ಪಿಂಚಣಿ ಹಣದಲ್ಲಿ ಗಂಜಿ ಕುಡಿದು ಬದುಕುತ್ತೇನೆಯೇ ವಿನಃ ಭ್ರಷ್ಟಾಚಾರ ಮಾಡಲ್ಲ : ಹಾಲಿ ಶಾಸಕರಿಗೆ ಮಾಜಿ ಶಾಸಕರ ಟಾಂಗ್
ಸಾಗರ: ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪಿಂಚಣಿಯಲ್ಲಿ ಬದುಕುತ್ತಿದ್ದಾರೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ನನ್ನನ್ನು ಟೀಕಿಸಿದ್ದಾರೆ. ಅವರು ಹೇಳಿದಂತೆ ನಾನು ಪಿಂಚಣಿಯಲ್ಲಿ ಗಂಜಿ ಕುಡಿದು ಬದುಕುತ್ತೇನೆಯೇ ವಿನಃ ಭ್ರಷ್ಟಾಚಾರ ಮಾಡಿಲ್ಲ. ಭ್ರಷ್ಟಾಚಾರದ ಹಣದಲ್ಲಿ ಬದುಕುತ್ತಿಲ್ಲ. ಇವತ್ತಿಗೂ ಜನರಿಗೆ ಸಹಾಯ ಮಾಡುತ್ತ ಬದುಕುತ್ತಿದ್ದೇನೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಶಾಸಕ ಹಾಲಪ್ಪ ಅವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕ…