ಡಿ.ಕೆ. ಸುರೇಶ್ ವಿರುದ್ಧ ಸಾಗರ ಬಿಜೆಪಿ ಕಾರ್ಯಕರ್ತರ ಆಕ್ರೋಶದ ಪ್ರತಿಭಟನೆ…! ಡಿ.ಕೆ. ಸುರೇಶ್ ಪ್ರತಿಕೃತಿ ದಹನ…!

ಸಾಗರ: ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಎಂಎಲ್ಸಿ ರವಿ ಅವರು ಸಚಿವ ಅಶ್ವಥ್ ನಾರಾಯಣ್ ಅವರ ಭಾಷಣಕ್ಕೆ ಅಡ್ಡಿ ಪಡಿಸಿ, ಗೂಂಡಾ ವರ್ತನೆ ತೋರಿದ್ದಾರೆಂದು ಆರೋಪಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಮಂಗಳವಾರ ನಗರ ಸಾಗರ್ ಹೋಟೆಲ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ  ಡಿ.ಕೆ.ಸುರೇಶ್ ಅವರ ಭಾವಚಿತ್ರವನ್ನು ಧಹಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಡಿ.ಕೆ.ಸುರೇಶ್ ಹಾಗೂ ಎಂಎಲ್ಸಿ ರವಿ ಇಬ್ಬರಿಗೂ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಜರುಗಿಸಬೇಕು.ಹಾಗೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಡಿ ಮೇಘರಾಜ ಮಾತನಾಡಿ ಉನ್ನತ ಶಿಕ್ಷಣ ಸಚಿವ ಆಶ್ವಥ್ ನಾರಾಯಣ್ ಅವರನ್ನು ಡಿ.ಕೆ.ಸುರೇಶ್ ಅವಹೇಳನ ಮಾಡಿದ್ದಾರೆ. ಎಂಎಲ್ಸಿ ರವಿ ಮೈಕ್ ಕಿತ್ತು ಅಸಭ್ಯವಾಗಿ ವರ್ತಿಸಿದ್ದಾರೆ.ಎಂದು ಆರೋಪಿಸಿ ಡಿ.ಕೆ.ಸುರೇಶ್ ಮತ್ತು ಅವರ ಬೆಂಬಲಿಗರು ರೌಡಿ ಗ್ಯಾಂಗ್‌ ನಂತೆ ವರ್ತಿಸುತ್ತಿದ್ದಾರೆ.
ಇದೆ ರೀತಿ ನಿಮ್ಮ ಆಟಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

 ಸಾಗರ ನಗರ ಬಿಜೆಪಿ ಅಧ್ಯಕ್ಷ ಕೆ. ಆರ್ ಗಣೇಶ್ ಪ್ರಸಾದ್ ಮಾತನಾಡಿ. ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿಲ್ಲ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಮುಖ್ಯಮಂತ್ರಿಗಳು, ಸರ್ಕಾರ ಪಣತೊಟ್ಟಿದೆ. ರಾಜ್ಯ ಹಾಗೂ ಕೇಂದ್ರದ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಈ ರೀತಿ ಗೂಂಡಾಗಿರಿ ಮಾಡಿದ್ದಾರೆ ಇದನ್ನು ಯುವ ಮೋರ್ಚಾ ಖಂಡಿಸುತ್ತದೆ ಎಂದರು.  ನಗರಸಭೆ ಅಧ್ಯಕ್ಷೆ ಮಧುರ ಶಿವಾನಂದ್. ಚೇತನ್ ಕಣ್ಣೂರು. ಪ್ರಸನ್ನ ಕೆರೇಕೈ ಮೊದಲಾದವರು ಮಾತನಾಡಿ ಗೂಂಡಾ ವರ್ತನೆ ತೋರಿ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಿಗೆ ಬೆದರಿಕೆ ಹಾಕಿ, ಸರ್ಕಾರಿ ಸಮಾರಂಭಕ್ಕೆ ಅಡ್ಡಿ ಪಡಿಸಿರುವ ಸಂಸದ ಡಿ.ಕೆ.ಸುರೇಶ್ ಮತ್ತು ಅವರ ಬೆಂಬಲಿಗರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಡಿ.ಕೆ.ಸುರೇಶ್ ಮತ್ತು ಎಂಎಲ್ಸಿ ರವಿ ಇಬ್ಬರ ವಿರುದ್ಧವೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಮುಂದೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸದೆ ಬಹಿಷ್ಕರಿಸಬೇಕು. ಮುಂದೆ ಇದೇ ರೀತಿ ವರ್ತನೆ ಮುಂದುವರಿದಲ್ಲಿ ರಾಜ್ಯವಾಪ್ತಿ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾದಿತು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಉಪಾಧ್ಯಕ್ಷ ವಿ.ಮಹೇಶ್.ಅರುಣ್ ಕುಗ್ವೆ.  ಸಂತೋಷ ಶೇಟ್. ವಿನೋದ್ ರಾಜ್ ಶ್ರೀರಾಮ ಪುರುಷೋತ್ತಮ್ ಎಸ್.ಎಂ. ಭಾಷಾ ಸಾಬ್. ಅಷ್ಪಾಕ್.ಲಿಂಗರಾಜು.ಸವಿತಾ ವಾಸುದೇವ್. ಮೈತ್ರಿ ಪಾಟೀಲ್. ತುಕಾರಾಂ.  ಬಿ. ಟಿ ರವಿ. ವಿನೋದ್ ರಾಜ್. ಅರವಿಂದ್ ರಾಯ್ಕರ್. ಸಂತೋಷ್ ಕುಮಾರ್.ಪ್ರಶಾಂತ್.ಬಿಜೆಪಿ ಸಾಮಾಜಿಕ ಜಾಲತಾಣದ ರಾಧಿಕಾ ರಾಮದಾಸ್ ಪೈ.ಹಾಗೂ ಬಿಜೆಪಿ ವಿವಿಧ ಘಟಕದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಮಾಹಿತಿ ಕೃಪೆ : @ಮಲೆನಾಡ ರಹಸ್ಯ..

Leave a Reply

Your email address will not be published. Required fields are marked *