ರಿಪ್ಪನ್‌ಪೇಟೆ : ಇಲ್ಲಿನ ವಿಶ್ವಮಾನವ ಕಲ್ಯಾಣ ಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಅವರ 118ನೇ ಜನ್ಮ ದಿನಾಚರಣೆಯನ್ನು ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ ಕೇವಲ ಮನುಷ್ಯ ಅಥವಾ ಮಾನವರಾಗದೆ ವಿಶ್ವಮಾನವರಾಗೋಣ ಎಂದು ಕುವೆಂಪು ಸಂದೇಶ ನೀಡಿದ್ದಾರೆ ಇಂತಹ ಮಹನೀಯರನ್ನು ಭಾವಚಿತ್ರಕ್ಕೆ ಅಷ್ಟೆ ಸೀಮಿತಗೊಳಿಸದೆ ಅವರ ವಿಚಾರದಾರೆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ನಡವಳಿಕೆಗಳಲೂ ಬದಲಾವಣೆ ಮಾಡಿಕೊಳ್ಳೋಣ,ಆಧ್ಯಾತ್ಮಿಕವಾಗಿ ಧರ್ಮವನ್ನು ರಾಷ್ಟ್ರ ಕವಿ ಕುವೆಂಪು ಅವರು ಒಪ್ಪಿಕೊಂಡಿದ್ದರು ಆದರೆ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮೂಢನಂಬಿಕೆ ಕಂದಾಚಾರಗಳನ್ನು ಎಂದು ಒಪ್ಪಿಕೊಂಡರವರಲ್ಲ ವಿಚಾರವನ್ನು ಬೇರೆ ಬೇರೆ ಆಯಾಮಗಳ ವೈಜ್ಙಾನಿಕವಾಗಿ ಚಿಂತನೆ ಮಾಡುವ ದೃಷ್ಟಿಕೋನದಲ್ಲಿ ಕುವೆಂಪು ಅವರು ನೋಡುತ್ತಿದ್ದರು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಕೆ.ಎಸ್.ಲೋಕಪ್ಪಗೌಡ, ಗೋವಿಂದೆಗೌಡ, ಅಶೋಕ, ಹಾಲಪ್ಪಗೌಡ್ರು ಬೈರಪುರ, ಹಾಲುಗುಡ್ಡೆ ಯೋಮಕೇಶಗೌಡ್ರು, ಸಿದ್ದಪ್ಪ ತಳಲೆ, ಜನಾರ್ದನ, ಹರೀಶ, ಪ್ರಕಾಶ ಇನ್ನಿತರರು ಸಮಾಜದ ಮುಖಂಡರು ಹಾಜರಿದ್ದರು.