಸುನೀತ ಅಣ್ಣಪ್ಪ ಒಳಗೊಂಡತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಒಟ್ಟಿಗೆ ಬಂದು ಮತ ಚಲಾಯಿಸಿದರು. ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ರವರು ತೀರ್ಥಹಳ್ಳಿ ಪಟ್ಟಣ…

Read More