ರಿಪ್ಪನ್ ಪೇಟೆ : ಭೂ ಪರಿಪರ್ವತನೆಗಾಗಿ ಒತ್ತಾಯಿಸಿ ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಸದಸ್ಯ ನಿರೂಪ್ ಕುಮಾರ್ ಆರ್.ವಿ. ಶಿವಮೊಗ್ಗದ ಕೆಎಸ್ ಆರ್ ಟಿ ಸಿ ಬಸ್ ಡಿಪೋ ಹಿಂಭಾಗದ ಆನಂದರಾವ್ ಬಡಾವಣೆಯಲ್ಲಿರುವ ನಗರ ಮತ್ತು ಗ್ರಾಮಾಂತರ ಯೋಜನೆ ಕಚೇರಿಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದಾರೆ.
ಹೊಸನಗರ ತಾ. ಬೆನವಳ್ಳಿ ಸರ್ವೆ ನಂಬರ್158 2 ಎಕರೆ ಜಮೀನಿಗೆ ಸೈಟ್ ನಿರ್ಮಿಸಲು ಭೂಪರಿವರ್ತನೆಗೆ ನಿರೂಪ್ ಕುಮಾರ್ ಅಕ್ಟೋಬರ್ ತಿಂಗಳಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭೂ ಪರಿವರ್ತನೆಯನ್ನು ನಗರ ಮತ್ತು ಗ್ರಾಮಾಂತರ ಯೋಜನೆಯ ಅಧಿಕಾರಿಗಳು 30 ದಿನಗಳಲ್ಲಿ ಇದರ ಸಾಧಕ ಭಾದಕದ ಬಗ್ಗೆ ಸಾರ್ವಜನಿಕರಿಗೆ ನೀಡಬೇಕು.
ಆದರೆ ಎರಡು ತಿಂಗಳಾದರೂ ಭೂ ಪರಿವರ್ತನೆ ಬಗ್ಗೆ ಕೇಳಿದರೆ ನಿಮ್ಮ ಜಮೀನು ರಾಜ್ಯ ಹೆದ್ದಾರಿಗೆ ಸಂಪರ್ಕಿಸುವುದಿಲ್ಲವೆಂದು ಸುಳ್ಳು ಹೇಳಿ ಅರ್ಜಿಯನ್ನ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿ ನಿರೂಪ್ ಇಂದು ನಗರದ ಕಚೇರಿಯಲ್ಲಿ ಧರಣಿಕುಳಿತಿದ್ದಾರೆ.
ಆನ್ ಲೈನ್ ನಲ್ಲಿ ಸಲ್ಲಿಸಲಾದ ಬಹುತೇಕ ಅರ್ಜಿಗಳನ್ನ ಇಲ್ಲಿನ ಅಧಿಕಾರಿಗಳು ತಿರಸ್ಕರಿಸುತ್ತಾರೆ. 30 ದಿನಗಳಲ್ಲಿ ಭೂಪರಿವರ್ತನೆ ಏನಾಗಿದೆ ಎಂಬುದು ಆರ್ಡರ್‌ಆಗಬೇಕು ಆದರೆ ಅರ್ಜಿಗಳು ಹಾಗೆಯೇ ಅಧಿಕಾರಿಗಳ ಕಂಪ್ಯೂಟರ್ ಗಳಲ್ಲಿ ಲಾಕ್ ಆಗ್ತಾವೆ. ಸ್ಥಳಕ್ಕೆ ಆಗಮಿಸಿ ವೀಕ್ಷಿಸಿ ಹೋಗುವ ಫೀಲ್ಡ್ ಆಪೀಸರ್ಸ್ ರಾಜ್ಯ ಹೆದ್ದಾರಿಯಾದ ಹೊಸನಗರ ಮತ್ತು ಶಿವಮೊಗ್ಗದ ರಸ್ತೆಯ ಬಳಿಯಲ್ಲಿಯೇ ನನ್ನ ಜಮೀನಿದೆ ಆದರೆ ಆಧಿಕಾರಿಗಳು ಜಮೀನಿಗೆ ಹೋಗಲು ದಾರಿ ಇಲ್ಲವೆಂದು ತೀರ ಬಾಲಿಶಃ ಉತ್ತರ ನೀಡುತ್ತಾರೆ. ಒಂದು ವೇಳೆ ನನ್ನ ಅರ್ಜಿಯನ್ನ ಪುರಸ್ಕರಿಸದೆ ಇದ್ದರೆ ನಾನು ಇಲ್ಲಿಂದ ಕದಲುವುದಿಲ್ಲವೆಂದು ನಿರೂಪ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.