ಮೇ 12ಕ್ಕೆ ನಾಗರಹಳ್ಳಿ ನಾಗೇಂದ್ರಸ್ವಾಮಿಯ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಜಗದ್ಗುರು ಶಂಕರಾಚಾರ್ಯರ ಜಯಂತಿ
ರಿಪ್ಪನ್‌ಪೇಟೆ;-ಸಮೀಪದ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ 13 ನೇ ವರ್ಷದ ಪ್ರತಿಷ್ಟಾಪನಾ ವರ್ಧಂತ್ಯುತ್ಸವ ಕಾರ್ಯಕ್ರಮ ಮತ್ತು ಜಗದ್ಗುರು ಶ್ರೀಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 12 ರಂದು ಭಾನುವಾರ ಬೆಳಗ್ಗೆ ಶ್ರೀ ನಾಗೇಂದ್ರಸ್ವಾಮಿಗೆ ಪ್ರತಿಷ್ಟಾವರ್ಧಂತಿ ಉತ್ಸವ ಅಂಗವಾಗಿ ಶ್ರೀಸ್ವಾಮಿಗೆ ಮೂಲಮಂತ್ರ ಹೋಮ,ಪಂಚವಿಂಶತಿ ಕಲಶಾಭಿಷೇಕ,ವಿಶೇಷ ಪೂಜೆ ಕೈಂಕರ್ಯಗಳು ಜರುಗಲಿವೆ.
ಜಗದ್ಗುರು ಶ್ರೀಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ನಂತರ ಸಾಮೂಹಿಕ ಆನ್ನಸಂತರ್ಪಣೆ ನಡೆಯಲಿದ್ದು ಸಕಲ ಭಕ್ತಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನಾಶೀರ್ವಾದ ಪಡೆಯುವಂತೆ ದೇವಸ್ಥಾನ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.
ಮೇ 14ಕ್ಕೆ“ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ’’ಗುರು-ವಿರಕ್ತರಿಂದ ಧರ್ಮಸಮಾರಂಭ’’
ರಿಪ್ಪನ್‌ಪೇಟೆ;-ಇಲ್ಲಿಗೆ ಸಮೀಪದ ಬೆಳಕೋಡು ಗ್ರಾಮದ ಬಿ.ಎಲ್.ಹಾಲಸ್ವಾಮಿಗೌಡರ ಅಮೃತ ವರ್ಷಾಚಣೆಯ ಅಂಗವಾಗಿ ಮೇ.14 ರಂದು ಬೆಳಗ್ಗೆ 9 ಗಂಟೆಗೆ ಶ್ರೀಶೈಲ ಶ್ರೀಮದ್‌ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ 1008 ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾರುಗಳ ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇಷ್ಟಲಿಂಗ ಮಹಾಪೂಜೆಯ ನಂತರ ಗುರು-ವಿರಕ್ತ ಜಗದ್ಗುರುಗಳ ದಿವ್ಯಸಾನಿಧ್ಯದಲ್ಲಿ ಧರ್ಮಜಾಗೃತಿ ಸಮಾರಂಭವು 11 ಗಂಟೆಗೆ ಜರುಗಲಿದ್ದು ಈ ಧರ್ಮಸಮಾರಂಭದ ದಿವ್ಯಸಾನಿಧ್ಯವನ್ನು ಶ್ರೀಶೈ¯ ಶ್ರೀಮದ್‌ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ 1008 ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾರು ಹಾಗೂ ಆನಂದಪುರ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠದ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡುವರು.
ಈ ಧರ್ಮಜಾಗೃತಿ ಸಭೆಯಲ್ಲಿ ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ,ತೊಗರ್ಸಿ ಕ್ಯಾಸನೂರು ಹಿರೇಮಠದ ಷ.ಬ್ರ,ಮಹಾಂತ ದೇಶಿಕೇಂದ್ರ ಸ್ವಾಮಿಗಳು,ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ,ಉಪಸ್ಥಿತರಿರುವರು ಜಗದ್ಗುರುಗಳ ಇಷ್ಟ ಲಿಂಗ ಮಹಾಪೂಜೆ ಮತ್ತು ಧರ್ಮಜಾಗೃತಿ ಸಮಾರಂಭದಲ್ಲಿ ಭಾಗವಹಿಸಿ ದರ್ಶನಾಶೀರ್ವಾದ ಪಡೆಯುವಂತೆ ಕೋರಿದ್ದಾರೆ.