ಸಾಗರ-ಪಣಜಿ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತಿದ್ದ ಇಬ್ಬರನ್ನು ವಶಕ್ಕೆ ಪಡೆದು ₹ 1.27000 ಸಾವಿರ ಮೌಲ್ಯದ ವಿವಿಧ ಬ್ರಾಂಡ್ ನ ಗೋವಾ ಮದ್ಯ ವನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಕಾರವಾರ ತಾಲೂಕಿನ ಮಾಜಾಳಿಯ ಚಕ್ ಪೋಸ್ಟ್ ನಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ನಾಗರಾಜ (35), ಸಾಗರ್ (25) ಬಂಧಿತರಾಗಿದ್ದು ,ಗೋವಾದಿಂದ ಶಿವಮೊಗ್ಗ ಕ್ಕೆ ಬ್ಯಾಗ್ ನಲ್ಲಿ ವಿವಿಧ ಬ್ರಾಂಡ್ ನ ಮದ್ಯವನ್ನು ತುಂಬಿಕೊಂಡು ಬಸ್ ನಲ್ಲಿ ತೆರಳುತಿದ್ದರು. ಈವೇಳೆ ತಪಾಸಣೆ ನಡೆಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದು ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.