Headlines

ಸಾಲಬಾಧೆಗೆ ಹೆದರಿ ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ :

ಶಿವಮೊಗ್ಗ : ಬ್ಲೇಡ್ ನಿಂದ ಕೈಕೊಯ್ದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ನೆಹರೂ ರಸ್ತೆಯ ಖಾಸಗಿ ಲಾಡ್ಜ್ ನಲ್ಲಿ  ಈ ಘಟನೆ ನಡೆದಿದೆ.

 ಈ ಯುವಕನ ಸಾವಿನ ಆಯ್ಕೆ ಬಹುತೇಕ ಅಚ್ಚರಿ ಮೂಡಿಸಿದೆ. ಕೈಯ್ಯನ ಬ್ಲೇಡ್ ನಿಂದ ಕೊಯ್ದುಕೊಂಡ ಕಾರಣ ಟಾಯ್ಲೆಟ್ ಎಲ್ಲಾ ರಕ್ತಸಿಕ್ತವಾಗಿದೆ. ಸಾಲಬಾಧೆಯೇ ಆತನ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.

ಮೃತ ವ್ಯಕ್ತಿಯು ಬೆಂಗಳೂರು ನಿವಾಸಿ ನಾಗೇಂದ್ರ ಎಂದು ತಿಳಿದುಬಂದಿದೆ.


 ಏ. 28 ರ ಬೆಳಿಗ್ಗೆ 5-30 ಕ್ಕೆ ಲಾಡ್ಜ್ ನಲ್ಲಿ ಚೆಕ್ ಇನ್ ಆದ ನಾಗೇಂದ್ರ ಅಂದು ಸಂಜೆಯೇ ಬ್ಲೇಡ್ ನಿಂದ ಕೈ ಕೊಯ್ದುಕೊಂಡಿದ್ದಾನೆ. ಅಂದು ರಾತ್ರಿ ಯಾರಿಗೂ ಏನು ಈ ವಿಷಯ ತಿಳಿದಿಲ್ಲ. ಆದರೆ ಏ.28 ರ ಮಧ್ಯಾಹ್ನ ಹೊರಗಡೆಯಿಂದ ಊಟ ತಂದು ಮಾಡಿದ್ದಾನೆ.

ಇಂದು ಬೆಳಿಗ್ಗಿನ ಜಾವ ಲಾಡ್ಜ್ ನವರು ಎಲ್ಲರನ್ನೂ ಬಿಸಿನೀರಿಗಾಗಿ ಎಬ್ಬಿಸಿದ್ದಾರೆ. ಆದರೆ ನಾಗೇಂದ್ರ ಎದ್ದಿಲ್ಲ. ನಂತರ ನಿಧಾನವಾಗಿ ಈ ರೂಮಿನಿಂದ ಕೆಟ್ಟ ವಾಸನೆ ಬರಲು ಆರಂಭವಾಗಿದೆ. ಆತನ ಆತ್ಮಹತ್ಯೆಯ ಕುರಿತಂತೆ ಲಾಡ್ಜ್ ನವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಅಸ್ವಾಭಾವಿಕ ಮರಣ ಪ್ರಕರಣವನ್ನ ದಾಖಲಿಸಲಾಗಿದೆ. 

ಶವವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಗೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *