Ripponpete | ಕಲಾಹೋಮ ಚಂಡಿಕಾಯಾಗ ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಕುಂಭಾಭಿಷೇಕ
ರಿಪ್ಪನ್‌ಪೇಟೆ;- ಇಲ್ಲಿನ ವಿನಾಯಕ ನಗರ ಬಡಾವಣೆಯಲ್ಲಿನ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ 25 ನೇ ವರ್ಷದ ವಾರ್ಷೀಕೋತ್ಸವ ಮತ್ತು ಮಳೆಗಾಗಿ ಪ್ರಾರ್ಥಿಸಿ ಅಮ್ಮನವರಿಗೆ ಕುಂಭಾಭಿಷೇಕ ಮತ್ತು ವಿಶೇಷ ಪೂಜಾ ಅಲಂಕಾರ ಪೂಜೆ ಜರುಗಿತು.
25 ನೇ ವರ್ಷದ ವಾರ್ಷೀಕೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಲಾಹೋಮ,ಚಂಡಿಕಾ ಯಾಗ,ಕುಂಭಾಭಿಷೇಕ,ನವಗ್ರಹ ಹೋಮ,ಸಾಮೂಹಿಕ ಸತ್ಯನಾರಾಯಣ ಪೂಜೆ ತೀರ್ಥ ಪ್ರಸಾದ ವಿತರಣೆ ನಂತರ ಸಾಮೂಹಿಕ ಆನ್ನಸಂತರ್ಪಣೆ ಜರುಗಿತು.
ಅಲಸೆ ಶ್ರೀಚಂಡಿಕೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ – ಶ್ರದ್ದಾ ಭಕ್ತಿಯಿಂದ ಸಂಭ್ರಮದೊಂದಿಗೆ ಜರುಗಿದ ವರ್ಧಂತಿ ಮಹೋತ್ಸವ
ರಿಪ್ಪನ್‌ಪೇಟೆ;-ಸಮೀಪದ ಇತಿಹಾಸ ಪ್ರಸಿದ್ದ ಶ್ರೀಶಂಕರೇಶ್ವರ ಮತ್ತು ಶ್ರೀಚಂಡಿಕೇಶ್ವರಿ ಅಮ್ಮನವರ ದೇವಸ್ಥಾನ ಶ್ರದ್ದಾ ಭಕ್ತಿಯೊಂದಿಗೆ ವಾರ್ಷೀಕ ವರ್ಧಂತಿ’ ಮಹೋತ್ಸವ ಕೋಡೂರು ವೇ.ವಿದ್ವಾನ್ ಅನಂತಮೂರ್ತಿ ಭಟ್ ಇವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯವು ಸಂಪನ್ನಗೊಂಡಿತು.
ಲೋಕಕಲ್ಯಾರ್ಥವಾಗಿ ಬೆಳಗ್ಗೆ ಗಣಪತಿ ಪ್ರಾರ್ಥನೆ ಹಾಗೂ ಶ್ರೀರುದ್ರಹೋಮ,ಶ್ರೀದುರ್ಗಾ ಹೋಮ ವಿಶೇಷಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ಶ್ರೀ ಕ್ಷೇತ್ರ ಅಲಸೆ ಶ್ರೀಚಂಡಿಕೇಶ್ವರಿ ನಾಗೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ “ನೂತನ ಪೌರಾಣಿಕ ಪ್ರಸಂಗ’’ ಕಾಲಮಿತಿ ಯಕ್ಷಗಾನ ಪ್ರದರ್ಶನ ಜರುಗಿತು.
ಜಿಲ್ಲೆ ಹೊರಜಿಲ್ಲೆಯಿಂದ ಸಹಸ್ರಾರು ಭಕ್ತರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.