ಸಾಗರದ ಹುಲಿದೇವರಬನದ ಎಂಪಿಎಂ ಅರಣ್ಯ ಪ್ರದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ : ಆಟವಾಡುತ್ತಿದ್ದ ಬಾಲಕಿ ಸಾವು
ಸಾಗರ : ಇಂದು ಸಂಜೆ ನಡೆದ ಅವಘಡದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳ ಮೇಲೆ ಮರದ ದಿಮ್ಮಿ ಹರಿದು ಸಾವನ್ನಪ್ಪಿರುವ ಘಟನೆ ಸಾಗರದ ಹುಲಿದೇವರ ಬನದಲ್ಲಿರುವ MPM ಅರಣ್ಯ ಪ್ರದೇಶದಲ್ಲಿ ನಡೆದಿದೆ. ಇಂದು ಸಂಜೆ ಸುಮಾರು 4-30ರ ಸಮಯದಲ್ಲಿ ಮರಗಳನ್ನ ಕಡಿದು ಒಂದರ ಮೇಲೊಂದು ಮರದ ದಿಮ್ಮಿಗಳನ್ನ ಸಿಪ್ಪೆ ಸುಲಿದು ಜೋಡಿಸಿ ಇಡಲಾಗಿತ್ತು. ಮರದ ದಿಮ್ಮಿಯ ಕೆಳಗೆ 6 ವರ್ಷದ ಶ್ರಾವಣಿ ಎಂಬ ಹೆಣ್ಣು ಮಗು ಆಡುತ್ತಿದ್ದ ವೇಳೆ ಜೋಡಿಸಿದ ಮರದ ದಿಮ್ಮಿ ಚದುರಿಹೋಗಿದ್ದು ಮಗುವಿನ ಮೇಲೆ…