Headlines

ಮಾಜಿ ಸಚಿವ ಹರತಾಳು ಹಾಲಪ್ಪ ರವರಿಗೆ ಮಾತೃ ವಿಯೋಗ

ಮಾಜಿ ಸಚಿವ ಹರತಾಳು ಹಾಲಪ್ಪ ರವರಿಗೆ ಮಾತೃ ವಿಯೋಗ ಮಾಜಿ ಸಚಿವ ಹರತಾಳು ಹಾಲಪ್ಪ  ತಾಯಿ ಮಂಜಮ್ಮ (94) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ವಯೋಸಹಜವಾಗಿ ಇಹಲೋಕ ತ್ಯಜಿಸಿದ್ದಾರೆ. ಮಂಜಮ್ಮನವರಿಗೆ 12 ಮಕ್ಕಳಿದ್ಫ಼ು , 9 ಗಂಡು ಮಕ್ಕಳು ಮತ್ತು 3 ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ನಾಳೆ ಸ್ವಗ್ರಾಮ ಹೊಳೆಕೊಪ್ಪದಲ್ಲಿ ನೆರವೇರಲಿದೆ ಎಂದು ಆಪ್ತ ವಲಯದಿಂದ ತಿಳಿದುಬಂದಿದೆ. ಮಂಜಮ್ಮನವರ ಬದುಕು ಸರಳತೆ, ಮೌಲ್ಯಗಳು ಮತ್ತು ಕುಟುಂಬದ ಒಗ್ಗಟ್ಟಿನಿಂದ ಕೂಡಿದ್ದು, ಮಕ್ಕಳಿಗೆ ಸದಾ ಪ್ರೇರಣೆಯಾಗಿತ್ತು. ಹರತಾಳು…

Read More

ಶಿವಮೊಗ್ಗದ ನಗರ ಮತ್ತು ಗ್ರಾಮಾಂತರ ಯೋಜನೆ ಕಚೇರಿಯಲ್ಲಿ ಭೂಪರಿವರ್ತನೆಗೆ ಉದ್ದೇಶ ಪೂರಕ ವಿಳಂಭ : ರಿಪ್ಪನ್ ಪೇಟೆ ಗ್ರಾಪಂ ಸದಸ್ಯನಿಂದ ಏಕಾಂಗಿ ಧರಣಿ

ರಿಪ್ಪನ್ ಪೇಟೆ : ಭೂ ಪರಿಪರ್ವತನೆಗಾಗಿ ಒತ್ತಾಯಿಸಿ ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಸದಸ್ಯ ನಿರೂಪ್ ಕುಮಾರ್ ಆರ್.ವಿ. ಶಿವಮೊಗ್ಗದ ಕೆಎಸ್ ಆರ್ ಟಿ ಸಿ ಬಸ್ ಡಿಪೋ ಹಿಂಭಾಗದ ಆನಂದರಾವ್ ಬಡಾವಣೆಯಲ್ಲಿರುವ ನಗರ ಮತ್ತು ಗ್ರಾಮಾಂತರ ಯೋಜನೆ ಕಚೇರಿಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದಾರೆ. ಹೊಸನಗರ ತಾ. ಬೆನವಳ್ಳಿ ಸರ್ವೆ ನಂಬರ್158 2 ಎಕರೆ ಜಮೀನಿಗೆ ಸೈಟ್ ನಿರ್ಮಿಸಲು ಭೂಪರಿವರ್ತನೆಗೆ ನಿರೂಪ್ ಕುಮಾರ್ ಅಕ್ಟೋಬರ್ ತಿಂಗಳಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭೂ ಪರಿವರ್ತನೆಯನ್ನು…

Read More

ಎಟಿಎಂನಲ್ಲಿ ರೈತನಿಗೆ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯಿಂದ ವಂಚನೆ

ಎಟಿಎಂನಲ್ಲಿ ರೈತನಿಗೆ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯಿಂದ ವಂಚನೆ ಆಯನೂರು : ಎಟಿಎಂ ಕೇಂದ್ರದಲ್ಲಿ ಹಣ ಬಿಡಿಸಲು ನೆರವು ನೀಡುವಂತೆ ನಟಿಸಿ, ATM ಕಾರ್ಡ್‌ ಬದಲಿಸಿ ರೈತರೊಬ್ಬರಿಗೆ ವಂಚಿಸಲಾಗಿದೆ. ಎಟಿಎಂ ಕಾರ್ಡ್‌ ಅದಲು ಬದಲಾಗಿ 20 ನಿಮಿಷದ ಒಳಗೆ 40 ಸಾವಿರ ರೂ. ಹಣ ಡ್ರಾ ಮಾಡಿ ವಂಚಿಸಿರುವ ಘಟನೆ ನಡೆದಿದೆ. ಹಾರ್ನಳ್ಳಿ ಗ್ರಾಮದ ದೇವಪ್ಪ, ಆಯನೂರಿನ ಬ್ಯಾಂಕ್‌ ಒಂದರ ಎಟಿಎಂ ಸೆಂಟರ್‌ನಲ್ಲಿ ಹಣ ಬಿಡಿಸಲು ತೆರಳಿದ್ದಾಗ ಘಟನೆ ಸಂಭವಿಸಿದೆ. ಅಪರಿಚಿತರು ದೇವಪ್ಪ ಅವರಿಗೆ ಹಣ…

Read More

ಜಿಪಂ ತಾ.ಪಂ ಮೀಸಲಾತಿ ಅಧಿಸೂಚನೆ ಮೇಲ್ನೋಟಕ್ಕೆ ಅವೈಜ್ಞಾನಿಕ:ಹರತಾಳು ಹಾಲಪ್ಪ

ರಿಪ್ಪನ್ ಪೇಟೆ :ಜಿಲ್ಲಾ ಪಂಚಾಯತ್ ಹಾಗೂ  ತಾಲೂಕ್  ಪಂಚಾಯತ್ ಚುನಾವಣೆಗೆ ಮೀಸಲಾತಿಯ  ಅಧಿಸೂಚನೆ ಚುನಾವಣಾ ಆಯೋಗದಿಂದ ಹೊರಡಿಸಲಾಗಿದ್ದು. ಜಿಲ್ಲೆಯ ಕೆಲವೊಂದು  ಕ್ಷೇತ್ರದಲ್ಲಿ ಮೀಸಲಾತಿಯ  ಅಧಿಸೂಚನೆಯಲ್ಲಿ ದೋಷ  ಕಂಡು ಬಂದಿದ್ದು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ  ಚರ್ಚಿಸಲಾಗುವುದು ಎಂದು ಸಾಗರ -ಹೊಸನಗರ  ವಿಧಾನಸಭಾ ಕ್ಷೇತ್ರದ ಶಾಸಕ  ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೇಳಿದರು. ಉದಾಹರಣೆಗೆ ಶಿವಮೊಗ್ಗ ಜಿ.ಪಂ ವ್ಯಾಪ್ತಿಯ ಅರಬಿಳಚಿ ಮತ ಕ್ಷೇತ್ರದಲ್ಲಿ 3773 S.T ಮತದಾರರು ಇದ್ದಾರೆ. ಇಲ್ಲಿಗೆ ನೀಡಬೇಕಾದ ಮೀಸಲಾತಿಯನ್ನು 1421…

Read More

Ripponpete | ಕಲಾಹೋಮ ಚಂಡಿಕಾಯಾಗ ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಕುಂಭಾಭಿಷೇಕ

Ripponpete |  ಕಲಾಹೋಮ ಚಂಡಿಕಾಯಾಗ  ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಕುಂಭಾಭಿಷೇಕ ರಿಪ್ಪನ್‌ಪೇಟೆ;- ಇಲ್ಲಿನ ವಿನಾಯಕ ನಗರ ಬಡಾವಣೆಯಲ್ಲಿನ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ 25 ನೇ ವರ್ಷದ ವಾರ್ಷೀಕೋತ್ಸವ  ಮತ್ತು ಮಳೆಗಾಗಿ ಪ್ರಾರ್ಥಿಸಿ ಅಮ್ಮನವರಿಗೆ ಕುಂಭಾಭಿಷೇಕ ಮತ್ತು ವಿಶೇಷ ಪೂಜಾ ಅಲಂಕಾರ ಪೂಜೆ ಜರುಗಿತು. 25 ನೇ ವರ್ಷದ ವಾರ್ಷೀಕೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಲಾಹೋಮ,ಚಂಡಿಕಾ ಯಾಗ,ಕುಂಭಾಭಿಷೇಕ,ನವಗ್ರಹ ಹೋಮ,ಸಾಮೂಹಿಕ ಸತ್ಯನಾರಾಯಣ ಪೂಜೆ ತೀರ್ಥ ಪ್ರಸಾದ ವಿತರಣೆ ನಂತರ ಸಾಮೂಹಿಕ ಆನ್ನಸಂತರ್ಪಣೆ ಜರುಗಿತು. ಅಲಸೆ ಶ್ರೀಚಂಡಿಕೇಶ್ವರಿ ಅಮ್ಮನವರ…

Read More

ರಿಪ್ಪನ್ ಪೇಟೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ ಗಾಂಜಾ ಅಮಲು – ಯುವಕರ ಭವಿಷ್ಯ ತೀವ್ರ ಆತಂಕದಲ್ಲಿ!

ರಿಪ್ಪನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ ಗಾಂಜಾ ಅಮಲು – ಯುವಕರ ಭವಿಷ್ಯ ತೀವ್ರ ಆತಂಕದಲ್ಲಿ! ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ , ಕೋಡೂರು ,ಬಟ್ಟೆಮಲ್ಲಪ್ಪ , ಮಾರುತಿಪುರ , ಗರ್ತಿಕೆರೆ ,ಹುಂಚ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಪೋಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸಮಾಜಕ್ಕೆ ತೀವ್ರ ಆತಂಕ ತಂದಿಟ್ಟಿದೆ. ವಿದ್ಯಾಭ್ಯಾಸ ಹಾಗೂ ಬದುಕಿನ ಆಶಯಗಳನ್ನು ತಿರಸ್ಕರಿಸುತ್ತಾ, ಹಲವಾರು ಯುವಕರು ಗಾಂಜಾ ಸೇವನೆಯೊಂದಿಗೆ ತಮ್ಮ ಬದುಕಿಗೆ ತಾವೇ ಕೊಳ್ಳಿಯಿಟ್ಟುಕೊಳ್ಳುತಿದ್ದಾರೆ. ರಿಪ್ಪನ್ ಪೇಟೆ…

Read More

ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ : ಕೊಲೆ ಎಂಬ ಶಂಕೆ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು | MISSING

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.  ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಅನ್ವರ್ ಕಾಲೋನಿ‌ ನಿವಾಸಿ ಜಮೀರ್(19) ಎರಡು ದಿನಗಳ ಹಿಂದ ಎಲೆಕ್ಟ್ರಿಕಲ್ ಕೆಲಸಕ್ಕೆ ತೆರಳಿದ್ದ ಆದರೆ ಇಂದು ಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.  ಅನ್ವರ್ ಕಾಲೋನಿಯ ಜಮೀರ್ ಮೊನ್ನೆ ಟಿವಿ ರಿಪೇರಿಗಾಗಿ ದೇವನರಸೀಪುರ ಗ್ರಾಮಕ್ಕೆ ಹೋಗಿದ್ದ ನಂತರ ಆತನ ಮೊಬೈಲ್ ಸ್ವಿಚ್ ಆಫ಼್ ಆಗಿತ್ತು. ಆತನ ಮೊಬೈಲ್ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಗಾಬರಿಗೊಂಡು ಹೊಸಮನೆ ಪೊಲೀಸ್ ಠಾಣೆಯಲ್ಲಿ…

Read More

ನಾಪತ್ತೆಯಾಗಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ|Sagara news

ಸಾಗರ : ಶನಿವಾರ ದೇವಸ್ಥಾನಕ್ಕೆ ಹೋಗುತ್ತೇನೆಂದು ತೆರಳಿದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಗರದ ಹೊರಭಾಗದಲ್ಲಿ ಆ.13ರ ಭಾನುವಾರ ನಡೆದಿದೆ. ಮೃತ ಯುವಕನನ್ನು ಶ್ರೀಧರ ನಗರದ ಉಮೇಶ್(24) ಎಂದು ಗುರುತಿಸಲಾಗಿದೆ. ಶನಿವಾರದಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಶ್ರೀಧರ ನಗರದಿಂದ ಶ್ರೀಗಂಧದ ಸಂಕೀರ್ಣದ ಸಮೀಪದ ಆಂಜನೇಯ ದೇವಸ್ಥಾನಕ್ಕೆ ನೀಲಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿ ತೆರಳಿದ್ದ ಉಮೇಶ್ ನಾಪತ್ತೆಯಾದ ಕುರಿತು ಗಾರೆ ಕೆಲಸದ ವೃತ್ತಿಯಲ್ಲಿರುವ ಅವನ ತಂದೆ ವಿನಾಯಕ ಎಂಬವರು ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು….

Read More

ಮನುಷ್ಯ ಸಮಾಜಮುಖಿಯಾಗಿ ಯೋಚಿಸಿ ಬದುಕಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು :ಮಳಲಿ ಶ್ರೀ

ರಿಪ್ಪನ್ ಪೇಟೆ:ನಾನು ನನ್ನದು ಎಂಬುದಕ್ಕಿಂತ ನಾವು ನಮ್ಮದು ಎಂಬ ಮನೋಭಾವ ಇದ್ದಾಗ ಮಾತ್ರ ಬೆಳೆಯಲಿಕ್ಕೆ ಸಾದ್ಯ ಎಂದು ಮಳಲಿಮಠದ .ಡಾ.ಶ್ರೀ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ಬುಧವಾರ ಹೊಸನಗರ ತಾಲೂಕಿನ ಮಸರೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ. ಶ್ರಾವಣ ಮಾಸದ ಅಂಗವಾಗಿ  ಹಮ್ಮಿಕೊಂಡ. ವಿಶೇಷ ರುದ್ರಾಭಿಷೇಕ ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ  ಅವರು . ಮನುಷ್ಯ ಸಮಾಜಮುಖಿಯಾಗಿ ಯೋಚಿಸಿ ಬದುಕಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು. ನಾನು ನನ್ನಿಂದಲೆ ಎಂಬ ಅಹಂಕಾರವನ್ನು ಬಿಡಬೇಕು ಎಂದರು….

Read More

ಮೇ 12ಕ್ಕೆ ನಾಗರಹಳ್ಳಿ ನಾಗೇಂದ್ರಸ್ವಾಮಿಯ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಜಗದ್ಗುರು ಶಂಕರಾಚಾರ್ಯರ ಜಯಂತಿ

ಮೇ 12ಕ್ಕೆ ನಾಗರಹಳ್ಳಿ ನಾಗೇಂದ್ರಸ್ವಾಮಿಯ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಜಗದ್ಗುರು ಶಂಕರಾಚಾರ್ಯರ ಜಯಂತಿ  ರಿಪ್ಪನ್‌ಪೇಟೆ;-ಸಮೀಪದ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ 13 ನೇ ವರ್ಷದ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಕಾರ್ಯಕ್ರಮ ಮತ್ತು ಜಗದ್ಗುರು ಶ್ರೀಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ 12 ರಂದು ಭಾನುವಾರ ಬೆಳಗ್ಗೆ ಶ್ರೀ ನಾಗೇಂದ್ರಸ್ವಾಮಿಗೆ ಪ್ರತಿಷ್ಟಾವರ್ಧಂತಿ ಉತ್ಸವ ಅಂಗವಾಗಿ ಶ್ರೀಸ್ವಾಮಿಗೆ ಮೂಲಮಂತ್ರ ಹೋಮ,ಪಂಚವಿಂಶತಿ ಕಲಶಾಭಿಷೇಕ,ವಿಶೇಷ ಪೂಜೆ ಕೈಂಕರ್ಯಗಳು…

Read More