ಶಿವಮೊಗ್ಗದ ನಡುರಸ್ತೆಯಲ್ಲೇ ಜೋಡಿ ಕೊಲೆ – ಮಾರಕಾಸ್ತ್ರಗಳಿಂದ ಕೊಚ್ಚಿ,ಕಲ್ಲು ಎತ್ತಿಹಾಕಿ ಕೊಲೆ
ಲೋಕಸಭಾ ಚುನಾವಣೆಯ ಕಾವು ತಣ್ಣಗಾಗುತ್ತಿದ್ದಂತೆ ಶಿವಮೊಗ್ಗದ ಪಾತಕ ಲೋಕ ಮತ್ತೆ ಹೆಡೆಬಿಚ್ಚಿದೆ. ಇಂದು ಶಿವಮೊಗ್ಗದ ಜನನಿಬಿಡ ರಸ್ತೆಯಲ್ಲಿ ರೌಡಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯಾದರೆ ಹತ್ಯೆಮಾಡಲು ಬಂದ ಗ್ಯಾಂಗಿನ ಇಬ್ಬರು ನಡು ರಸ್ತೆಯಲ್ಲೆ ಹೆಣವಾಗಿ ಹೋಗಿದ್ದಾರೆ.!
ಹೌದು ಇಬ್ಬರ ಹತ್ಯೆಯಾದ ಸ್ಥಳವನ್ನು ನೋಡಿದರೆ ಇದೊಂದು ಡೆಂಜರಸ್ ಅಟ್ಯಾಕ್ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.!?
ಶೊಯೆಬ್ ಹಾಗೂ ಗೌಸ್ ಹತ್ಯೆಯಾದ ವ್ಯಕ್ತಿಗಳಾಗಿದ್ದಾರೆ.
ಹಂತಕರು ಯಾವ ಮಟ್ಟಕ್ಕೆ ರಿವೆಂಜ್ ತಿರಿಸಿಕೊಂಡಿದ್ದಾರೆ ಎಂದರೆ ಇಬ್ಬರ ಮೇಲೆ ಆಟ್ಯಾಕ್ ಮಾಡಿದ ನಂತರದಲ್ಲಿ ನೆಲಕ್ಕುರುಳಿದ ಇಬ್ಬರ ಮೇಲು ಕಲ್ಲು ಚಪ್ಪಡಿ ಎತ್ತಿಹಾಕಿದ್ದಾರೆ.!!
ಎಂಕೆಕೆ ರೋಡಿ ರೌಡಿ ಯಾಸಿನ್ ಖುರೆಸಿ ಮತ್ತು ಕೆಆರ್ ಪುರಂನ ರೌಡಿ ಅದಿಲ್ ಇಬ್ಬರ ನಡುವಿನ ಹಳೆ ವೈಷಮ್ಯದ ಹಿನ್ನಲೆಯಲ್ಲಿ ಇಂದು ಯಾಸಿನ್ ಖುರೆಸಿಯಾ ಮೇಲೆ ಅಟ್ಯಾಕ್ ಮಾಡಲು ಹೊಂಚು ಹಾಕಿ ಕುಳಿತಿದ್ದ ಹಂತಕರು ಲಶ್ಕರ್ ಮೊಹಲ್ಲಕೆ ಬಂದಿದ್ದಾರೆ ಅಲ್ಲಿಗೆ ಬಂದ ಯಾಸಿನ್ ಮೇಲೆ ಹಂತಕರು ಅಟ್ಯಾಕ್ ಮಾಡಲು ಮುಂದಾಗಿದ್ದಾರೆ ಅಷ್ಟೋತ್ತಿಗಾಗಲೆ ಅಲ್ಲೆ ಇದ್ದ ಯಾಸಿನ್ ಸಹಚರರು ಎದುರಾಳಿಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ ಈ ಅಟ್ಯಾಕ್ ನಲ್ಲಿ ಹತ್ಯೆಗೆ ಬಂದ ಹಂತಕರೆ ಹೆಣವಾಗಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಧರ್ಭದಲ್ಲಿ ಯಾಸಿನ್ ಖುರೇಷಿ ಮೇಲು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ತನಿಖೆ ಕೈಗೊಂಡಿದ್ದಾರೆ.