ರಿಪ್ಪನ್‌ಪೇಟೆ: ಸುಬ್ರಹ್ಮಣ್ಯ ಷಷ್ಟಿಯ ಅಂಗವಾಗಿ ಇಲ್ಲಿನ ಇತಿಹಾಸ ಪ್ರಸಿದ್ದ ಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನ, ಬರುವೆ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಷಷ್ಟಿ ಉತ್ಸವವು ವೈಭವದೊಂದಿಗೆ ಸಂಪನ್ನಗೊಂಡಿತು.
ರಿಪ್ಪನ್‌ಪೇಟೆಯ ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಚಂದ್ರಶೇಖರ್‌ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ತೀಕ ದೀಪೋತ್ಸವ ಜರುಗಿತು.
ಕಾರ್ತಿಕ ದೀಪೋತ್ಸವ ವು ಸುತ್ತಮುತ್ತಲಿನ ಅಲಸೆ, ಬರುವೆ, ಹುಂಚದಕಟ್ಟೆ, ಶಿವಪುರ ಇನ್ನಿತರ ಹಲವು ಗ್ರಾಮಗಳಲ್ಲಿನ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ಜರುಗಿತು.ಪಟ್ಟಣದ ಹಲವು ಮನೆಗಳಲ್ಲಿ ಸುಬ್ರಹ್ಮಣ್ಯ ಷಷ್ಟಿಯ ಅಂಗವಾಗಿ ವಿಶೇಶ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಚಂಡೆ ಮತ್ತು ವಿವಿಧ ಸಾಂಸ್ಕೃತಿಕ ಜಾನಪದ ಕಲಾತಂಡಗಳ ಭವ್ಯ ಮೆರವಣಿಗೆಯು ಸಿದ್ದಿವಿನಾಯಕ ಷಷ್ಟಿ ಉತ್ಸವವು ಹೊರಡುತ್ತಿದ್ದಂತೆ ಊರಿನ ಮುಖ್ಯ ರಸ್ತೆಯಲ್ಲಿ ಸಗಣಿಯಿಂದ ಸಾರಿಸಿ ರಂಗೋಲಿ ತಳಿರು-ತೋರಣವನ್ನು ಕಟ್ಟಿ ಉತ್ಸವವನ್ನು ಸ್ವಾಗತಿಸಿ ಹಣ್ಣು-ಕಾಯಿಗಳನ್ನು ಸಮರ್ಪಿಸಿದರು.