Headlines

ಶಿವಮೊಗ್ಗದ ಅಕ್ರಮ ಕಸಾಯಿಖಾನೆಗಳ ಮೇಲೆ ಪೊಲೀಸರ ಕಾರ್ಯಚರಣೆ :15 ಕೆಜಿ ಗೋಮಾಂಸ ವಶ :

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ನಡೆದ ಅಕ್ರಮ ಗೋಸಾಗಾಣಿಕೆ ಹಾಗೂ ಗೋರಕ್ಷಕರ ಪ್ರತಿಭಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಭರ್ಜರಿ ಸಂಚಲನ ಮೂಡಿಸಿದೆ.

ಪೊಲೀಸರ ಕಾರ್ಯಾಚರಣೆಯಲ್ಲಿ  ಅಕ್ರಮ ಕಸಾಯಿ
ಖಾನೆಗಳನ್ನು  ಬಂದ್ ಮಾಡಿಸಲಾಗಿದೆ. ಶಿವಮೊಗ್ಗದ ಎಲ್ಲಾ ಕಸಾಯಿ ಖಾನೆಗಳು ಅಕ್ರಮವಾಗಿದ್ದರೂ ಅವುಗಳು ಇದುವರೆಗೂ ರಾಜಕೀಯ ಪ್ರೇರಣೆಯಿಂದ ಎಗ್ಗಿಲ್ಲದೆ ನಡೆಯುತ್ತಿದ್ದವು.
ದೊಡ್ಡಪೇಟೆ ಪೊಲೀಸರು ಅಕ್ರಮ ಕಸಾಯಿ ಖಾನೆಗಳ ಮೇಲೆ ದಾಳಿ ನಡೆಸುತ್ತಿದ್ದಂತೆ ನಗರದ ಇತರೆ ಅಕ್ರಮ ಕಸಾಯಿ ಖಾನೆಗಳು ಬಂದ್ ಆಗಿವೆ. 

ಇಲಿಯಾಸ್ ನಗರ 100 ಅಡಿ ರಸ್ತೆಯಲ್ಲಿರುವ ಎಸ್,ಎಫ್, ಕಾರ್ ಕೇರ್ ಹಿಂಭಾಗದಲ್ಲಿರುವಹುವೇಜ್ ಎಂಬುವವರಿಗೆ ಸೇರಿದ ದನದ ಮಾಂಸದ ಅಂಗಡಿಯ ಮೇಲೆ ದಾಳಿ ನಡೆಸಲಾಗಿದೆ.

ದಾಳಿಯಲ್ಲಿ 3000/-ರೂ ಬೆಲೆಯ ಒಟ್ಟು 15 ಕೆ ಜಿ ತೂಕದ ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಒಬ್ಬನನ್ನು ಬಂಧಿಸಲಾಗಿದೆ. ಇಂದು ಮಹಾನಗರ ಪಾಲಿಕೆಯ ಪಶುವೈದ್ಯರಿಂದ ಮಹಜರ್ ನಡೆಸಲಾಗಿದೆ.



ವರದಿ : ಸುರೇಂದ್ರ ಶಿವಮೊಗ್ಗ 

Leave a Reply

Your email address will not be published. Required fields are marked *