Headlines

ಶಿವಮೊಗ್ಗದಲ್ಲಿ ಅನಾಮಧೇಯ ಶವ ಪತ್ತೆ :

ಶಿವಮೊಗ್ಗ : ನಗರದ ಮುಸ್ಲಿಂ ಸ್ಮಶಾನದ ಮುಂಭಾಗದ ಕಬ್ಬಿನ ಹಾಲಿನ ಮಶೀನ್ ಪಕ್ಕದ ಮರದಲ್ಲಿ ಸುಮಾರು 35 ವರ್ಷದ ಅನಾಮಧೇಯ ಪುರುಷನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇರಿಸಲಾಗಿದೆ.
ಅನಾಮಧೇಯ ವ್ಯಕ್ತಿಯು ಸುಮಾರು 5.6 ಅಡಿ ಎತ್ತರ, ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಸುಮಾರು 02 ಇಂಚು ಉದ್ದದ ಕಪ್ಪು ಕೂದಲು ಹಾಗೂ 01 ಇಂಚು ಉದ್ದದ ಕುರುಚಲು ಗಡ್ಡ ಮೀಸೆ ಇರುತ್ತದೆ. ಮೃತನು ಕಂದು ಕೆಂಪು ಮಿಶ್ರಿತ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಮಾಸಲು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ಅನಾಮಧೇಯ ಮೃತರ ವಾರಸುದಾರರು ಯಾರಾದಲ್ಲಿ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

About The Author

Leave a Reply

Your email address will not be published. Required fields are marked *