ಬೆಳಗಾವಿ ಮೂಲಕ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಚ್ಚಿಸಿದ್ದು, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮತ್ತೊಂದೆಡೆ ಸಚಿವ ಈಶ್ವರಪ್ಪ ತಲೆದಂಡಕ್ಕೆ ಒತ್ತಡ ಹೆಚ್ಚಾಗತೊಡಗಿದೆ.
ಇದರ ಬೆನ್ನಲ್ಲೇ ಸಚಿವ ಈಶ್ವರಪ್ಪ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ಸುದ್ದಿಗೋಷ್ಠಿ ಕರೆದಿದ್ದಾರೆ.
ಈ ಹಿನ್ನೆಲೆ ಮೈಸೂರಿನಿಂದ ಶಿವಮೊಗ್ಗಕ್ಕೆ ಈಶ್ವರಪ್ಪ ಹೊರಟಿದ್ದು, ಮಧ್ಯಾಹ್ನ 12.30ಕ್ಕೆ ಆಗಮಿಸುವ ಸಾಧ್ಯತೆಯಿದೆ ಬಳಿಕ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಸಂತೋಷ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಂತೋಷ್ ಸಾವಿನ ಸುದ್ದಿ ಬಂದ ಬೆನ್ನಲ್ಲೇ ನಿನ್ನೆ (ಮಂಗಳವಾರ) ಈಶ್ವರಪ್ಪ ಹೇಳಿದ್ದರು. ಅತ್ತ ಸಂತೋಷ ಸಾವಿಗೆ ಈಶ್ವರಪ್ಪ ಕಾರಣ . ಅವನ್ನು ಬಂಧಿಸೋವರೆಗೂ ಅಂತ್ಯಕ್ರಿಯೆ ಮಾಡಲು ಎಂದು ಮೃತನ ಕುಟುಂಬ ಪಟ್ಟು ಹಿಡಿದೆ.
ಸಂತೋಷ್ ಸಾವಿಗೆ ನ್ಯಾಯ ಕೊಡಿ, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಕೂಡಲೇ ಈಶ್ವರಪ್ಪ ರಾಜೀನಾಮೆ ಪಡೆಯಬೇಕು ಎಂದು ವಿಪಕ್ಷ ಆಗ್ರಹಿಸಿದೆ ಇಷ್ಟಲ್ಲಾ ಬೆಳವಣಿಗೆ ನಡುವೆ ಈಶ್ವರಪ್ಪ ಶಿವಮೊಗ್ಗ ಸುದ್ದಿಗೋಷ್ಠಿ ಭಾರೀ ಕುತುಹಲ ಮೂಡಿಸಿದೆ. ಸುದ್ದಿಗೋಷ್ಠಿಯಲ್ಲೇ ರಾಜೀನಾಮೆ ಘೋಷಿಸುತ್ತಾರಾ..? ಎಂಬ ಪ್ರಶ್ನೆಯೂ ಮೂಡಿದೆ.