w
Headlines
Home » ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ : ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ : ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಸಾಗರ : ಇಲ್ಲಿನ ಅರಣ್ಯ ವಲಯ ವ್ಯಾಪ್ತಿಯ ಮಂಕೋಡು ಗ್ರಾಮ ಜೆ.ಪಿ ನಗರದಲ್ಲಿ ಅಕ್ರಮವಾಗಿ ಶ್ರೀಗಂಧದ ಚಕ್ಕೆಗಳನ್ನು ಕೆತ್ತುತ್ತಿದ್ದ ಇಬ್ಬರು ಆರೋಪಿಗಳನ್ನು ಸಾಗರ ಅರಣ್ಯ ಇಲಾಖೆ ಸಿಬ್ಬಂದಿಗಳು ಸೋಮವಾರ ಬಂಧಿಸಿದ್ದಾರೆ.  

ಆರೋಪಿಗಳಾದ ಅಬ್ದುಲ್ ರಜಾಕ್ ಮತ್ತು ವೆಂಕಟರಮಣ ಇವರನ್ನು ಬಂಧಿಸಿ ಅವರಿಂದ  ಐದೂ ಕಾಲು ಕೆಜಿ ಶ್ರೀಗಂಧದ ಚಕ್ಕೆ, ಒಂದು ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ದಾಖಲು ಮಾಡಿದ್ದಾರೆ.

ವಲಯ ಅರಣ್ಯಾಧಿಕಾರಿ ಡಿ ಆರ್ ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಅಶೋಕ್, ಅರಣ್ಯ ರಕ್ಷಕರಾದ ಅಶೋಕ್, ಸುಮಿತಾ  ಹಾಗೂ ವಾಹನ ಚಾಲಕ ಲೋಕೇಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.