ಜಿಲ್ಲಾ ಸುದ್ದಿ:
ಹೊಸ ವರ್ಷದ ಹೊಸ್ತಿಲಲ್ಲಿ ಯುವಕರು ಹಾಗೂ ವಾಹನ ಚಾಲಕರಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಕಳಕಳಿ :|accident awareness
ಯುವಕರಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಕಳಕಳಿ : ಹೊಸ ವರ್ಷದ ಸಮಯದಲ್ಲಿ ವಾಹನ ಚಾಲನೆಯಲ್ಲಿ ಆತುರ ಬೇಡ ಯುವಕರೇ….. ನಮ್ಮ ಮಲೆನಾಡಿನಲ್ಲಿ ಕಳೆದ ಹಲವಾರು ದಿನಗಳಿಂದ ರಸ್ತೆ ಅಪಘಾತಗಳಿಂದ ಸಾಕಷ್ಟು ಯುವಕರು ಸಾವನ್ನಪ್ಪುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅದರಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸಿ ಕೆಲವರು ಮೃತಪಟ್ಟರೆ ಇನ್ನು ಕೆಲವರು ಮದ್ಯಪಾನ ಮಾಡಿ ಅಪಘಾತವೆಸಗಿ ತಾವು ಬಲಿಯಾಗುವುದಲ್ಲದೆ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ. ಈಗಿನ ಸಮಯದಲ್ಲಿ ಗಾಂಜಾ ಎಂಬ ಅಮಲು ಪದಾರ್ಥ ಯುವಕರ ಮನಸ್ಥಿತಿ ಹಾಗೂ ಮನೆ ಸ್ಥಿತಿಯನ್ನು…
ಜಗತ್ತಿಗೆ ಶಾಂತಿ,ಸಹಬಾಳ್ವೆ ಪ್ರೀತಿಯ ಸಂದೇಶ ಸಾರಿದ ಶಾಂತಿದೂತ ಯೇಸು ಕ್ರಿಸ್ತರು – ರೆ. ಫಾ ಬಿನೋಯ್|Christmas
ರಿಪ್ಪನ್ ಪೇಟೆ : ಜಗತ್ತಿಗೆ ಶಾಂತಿ, ಸಹಬಾಳ್ವೆ, ಪ್ರೀತಿಯ ಜೀವನ ಸಂದೇಶ ಸಾರಿದ ಶಾಂತಿದೂತ ಏಸುಕ್ರಿಸ್ತರ ಜನ್ಮದಿನದ ಈ ಅಪೂರ್ವ ಹಬ್ಬವೇ ಕ್ರಿಸ್ಮಸ್ ಎಂದು ರಿಪ್ಪನ್ ಪೇಟೆ ಗುಡ್ ಶೆಫರ್ಡ್ ಚರ್ಚಿನ ಧರ್ಮಗುರು ರೆ. ಫಾ. ಬಿನೋಯ್ ಹೇಳಿದರು. ರಿಪ್ಪನ್ ಪೇಟೆ ಪಟ್ಟಣದ ಗುಡ್ ಶೆಫರ್ಡ್ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಪೂಜೆಯಲ್ಲಿ ಭಾಗವಹಿಸಿ ಶುಭ ಸಂದೇಶವನ್ನು ನೀಡಿದ ಅವರು ಏಕತೆ ಮತ್ತು ಸಾಮರಸ್ಯವನ್ನು ಸಾರುವ ಹಬ್ಬವಿದು. ಸಮೃದ್ಧ ಮತ್ತು ಶಾಂತಿಯುತ ಹೊಸ ವರ್ಷಕ್ಕಾಗಿ…
ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ – ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ|wild
ರಿಪ್ಪನ್‌ಪೇಟೆ : ಕಾಡಾನೆಗಳ ದಾಳಿಯಿಂದ ಅನ್ನದಾತರು ಕಂಗೆಟಿದ್ದು,ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಜನತೆ ಬೇಸತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆ, ಅಡ್ಡೇರಿಯಲ್ಲಿ ಕಾಡಾನೆಯ ಉಪಟಳ ಹೆಚ್ಚಾಗಿದ್ದು, ಕೋಯ್ಲು ಮಾಡಿ ಹಾಕಿದ್ದ ಭತ್ತ, ಹುಲ್ಲು ಹಾಗೂ ಕೊಳವೆ ಬಾವಿಗೆ ಅಳವಡಿಸಿದ್ದ ಪೈಪ್ ಲೈನ್ ದ್ವಂಸಗೊಳಿಸಿದೆ. ಹೊರಬೈಲು, ಮತ್ತಿಕೊಪ್ಪಪ, ಗಾಮನಗದ್ದೆಯಲ್ಲಿ ಕಳೆದ ಅನೇಕ ದಿನಗಳಿಂದ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಶುಂಠಿ ಏರಿ ಮೇಲೆ ನಿರಂತರವಾಗಿ ಓಡಾಡುವುದರಿಂದ ಶುಂಠಿ ಏರಿ ಒಡೆದು ಬೆಳೆ…
ಶಾಸಕ ಹಾಲಪ್ಪನವರಿಗೆ ಚುನಾವಣೆ ಸಮೀಪಿಸುವಾಗ ಶರಾವತಿ ಸಂತ್ರಸ್ಥರು ನೆನಪಾಗುತ್ತಾರೆ – ಕಾಂಗ್ರೆಸ್ ಆರೋಪ|congress
ರಿಪ್ಪನ್‌ಪೇಟೆ : ಮಾಜಿ ಸಚಿವ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರ ಅಧಿಕಾರಾವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಕ್ರಮ ಜಮೀನು ಸಾಗುವಳಿದಾರ ರೈತ ಕುಟುಂಬಕ್ಕೆ ಸಾಗುವಳಿ ಪತ್ರವನ್ನು ಕೊಡಿಸಿದ್ದರೂ ಅಲ್ಲದೆ ಇನ್ನೂ ಹಲವು ರೈತರ ಹಕ್ಕು ಪತ್ರವನ್ನು ತಹಶೀಲ್ದಾರ್ ಕಛೇರಿಯಲ್ಲಿ ಸಿದ್ದಗೊಂಡಿದ್ದರೂ ಕೂಡಾ ಕಳೆದ ನಾಲ್ಕುವರೆ ವರ್ಷದಿಂದ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಕ್ಕು ಪತ್ರ ಕೊಡದೇ ಸಿದ್ದಗೊಂಡ ಸಾಗುವಳಿ ಪತ್ರವನ್ನು ವಜಾಗೊಳಿಸಿ ಈಗ ಚುನಾವಣೆಗೆ ಮೂರು ನಾಲ್ಕು ತಿಂಗಳುಗಳಿರುವಾಗ ಮೊಸಳೆ ಕಣ್ಣಿರು ಹಾಕುವ ಮೂಲಕ ಶರಾವತಿ…
ಅಂಗನವಾಡಿ ಮಗುವಿಗೆ ಬೈಕ್ ಡಿಕ್ಕಿ – ಅಂಗನವಾಡಿಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ|accident-protes
ಅಂಗನವಾಡಿ ಮಗುವಿಗೆ ಬೈಕ್ ಡಿಕ್ಕಿಯಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಮತ್ತು ಪೋಷಕರು ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಲಕ್ಕವಳ್ಳಿ ಅಂಗನವಾಡಿ ಕೇಂದ್ರದ ಮಗು ಅಂಗನವಾಡಿಯಿಂದ ರಸ್ತೆ ದಾಟುವಾಗ ಅಪಘಾತವಾಗಿ ಗಾಯಗೊಂಡ ಘಟನೆಯನ್ನು ಪ್ರತಿಭಟಿಸಿ ಸ್ಥಳೀಯ ಆಡಳಿತ ಹಾಗೂ ಗ್ರಾಮಸ್ಥರು ಅಂಗನವಾಡಿಗೆ ಶುಕ್ರವಾರ ಬೀಗ ಹಾಗಿ ಪ್ರತಿಭಟನೆ ನಡೆಸಿದ್ದಾರೆ. ಗುರುವಾರ ಮಗು ಅಂಗನವಾಡಿಯಿಂದ ಮನೆಗೆ ತೆರುಳುವಾಗ ಬೈಕ್ ಡಿಕ್ಕಿಯಾಗಿ ಮಗು ಮುಖ, ತಲೆಗೆ ಪೆಟ್ಟು ಬಿದ್ದಿದೆ. ಸಂಜೆ ಆದ ಕಾರಣ…
ಬಹುಮುಖ ಪ್ರತಿಭೆಯ ಶಿಕ್ಷಕಿ ಕಲಾ ಹೆಗಡೆಗೆ ಚಿನ್ಮಯ ಜ್ಞಾನಿ ಪ್ರಶಸ್ತಿ|Award
ಆನಂದಪುರ : ಸಾಗರ ತಾಲೂಕಿನ ಆನಂದಪುರದ ಸಾಧನಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಲಾ ಹೆಗಡೆಗೆ ರಾಜ್ಯ ಮಟ್ಟದ ಚಿನ್ಮಯ ಜ್ಞಾನಿ ಪ್ರಶಸ್ತಿ ದೊರೆತಿದೆ. ಮೈಸೂರಿನ ಶರಣು ವಿಶ್ವವಚನ ಪೌಂಡೇಶನ್ ವತಿಯಿಂದ ಭಾನುವಾರ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯದಲ್ಲಿ ವಿಶಿಷ್ಟ ಸಾಧನೆ ಮಾಡಿದ ಆಯ್ದ ಶಿಕ್ಷಕರಿಗೆ ಚಿನ್ಮಯ ಜ್ಞಾನಿ ಪ್ರಶಸ್ತಿ ಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಬಾನುವಾರ ಮೈಸೂರಿನ ನಟರಾಜ ಸಭಾಭವನದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಶಿಕ್ಷಕಿ ಕಲಾ ಹೆಗಡೆ ಇವರು ಬಹುಮುಖ ಪ್ರತಿಭಾ…
ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ನೇತ್ರತ್ವದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ : ಜೆಡಿಎಸ್ ಮುಖಂಡರ ಅಭಿಮತ|Jds
ಹೊಸನಗರ : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ರಾಜ್ಯ ಜೆಡಿಎಸ್ ಪಕ್ಷದ ಚುಕ್ಕಾಣಿ ಹಿಡಿದಿರುವ ಸಿಎಂ ಇಬ್ರಾಹಿಂ ರವರ ನೇತೃತ್ವದಲ್ಲಿ ಈ ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಜೆಡಿಎಸ್ ಪಕ್ಷಕ್ಕೆ ದೊರಕಲಿದೆ ಎಂದು ಜಿಲ್ಲಾ ಜೆಡಿಎಸ್ ಮುಖಂಡ ರಾಮಕೃಷ್ಣ ಹೇಳಿದರು. ಅವರು ಇಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ ಪ್ರಮುಖರ ಸಭೆಯಲ್ಲಿ ಮಾತನಾಡಿ ಜಿಲ್ಲೆಯವರೇ ಆದಂತಹ ರಾಜ್ಯದ ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ರವರು ಜನವರಿ 7ರಂದು ಜಿಲ್ಲೆಗೆ ಆಗಮಿಸಲಿದ್ದು ಪಕ್ಷದ ಪುನರ್…
ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಮಾತನಾಡುವ ನೈತಿಕತೆ ಬೇಳೂರು ಗೋಪಾಲಕೃಷ್ಣ ರಿಗೆ ಇಲ್ಲಾ – ಬಿಜೆಪಿ|Ripponpet
ರಿಪ್ಪನ್‌ಪೇಟೆ : ಎರಡು ಬಾರಿ ಶಾಸಕರಾಗಿದ್ದಾಗ ಶರಾವತಿ ಮುಳಗಡೆ ಸಂತ್ರಸ್ಥರ ಬಗ್ಗೆ ತುಟಿ ಬಿಚ್ಚದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಈಗ ಮುಳುಗಡೆ ಸಂತ್ರಸ್ಥರು ಧರ್ಮಸ್ಥಳಕ್ಕೆ ಹೋಗಿರುವುದನ್ನು ಟೀಕಿಸುವುದಕ್ಕೆ ಯಾವುದೇ ನೈತಿಕತೆ ಇಲ್ಲಾ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ. ಮಂಜುನಾಥ ಆರೋಪಿಸಿದರು. ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶರಾವತಿ ಸಂತ್ರಸ್ಥ ಮುಖಂಡರ ಜೊತೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸಂತ್ರಸ್ಥರ ಹಕ್ಕಿಗಾಗಿ ಈಗಾಗಲೇ ಲೋಕಸಭೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರರವರು ಕೇಂದ್ರ ಸರಕಾರದ ಗಮನಸೆಳೆದಿದ್ದಾರೆ. ಶಾಸಕರಾದ ಹರತಾಳು ಹಾಲಪ್ಪ…
ರಿಪ್ಪನ್‌ಪೇಟೆ ಸಮೀಪದ ಗಾಳಿಬೈಲು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ – ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳಿಂದ ಬೋನ್ ಫಿಕ್ಸ್|leopard
ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಬೈಲು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಪ್ರತಿಕ್ಷವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದರು. ಚಿರತೆ ಪ್ರತ್ಯಕ್ಷ ಸುದ್ದಿ ತಿಳಿದ ಅರಸಾಳು ವಲಯ ಅರಣ್ಯ ಅಧಿಕಾರಿಗಳು ಇಂದು ಸ್ಥಳ ಪರಿಶೀಲನೆ ನಡೆಸಿ ಚಿರತೆ ಹಿಡಿಯಲು ಗಾಳಿಬೈಲಿನಲ್ಲಿ ಬೋನ್ ಫಿಕ್ಸ್ ಮಾಡಿದ್ದಾರೆ. ರಿಪ್ಪನ್ ಪೇಟೆ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ : ಕಳೆದ ನಾಲ್ಕು ದಿನಗಳ ಹಿಂದೆ ರಿಪ್ಪನ್ ಪೇಟೆ- ತೀರ್ಥಹಳ್ಳಿ ರಾಜಹೆದ್ದಾರಿ ಸಮೀಪದ ಮಳವಳ್ಳಿ…
ಹೃದಯಘಾತದಿಂದ 28ರ ಹರೆಯದ ಗೃಹಿಣಿ ಅಪಮೃತ್ಯು|heart attack
ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಮರಣ ಹೊಂದಿದ ನಂತರದಲ್ಲಿ ರಾಜ್ಯದಲ್ಲಿ ಅತಿ ಕಿರಿ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೆಲ್ಲುಂಡೆಯ ಗ್ರಾಮದ ಗೃಹಿಣಿ ಸುಪ್ರೀತಾ(28) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ನೆಲ್ಲುಂಡೆಯ ರವೀಂದ್ರ ಮತ್ತು ಸುಧಾ ದಂಪತಿಗಳ ಪುತ್ರಿ 28ರ ಹರೆಯದ ಸುಪ್ರೀತಾ ಅಲ್ಪ ಕಾಲದ ಅನಾರೋಗ್ಯದಲ್ಲಿದ್ದು ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಸುಪ್ರೀತಾರವರು ಕಳೆದ ನಾಲ್ಕು ವರ್ಷದ ಹಿಂದೆ ಕೊಡೂರಿನ ಆದರ್ಶ ಎಂಬವರೊಂದಿಗೆ ವಿವಾಹವಾಗಿದ್ದರು. ಪಟ್ಟಣದ ಶಾರದಾ…