ರಿಪ್ಪನ್ ಪೇಟೆ : ಪಟ್ಟಣದ ವಿನಾಯಕ ವೃತ್ತದ ಜೋಹರ ಪ್ಲಾಜಾದಲ್ಲಿ ನೂತನವಾಗಿ ಶ್ರೀ ನಂದಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ಆರಂಭವಾಗಿದೆ.
ರಿಪ್ಪನ್ ಪೇಟೆಯ ಸುತ್ತಮುತ್ತಲಿನ ಜನತೆಗೆ ಅಗತ್ಯವಾಗಿ ಬೇಕಾಗಿದ್ದ ಸುಸಜ್ಜಿತ ಆಧುನಿಕ ಡೆಂಟಲ್ ಕ್ಲಿನಿಕ್ ಪ್ರಾರಂಭವಾಗಿದ್ದು ಜನತೆಯಲ್ಲಿ ಸಂತಸ ತಂದಿದೆ.
ಟೇಪ್ ಕತ್ತರಿಸುವ ಮೂಲಕ ಕ್ಲಿನಿಕ್ ನ್ನು ಉಧ್ಘಾಟಿಸಿದ ಜೋಹರ ಪ್ಲಾಜಾ ಮಾಲೀಕರು ಹಾಗೂ ಉದ್ಯಮಿಗಳಾದ ಎ ಕೆ ಮಹಮ್ಮದ್ ಸಾಬ್ ಮಾತನಾಡಿ ಹಲ್ಲುಗಳ ಆರೋಗ್ಯ ಕಾಪಾಡಿಕೊಂಡಾಗ ವ್ಯಕ್ತಿಗಳ ಸೌಂದರ್ಯವೂ ವೃದ್ಧಿಸುತ್ತದೆ. ನಮ್ಮಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಜೊತೆಗೆ ಆಹಾರ ಪದ್ದತಿಯಲ್ಲಿ ಉಂಟಾಗಿರುವ ಬದಲಾವಣೆಯಿಂದ ಇತರ ಆರೋಗ್ಯದ ಸಮಸ್ಯೆಯ ಜೊತೆಗೆ ಹಲ್ಲುಗಳ ಆರೋಗ್ಯದ ನಮಸ್ಯೆಗಳು ಹೆಚ್ಚಾಗಿವೆ.ದಂತ ಚಿಕಿತ್ಸಾಲಯಗಳು ಜನರಿಗೆ ಉತ್ತಮ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಆರೋಗ್ಯದ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಂದಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ಕಾರ್ಯನಿರ್ವಹಿಸಲಿ ಎಂದು ಹೇಳಿದರು.
ನಂತರ ಮಾತನಾಡಿದ ನಂದಿ ಡೆಂಟಲ್ ಕ್ಲಿನಿಕ್ ನ ಮುಖ್ಯಸ್ಥರಾದ ಡಾ.ಸ್ವರೂಪ್ ಶೆಟ್ಟಿ ಮಾತನಾಡಿ ನಮ್ಮಲ್ಲಿ ರೂಟ್ ಕೆನಾಲ್ ಟ್ರೀಟ್ ಮೆಂಟ್,ಕೃತಕ ದಂತ ಜೋಡಣೆ,ಮಕ್ಕಳ ದಂತ ಚಿಕಿತ್ಸೆ, ವಕ್ರ ದಂತ ಚಿಕಿತ್ಸೆ, ಡೆಂಟಲ್ ಇಂಪ್ಲಾಂಟ್ ,ಹಲ್ಲು ಸ್ವಚ್ಚಗೊಳಿಸಲಾಗುವುದ ಹಾಗೂ ಆಧುನಿಕ ದಂತ ಚಿಕಿತ್ಸೆ ಮತ್ತು ಎಕ್ಸ್ ರೇ ತಂತ್ರಜ್ಞಾನ ಅಳವಡಿಸಲಾಗಿದೆ ರಿಪ್ಪನ್ ಪೇಟೆ ಸುತ್ತಮುತ್ತಲಿನ ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಶಿವಮೊಗ್ಗ ಶರಾವತಿ ಡೆಂಟಲ್ ಕಾಲೇಜಿನ ಡಾ.ಶ್ರೀನಿಧಿ ಹಾಗೂ ಡಾ.ಸುಜಿತ್ ಹಾಗೂ ನಂದಿ ಡೆಂಟಲ್ ಕ್ಲಿನಿಕ್ ನ ಶಿಲ್ಪಾ ಶೆಟ್ಟಿ ಮತ್ತು ರಿಪ್ಪನ್ ಪೇಟೆ ಉದ್ಯಮಿಗಳಾದ ಸಂತೋಷ್ ,ನ್ಯಾಷನಲ್ ಇಬ್ರಾಹಿಂ , ಸಿವಿಲ್ ಇಂಜಿನಿಯರ್ ರಾಘವೇಂದ್ರ,ಯುವ ಉದ್ಯಮಿ ರಹೀಂ ಚಾಲಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.