ಮಕ್ಕಳಲ್ಲಿ ಹುದುಗಿರುವ 64 ವಿದ್ಯೆಗಳನ್ನು ಹೊರತೆಗೆಯುವ ಕೆಲಸ ಹಳ್ಳಿ ಮಕ್ಕಳ ರಂಗ ಹಬ್ಬದಂತಹ ಶಿಬಿರಗಳಿಂದ ಮಾತ್ರ ಸಾಧ್ಯ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.
ಗುರುವಾರ ರಿಪ್ಪನ್ ಪೇಟೆಯ ಮಸರೂರು ದಿ. ಎಂ.ಕೆ .ರೇಣುಕಪ್ಪ ಗೌಡ ಪ್ರತಿಷ್ಠಾನ ಹಾಗೂ ಮಲೆನಾಡ ಕಲಾತಂಡದವರು ಏರ್ಪಡಿಸಿದ್ದ ಹಳ್ಳಿ ಮಕ್ಕಳ ರಂಗ ಹಬ್ಬದ ಶಿಬಿರದ ನೈತಿಕ ಶಿಕ್ಷಣ ಹಿನ್ನೆಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಶ್ರದ್ಧೆ , ನಂಬಿಕೆ, ಪ್ರೀತಿ, ನಾನು, ನನ್ನದು, ಇವು 5 ನಮ್ಮಲ್ಲಿ ಇದ್ದರೆ ಒಳಗಿನ ಪ್ರತಿಭೆ ತನ್ನಿಂದ ತಾನೆ ಹೊರಬರುತ್ತದೆ. ಸಾಧಿಸುವ ಛಲ ಇದ್ದರೆ ಸಾಧನೆ ಬಹಳ ಸುಲಭ ಜಾನಪದ ಸೊಗಡು ಇಂದು ಮರೆಯಾಗುತ್ತಿದೆ ರಂಗಭೂಮಿಯ ಇಂತಹ ಶಿಬಿರಗಳು ಹಾಗೂ ಕಾರ್ಯಕ್ರಮಗಳಿಂದ ಜಾನಪದ ಜೀವಂತವಾಗಿದೆ. ಎಲ್ಲರನ್ನೂ ಪ್ರೀತಿಸುವ ಸಂಸ್ಕೃತಿ ನಮ್ಮದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೇ ಅಶ್ವಿನಿ ರವಿಶಂಕರ್, ಎಂ.ಡಿ ಇಂದಿರಮ್ಮ, ಆರ್.ಡಿ.ಶೀಲಾ, ರಂಗಕರ್ಮಿ ನಿರ್ದೇಶಕ ಗಣೇಶ್ ಆರ್ ಕೆಂಚನಾಲ. ಇನ್ನು ಮುಂತಾದವರು ಹಾಜರಿದ್ದರು.