w
Headlines
Home » ಯೋಧರ ಸಾವು ಸಂಭ್ರಮಿಸುತ್ತಿರುವ ವಿಕೃತರಿಗೆ ನಡು ರಸ್ತೆಯಲ್ಲಿಯೇ ಗುಂಡಿಟ್ಟರು ತಪ್ಪಿಲ್ಲ ಎಂದ ಶಿವಮೊಗ್ಗ ಗ್ರಾಮಾಂತರ ಶಾಸಕ..

ಯೋಧರ ಸಾವು ಸಂಭ್ರಮಿಸುತ್ತಿರುವ ವಿಕೃತರಿಗೆ ನಡು ರಸ್ತೆಯಲ್ಲಿಯೇ ಗುಂಡಿಟ್ಟರು ತಪ್ಪಿಲ್ಲ ಎಂದ ಶಿವಮೊಗ್ಗ ಗ್ರಾಮಾಂತರ ಶಾಸಕ..

ಶಿವಮೊಗ್ಗ : ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರೆ ಯೋಧರ ಸಾವಿನ ಕುರಿತಂತೆ, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಫೋಸ್ಟ್ ಮಾಡಿದವರ ವಿರುದ್ದ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕನಾಯ್ಕ್ ಗರಂ ಆಗಿದ್ದಾರೆ.

ಇಂತಹ ವಿಕೃತರನ್ನು ನಡು ರಸ್ತೆಯಲ್ಲಿಯೇ ಗುಂಡಿಟ್ಟು ಕೊಂದರು ತಪ್ಪಿಲ್ಲ..! ಎಂದು ಟ್ವೀಟ್ ಮಾಡಿದ್ದಾರೆ. 

ಈ ಕುರಿತಂತೆ ಶುಕ್ರವಾರ ತಮ್ಮ ಅದಿಕೃತ ಟ್ವಿಟರ್ ಖಾತೆಯಲ್ಲಿ ಕೆ.ಬಿ.ಅಶೋಕನಾಯ್ಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ.ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ತರವಾದ ಪಾತ್ರವಹಿಸಿ ದೇಶಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿರುವ ವೀರ ಯೋಧರ ಮರಣವನ್ನು, ವಿಕೃತಾಗಿ ಸಂತೋಷ ಪಡುತ್ತಿರುವವರಿಗೂ ಉಗ್ರಗ್ರಾಮಿಗಳಿಗೂ ವ್ಯತ್ಯಾಸವಿಲ್ಲ. ಇಂತಹವರನ್ನು ನಡು ರಸ್ತೆಯಲ್ಲಿ ಗುಂಡಿಟ್ಟು ಕೊಂದರು ತಪ್ಪಿಲ್ಲ. ದೇಶದ ಮಣ್ಣಿಗೆ ಮಾಡಿದ ದೊಡ್ಡ ಅವಮಾನವನ್ನು ಯಾರು ಕೂಡ ಸಹಿಸಲಾಗದು’ ಎಂದು ಟ್ವೀಟರ್ ಸಂದೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.