POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಶಿವಮೊಗ್ಗದ ಖಾಸಗಿ ಲಾಡ್ಜ್ ನಲ್ಲಿ ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ : ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ

ಶಿವಮೊಗ್ಗ : ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಖಾಸಗಿ ಲಾಡ್ಜ್ ನಲ್ಲಿ ಪತ್ತೆಯಾಗಿದ್ದಾಳೆ ಎಂದು ಆರೋಪಿಸಿ ಇಂದು ಬಜರಂಗರಂಗ ದಳ ಸಂಘಟನೆಯ ಕಾರ್ಯಕರ್ತರು ಖಾಸಗಿ ಹೋಟೆಲ್ ಎದುರು ಪ್ರತಿಭಟನೆ ನಡೆಸಿತು
ನಿನ್ನೆಯ ದಿನ ಹೊನ್ನಾಳಿ ರಸ್ತೆ ಯಲ್ಲಿರುವ ಖಾಸಗಿ ಲಾಡ್ಜ್ ನಲ್ಲಿ ಅನ್ಯಕೋಮಿನ ಯುವಕನು ಹಿಂದೂ ಯುವತಿಯನ್ನ ಕರೆದುಕೊಂಡು ಬಂದು ಉಳಿದಿರುವುದು ಬಜರಂಗದಳದ ಸಂಘಟನೆಯ ಕಾರ್ಯಕರ್ತರ ಕಣ್ಣು ಕೆಂಪಾಗುವಂತೆ ಮಾಡಿದೆ.
ದಾವಣಗೆರೆ ಜಿಲ್ಲೆಯ ಯುವಕ ಮತ್ತು ಯುವತಿಯರು ಹಳೆಯ ಪರಿಚಯದ ಮೇಲೆ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದ್ದು. ಲಾಡ್ಜ್ ನಲ್ಲಿ ಪೊಲೀಸರೊಂದಿಗೆ ಬಜರಂಗದಳದ ಕಾರ್ಯಕರ್ತರು ದಾಳಿಯಿಟ್ಟಿದ್ದರು. ಲಾಡ್ಜ್ ನಲ್ಲಿ ಯುವಕ ಯುವತಿ  ಸಿಕ್ಕಿಬಿದ್ದಿದ್ದರು.
ಇದು ಬಜರಂಗದಳದ ಕೆಂಗಣ್ಣಿಗೆ ಕಾರಣವಾಗಿದೆ. ಈ ಕುರಿತು  ಮಾತನಾಡಿದ ಬಜರಂಗದಳದ ಮುಖ್ಯಸ್ಥ ರಾಜುಗೌಡ ರೆಡ್ ಹ್ಯಾಂಡ್ ಆಗಿ ಸಿಲುಕಿರುವ ಯುವಕ ಯುವತಿ ಲಾಡ್ಜ್ ನಲ್ಲಿ ದೊರೆತಿದ್ದಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆ ನಡೆಸಲು ನೀಡಿರುವ ಅನುಮತಿ ರದ್ದುಗೊಳಿಸಿ ಲಾಡ್ಜ್ ಬಂದ್ ಮಾಡುವಂತೆ ಆಗ್ರಹಿಸಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.