ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆಗೆ ಸಿದ್ದತೆ
ರಿಪ್ಪನ್‌ಪೇಟೆ : ಪಟ್ಟಣದ ಗ್ರಾಪಂ ಅಧ್ಯಕ್ಷೆ ಭ್ರಷ್ಟಾಚಾರ ನಡೆಸಿದ್ದಾರೆನ್ನಲಾದ ವೀಡಿಯೋ ಹಾಗೂ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನುವ ಆಡಿಯೋ ವೈರಲ್ ಆಗುತಿದ್ದು ಈ ಹಿನ್ನಲೆಯಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ರಾಜೀನಾಮೆಗೆ ಒತ್ತಾಯಿಸಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಎನ್ ಸತೀಶ್ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಹಾಗೂ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಣಪತಿ ಗವಟೂರು ಭ್ರಷ್ಟಾಚಾರದಲ್ಲಿ ತೊಡಗಿದ್ದ ವೀಡಿಯೋ ಹಾಗೂ ಅದಕ್ಕೆ ಸಂಬಂಧಿಸಿದ ಅವಾಚ್ಯ ಪದಗಳ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು ಇದರಿಂದ ಸಮಸ್ತ ನಾಗರೀಕರ ಗೌರವಕ್ಕೆ ಧಕ್ಕೆಯುಂಟಾಗಿದೆ ಈ ಬಗ್ಗೆ ಈಗಾಗಲೇ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಸಭಾತ್ಯಾಗ ನಡೆಸಿ ಗ್ರಾಪಂ ಮುಂಭಾಗದಲ್ಲಿ ಪಕ್ಷದ ಮುಖಂಡರೊಂದಿಗೆ ಅಧ್ಯಕ್ಷೆ ಧನಲಕ್ಷ್ಮಿ ರಾಜೀನಾಮೆ ನೀಡುವಂತೆ ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿತ್ತು.ಒಂದು ವಾರದೊಳಗೆ ಅಧ್ಯಕ್ಷೆ ರಾಜೀನಾಮೆ ನೀಡದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿತ್ತು ಎಂದರು.
ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಂಡು ನಮ್ಮ ಪ್ರತಿಭಟನೆಯನ್ನು ರಾಜಕೀಯ ಪ್ರೇರಿತ ಎಂದು ಹೇಳಿಕೆ ನೀಡಿ ಉದ್ಗಟತನ ಮೆರೆಯುತ್ತಿರುವ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ರಾಜೀನಾಮೆಗೆ ಒತ್ತಾಯಿಸಿ ನ ,25 ರ ಸೋಮವಾರ ವಿನಾಯಕ ಸರ್ಕಲ್ ನಿಂದ ಗ್ರಾಪಂ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರಾಪಂ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ , ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್ ,ತಾಲೂಕ್ ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ ನೇತ್ರತ್ವದಲ್ಲಿ ಕೆರೆಹಳ್ಳಿ ಹೋಬಳಿ ಬಿಜೆಪಿ ಘಟಕದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ಆರ್ ಟಿ ಗೋಪಾಲ್ ಮಾತನಾಡಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ನಲ್ಲಿ ಖಾಲಿ ಇದ್ದ ಪಿಡಿಓ ಹುದ್ದೆಗಾಗಿ ಎರಡು ಲಕ್ಷ ರೂ ಡೀಲೀಂಗ್ ನಡೆಸಿ ಮುಂಗಡವಾಗಿ 40 ಸಾವಿರ ರೂ ಹಣ ಪಡೆದುಕೊಂಡಿರುವ ವೀಡಿಯೋ ಪಟ್ಟಣದ ಗ್ರಾಪಂ ಸದಸ್ಯರೊಬ್ಬ ಬಳಿ ಇದ್ದು ಅದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದರು.ಈ ವೇಳೆ ಪತ್ರಕರ್ತರು ವೀಡಿಯೋ ನಿಮ್ಮ ಬಳಿ ಇದೆಯಾ ಎಂದು ಪ್ರಶ್ನಿಸಿದಾಗ ನನ್ನ ಬಳಿ ವೀಡಿಯೋ ಇಲ್ಲ ಆದರೆ ಹದಿಮೂರು ನಿಮಿಷ ವೀಡಿಯೋವನ್ನು ನಾನು ಕಣ್ಣಾರೆ ನೋಡಿರುತ್ತೇನೆ ಹಾಗೇಯೆ ಪಟ್ಟಣದ ಹತ್ತು ಹಲವಾರು ಜನರು ಆ ವೀಡಿಯೋವನ್ನು ನೋಡಿರುತ್ತಾರೆ ಎಂದರು.
ಇಂತಹ ಭ್ರಷ್ಟ ಅಧ್ಯಕ್ಷರೊಬ್ಬರು ಪಟ್ಟಣದ ಗ್ರಾಪಂ ಚುಕ್ಕಾಣಿ ಹಿಡಿದಿರುವುದು ಪಟ್ಟಣಕ್ಕೆ ಕಪ್ಪುಚುಕ್ಕೆಯಾದಂತಾಗಿದೆ.ಈ ಹಿನ್ನಲೆಯಲ್ಲಿ ನ.25 ರ ಸೋಮವಾರದಂದು ಬೃಹತ್ ಪ್ರತಿಭಟನಾ ಮೆರವಣಿಗೆ
ಸುಧೀಂದ್ರ ಪೂಜಾರಿ , ಹಿರಿಯ ಮುಖಂಡರಾದ ಎಂ ಬಿ ಮಂಜುನಾಥ್ ,ಸುರೇಶ್ ಸಿಂಗ್, ತಾಪಂ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್ , ಗ್ರಾಪಂ ಮಾಜಿ ಅಧ್ಯಕ್ಷರಾದ ಮಂಜುಳಾ ಕೆ ರಾವ್ , ಪದ್ಮಾ ಸುರೇಶ್ ಸದಸ್ಯರಾದ ರಮೇಶ್ ಪಿ , ಮಲ್ಲಿಕಾರ್ಜುನ್ , ಸುಂದರೇಶ್ , ದೀಪಾ ಸುಧೀರ್ , ಅಶ್ವಿನಿ ರವಿಶಂಕರ್, ದಾನಮ್ಮ ,ವನಮಾಲ ಹಾಗೂ ಇನ್ನಿತರರಿದ್ದರು.