ಶಿವಮೊಗ್ಗದ ತುಂಗನದಿಯಲ್ಲಿ ಅರ್ಧಂಬರ್ಧ ಸುಟ್ಟ ಶವವೊಂದು ದೊರೆತಿದೆ. ಇಷ್ಟುದಿನ ಗಂಗಾನದಿಯಲ್ಲಿ ಇಂತಹ ಅರ್ದಂಬರ್ಧ ಸುಟ್ಟ ಹೆಣ ದೊರೆಯುವ ದೃಶ್ಯಾವಳಿಗಳು ಕಂಡುಬರುತ್ತಿದ್ದವು ಆದರೆ ತುಂಗ ನದಿಯಲ್ಲಿ ಈ ಶವ ದೊರೆತಿರುವುದು ಚರ್ಚೆಗೆ ಗ್ರಾಸವಾಗಿದೆ.
ಇಂದು ಸಂಜೆ 6 ಗಂಟೆಯ ವೇಳೆಗೆ ರೋಟರಿ ಚಿತಾಗಾರದಿಂದ ತುಂಗಾನದಿಗೆ ಹೋಗುವ ಜಾಗದಲ್ಲಿ ಈ ಶವ ಪತ್ತೆಯಾಗಿದೆ. ಈ ಶವ ಸೊಂಟದ ಕೆಳಭಾಗ ಪೂರ್ತಿ ಸುಟ್ಟು ಹೋಗಿದೆ. ಆದರೆ ಇದು ಗಂಡೋ ಹೆಣ್ಣೋ ಎಂಬುದು ಮರಣೋತ್ತರ ಪರೀಕ್ಷೆಯ ನಂತರ ತಿಳಿದು ಬರಬೇಕಿದೆ. ಜೊತೆಗೆ ಯಾವ ಕಾರಣಕ್ಕೆ ಈ ಶವ ಅರ್ಧಂಬರ್ಧ ಸುಡಲಾಗಿದೆ ಎಂಬುದು ತಿಳಿದು ಬರುತ್ತಿದೆ.
ಈ ಶವ ರೋಟರಿ ಚಿತಾಗಾರರ ಸಿಬ್ಬಂದಿಗಳ ಮೇಲೆ ಹೆಚ್ಚಿನ ಅನುಮಾನ ಹುಟ್ಟಿಸಿದೆ. ಆದರೆ ಇಲ್ಲಿನ ಸಿಬ್ಬಂದಿಗಳು ಈ ಅರೊಪವನ್ನ ತಳ್ಳಿಹಾಕಿದ್ದಾರೆ. ಈ ರೀತಿ ನಾವು ಸುಡುವುದಿಲ್ಲವೆಂದು ಹೇಳುತ್ತಾರೆ. ಗ್ಯಾಸ್ ಬರ್ನಿಂಗ್ ನ್ನ ಇಂದು ಆರಂಬಿಸಿಯೇ ಇಲ್ಲವೆನ್ನುತ್ತಾರೆ ಸಿಬ್ಬಂದಿಗಳು. ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿದ್ದಾರೆ. ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಯಾರಾದರೂ ಕೊಲೆ ಮಾಡಿ ಹೀಗೆ ಅರ್ಧಂಬರ್ಧ ಸುಟ್ಟು ಹೋಗಿದ್ದಾರಾ ಎಂಬ ಬಗ್ಗೆನೂ ತನಿಖೆ ನಡೆಯಬೇಕಿದೆ. ಆದರೆ ಬಹುತೇಕ ಅನುಮಾನ ಹುಟ್ಟುತ್ತಿರುವುದು ಚಿತಾಗಾರದ ಮೇಲೆನೇ. ಅದು ಸಹ ಈ ಚಿತಾಗಾರದಲ್ಲಿ ಗ್ಯಾಸ್ ಬರ್ನಿಂಗ್ ನಲ್ಲಿ ಅರ್ಧಂಬರ್ಧ ಸುಟ್ಟು ನದಿಗೆ ಹಾಕಿರಬಹುದೆಂದು ಶಂಕಿಸಲಾಗಿದೆ.
ಕಾರಣ ಇಷ್ಟೇ ಗ್ಯಾಸ್ ಬರ್ನಿಂಗ್ ನಲ್ಲಿ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಎರಡು ಬರ್ನರ್ ಗಳಿವೆ. ಏಕಕಾಲದಲ್ಲಿ ಬರ್ನರ್ ಆನ್ ಮಾಡಿದರೆ ಶವ ಪೂರ್ತಿ ಸುಟ್ಟುಹೋಗಲಿದೆ. ಆದರೆ ಕೆಳಭಾಗದ ಶವದ ಬರ್ನಿಂಗ್ ಆನ್ ಮಾಡಿ ಮೇಲಿನ ಬರ್ನಿಂಗ್ ಆನ್ ಮಾಡದಿದ್ದರೆ ಈ ರೀತಿ ಶವ ಅರ್ಧಂಬರ್ಧ ಸುಟ್ಟುಹೋಗುವ ಸಂಭವನೀಯತೆ ಹೆಚ್ಚು.
ಈ ಹಿನ್ನಲೆಯಲ್ಲಿ ನಾಳೆ ಈ ಶವಗಾರದ ಸಿಬ್ಬಂದಿಗಳನ್ನ ಕೋಟೆ ಠಾಣೆಗೆ ಕರೆಯಲಾಗಿದೆ.ಅರ್ಧಂಬರ್ಧ ಪತ್ತೆಯಾದ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ